ಭಾರತ್ ಜೋಡೊ ಅಂತ ಕಾಂಗ್ರೆಸ್ ಹೇಳುತ್ತಿರುವುದೇ ಅರ್ಥಹೀನ, ಜೋಡಿಸುವುದು ಅವರಿಗೆ ಗೊತ್ತೇ ಇಲ್ಲ: ಆರ್ ಅಶೋಕ, ಸಚಿವರು

ಭಾರತ್ ಜೋಡೊ ಅಂತ ಕಾಂಗ್ರೆಸ್ ಹೇಳುತ್ತಿರುವುದೇ ಅರ್ಥಹೀನ, ಜೋಡಿಸುವುದು ಅವರಿಗೆ ಗೊತ್ತೇ ಇಲ್ಲ: ಆರ್ ಅಶೋಕ, ಸಚಿವರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 27, 2022 | 2:57 PM

ಕಾಂಗ್ರೆಸ್ ಪಕ್ಷದ ನೀತಿಗಳಿಂದಾಗೇ ಕಾಶ್ಮೀರ ಮತ್ತು ಪಾಕಿಸ್ತಾನ ಭಾರತದಿಂದ ಬೇರೆಯಾಗಿವೆ ಎಂದು ಅಶೋಕ ಹೇಳಿದರು.

ಕೋಲಾರ: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ ನಡೆಸಿದ ಭಾರತ ಜೋಡೋ ಯಾತ್ರೆಯನ್ನು ಬಿಜೆಪಿ ಹಿರಿಯ ನಾಯಕ ಮತ್ತು ಸಚಿವ ಆರ್ ಆಶೋಕ (R Ashoka) ಗೇಲಿ ಮಾಡಿದರು. ರಾಹುಲ್ ಎಷ್ಟೇ ಪ್ರಯತ್ನಿಸಿದರೂ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ (DK Shivakumar) ನಾನೊಂದು ತೀರ ನೀನೊಂದು ತೀರ ಅನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಅವರು ಕೋಲಾರದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಲೇವಡಿ ಮಾಡಿದರು. ಭಾರತ ಜೋಡೋ ಅನ್ನುವ ಘೋಷವಾಕ್ಯವೇ ಅರ್ಥಹೀನವಾದದ್ದು ಯಾಕೆಂದರೆ ಕಾಂಗ್ರೆಸ್ ಗೆ ತೋಡೋ (ಮುರಿಯುವುದು) ಮಾತ್ರ ಗೊತ್ತಿದೆ, ಅದರ ನೀತಿಗಳಿಂದಾಗೇ ಕಾಶ್ಮೀರ ಮತ್ತು ಪಾಕಿಸ್ತಾನ ಭಾರತದಿಂದ ಬೇರೆಯಾಗಿವೆ ಎಂದು ಅಶೋಕ ಹೇಳಿದರು.