DJ ಹಳ್ಳಿ ಸ್ಟೇಷನ್​ಗೆ ಬೆಂಕಿ: ಪ್ರಕರಣದ ರೂವಾರಿ ಕಾಂಗ್ರೆಸ್ ಮುಖಂಡನ ಸಂಪೂರ್ಣ ಜಾತಕ

| Updated By: ಸಾಧು ಶ್ರೀನಾಥ್​

Updated on: Aug 14, 2020 | 11:33 AM

ಬೆಂಗಳೂರು: ನಗರದ ಡಿಜೆ ಹಳ್ಳಿ ವ್ಯಾಪ್ತಿಯಲ್ಲಾದ ಗಲಾಟೆ ಅನೇಕ ತಿರುವುಗಳನ್ನು ಪಡೆಯುತ್ತಿದೆ. ಸದ್ಯ ಈಗ DJ ಹಳ್ಳಿ ಸ್ಟೇಷನ್​ಗೆ ಬೆಂಕಿ ಹಚ್ಚಲು ಕಾಂಗ್ರೆಸ್ ಮುಖಂಡನಿಂದ ಪ್ರಚೋದನೆ ನಡೆದಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯನಾಗಿದ್ದ ಆರೋಪಿ ಫೈರೋಜ್ ಪಾಷಾ DJ ಹಳ್ಳಿ ಪೊಲೀಸ್ ಸ್ಟೇಷನ್​ಗೆ ಬೆಂಕಿ ಹಚ್ಚಲು ಪ್ರಚೋದನೆ ಮಾಡಿದ್ದನಂತೆ. ಮನೆಯಲ್ಲಿ ಕುಳಿತುಕೊಂಡು ವಾಟ್ಸ್ ಅಪ್ ಮೂಲಕ ಗಲಭೆಗೆ ರೂಪುರೇಷೆ ಸಿದ್ಧಪಡಿಸಿದ್ದ. ವಾಟ್ಸ್ ಅಪ್ ಕಾಲ್ ಮಾಡಿ ಎಲ್ಲರಿಗೂ ಪ್ರಚೋದನೆ ಮಾಡಿದ್ದ. ಗಣ್ಯರ ಜೊತೆ ಫೋಟೋಗಳಿಗೆ […]

DJ ಹಳ್ಳಿ ಸ್ಟೇಷನ್​ಗೆ ಬೆಂಕಿ: ಪ್ರಕರಣದ ರೂವಾರಿ ಕಾಂಗ್ರೆಸ್ ಮುಖಂಡನ ಸಂಪೂರ್ಣ ಜಾತಕ
Follow us on

ಬೆಂಗಳೂರು: ನಗರದ ಡಿಜೆ ಹಳ್ಳಿ ವ್ಯಾಪ್ತಿಯಲ್ಲಾದ ಗಲಾಟೆ ಅನೇಕ ತಿರುವುಗಳನ್ನು ಪಡೆಯುತ್ತಿದೆ. ಸದ್ಯ ಈಗ DJ ಹಳ್ಳಿ ಸ್ಟೇಷನ್​ಗೆ ಬೆಂಕಿ ಹಚ್ಚಲು ಕಾಂಗ್ರೆಸ್ ಮುಖಂಡನಿಂದ ಪ್ರಚೋದನೆ ನಡೆದಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯನಾಗಿದ್ದ ಆರೋಪಿ ಫೈರೋಜ್ ಪಾಷಾ DJ ಹಳ್ಳಿ ಪೊಲೀಸ್ ಸ್ಟೇಷನ್​ಗೆ ಬೆಂಕಿ ಹಚ್ಚಲು ಪ್ರಚೋದನೆ ಮಾಡಿದ್ದನಂತೆ. ಮನೆಯಲ್ಲಿ ಕುಳಿತುಕೊಂಡು ವಾಟ್ಸ್ ಅಪ್ ಮೂಲಕ ಗಲಭೆಗೆ ರೂಪುರೇಷೆ ಸಿದ್ಧಪಡಿಸಿದ್ದ. ವಾಟ್ಸ್ ಅಪ್ ಕಾಲ್ ಮಾಡಿ ಎಲ್ಲರಿಗೂ ಪ್ರಚೋದನೆ ಮಾಡಿದ್ದ.

ಗಣ್ಯರ ಜೊತೆ ಫೋಟೋಗಳಿಗೆ ಪೋಸ್
ಗಲಭೆಯಲ್ಲಿ ನೇರವಾಗಿ ಭಾಗಿಯಾಗದಿದ್ದರೂ ಷಡ್ಯಂತ್ರ ರೂಪಿಸುವಲ್ಲಿ ಫೈರೋಜ್ ಪಾಷಾ ಪ್ರಮುಖ ಪಾತ್ರ ವಹಿಸಿದ್ದಾನೆ. ಮುಜಾಯಿದ್ ಪಾಷಾ ಬಂಧನದ ವೇಳೆ ಫೈರೋಜ್ ವಾಟ್ಸ್ ಅಪ್ ಕಾಲ್ ಮಾಡಿರೋದು ಬೆಳಕಿಗೆ ಬಂದಿದೆ. ತಾಂತ್ರಿಕ ವಿಭಾಗದಿಂದ ಪೊಲೀಸರ ತಂಡ ಫೈರೋಜ್ ಮೊಬೈಲ್ ಕಾಲ್ ಪರಿಶೀಲನೆ ನಡೆಸಿದಾಗ ಈತ ಸಾಕಷ್ಟು ಮಂದಿಗೆ ಕರೆ ಮಾಡಿರೋದು ತಿಳಿದು ಬಂದಿದೆ.

ಕಾಂಗ್ರೆಸ್​ನ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರ ಜೊತೆ ಗುರುತಿಸಿಕೊಂಡಿದ್ದ ಫೈರೋಜ್ ಪಾಷಾ, ಕೊರೊನಾ ವಾರಿಯರ್ ಆಗಿ ಸಿವಿಲ್ ಢಿಪೆನ್ಸ್​ನಲ್ಲೂ ಆಕ್ಟಿವ್ ಆಗಿದ್ದ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜೊತೆಯೂ ಫೋಟೋ ತೆಗೆಸಿಕೊಂಡಿದ್ದಾನೆ. ಹೆಬ್ಬಾಳ ಶಾಸಕ ಬೈರತಿ ಸುರೇಶ್, ಮಾಜಿ ಡಿಸಿಎಂ ಜಿ.ಪರಮೇಶ್ವರ್, ಜಿ.ಟಿ.ದೇವೇಗೌಡ ಜೊತೆ ಪೋಸ್ ಕೊಟ್ಟಿರುವ ಫೋಟೋಗಳನ್ನು ತನ್ನ ಫೇಸ್​ಬುಕ್​ನಲ್ಲಿ ಅಪ್ಲೋಡ್ ಮಾಡಿದ್ದಾನೆ.