ಲಾರಿ ಡಿಕ್ಕಿ, ಸ್ಥಳದಲ್ಲಿಯೇ ಹಾರಿಹೋಯ್ತು ಮೂಕ ಜೀವಿಗಳ ಪ್ರಾಣಪಕ್ಷಿ..

ದಾವಣಗೆರೆ:ಅಪರಿಚಿತ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎರಡು ಹಸು ಹಾಗೂ ಒಂದು ಕರು ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಗ್ರಾಮದ ದೇವಿಗೆ ಬಿಟ್ಟಿದ್ದ ಪ್ರಾಣಿಗಳು ಇಹಲೋಕ ತ್ಯಜಿಸಿದವು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ಈ ಘಟನೆ ಸಂಭವಿಸಿದ್ದು, ಅಪರಿಚಿತ ಲಾರಿ ಎರಡು ಹಸು ಹಾಗೂ ಒಂದು ಕರುವಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಮೂರು ಮೂಕಪ್ರಾಣಿಗಳ ಪ್ರಾಣಪಕ್ಷಿ ಸ್ಥಳದಲ್ಲಿಯೇ ಹಾರಿಹೋಗಿದೆ. ಈ ಘಟನೆ ಕಂಡ ಸ್ಥಳೀಯರು ಲಾರಿ ಚಾಲಕನ ವಿರುದ್ಧ ಆಕ್ರೋಶ ಹೊರ […]

ಲಾರಿ ಡಿಕ್ಕಿ, ಸ್ಥಳದಲ್ಲಿಯೇ ಹಾರಿಹೋಯ್ತು ಮೂಕ ಜೀವಿಗಳ ಪ್ರಾಣಪಕ್ಷಿ..
Follow us
ಸಾಧು ಶ್ರೀನಾಥ್​
|

Updated on: Aug 14, 2020 | 10:50 AM

ದಾವಣಗೆರೆ:ಅಪರಿಚಿತ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎರಡು ಹಸು ಹಾಗೂ ಒಂದು ಕರು ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

ಗ್ರಾಮದ ದೇವಿಗೆ ಬಿಟ್ಟಿದ್ದ ಪ್ರಾಣಿಗಳು ಇಹಲೋಕ ತ್ಯಜಿಸಿದವು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ಈ ಘಟನೆ ಸಂಭವಿಸಿದ್ದು, ಅಪರಿಚಿತ ಲಾರಿ ಎರಡು ಹಸು ಹಾಗೂ ಒಂದು ಕರುವಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಮೂರು ಮೂಕಪ್ರಾಣಿಗಳ ಪ್ರಾಣಪಕ್ಷಿ ಸ್ಥಳದಲ್ಲಿಯೇ ಹಾರಿಹೋಗಿದೆ. ಈ ಘಟನೆ ಕಂಡ ಸ್ಥಳೀಯರು ಲಾರಿ ಚಾಲಕನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸಾಂಪ್ರದಾಯಿಕ ವಿಧಿವಿಧಾನಗಳಂತೆ ಮೂಕ ಜೀವಿಗಳ ಅಂತ್ಯಸಂಸ್ಕಾರ ಮಾಡಿದ್ದಾರೆ.

ಮೃತಪಟ್ಟ ಮೂಕ ಜೀವಿಗಳು ಸಂತೆಬೆನ್ನೂರಿನ ಗ್ರಾಮದ ದೇವಿಗೆ ಬಿಟ್ಟಿದ್ದ ಪ್ರಾಣಿಗಳೆಂದು ತಿಳಿದುಬಂದಿದೆ. ಸದ್ಯ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.