ಬಸವ ತತ್ವದಲ್ಲಿ ನಂಬಿಕೆ ಇಟ್ಟೋನು ನಾನು, ಬಿಜೆಪಿ ಅವ್ರ ಮನೇಲೂ ಊಟ ಮಾಡ್ತೀನಿ, ಜೆಡಿಎಸ್​ ಜೊತೆಗೂ ಚೆನ್ನಾಗಿದ್ದೀನಿ: ಸಿ.ಎಂ.ಇಬ್ರಾಹಿಂ

CM Ibrahim: ನಾನು ಕುಮಾರಸ್ವಾಮಿ, ದೇವೆಗೌಡ ಜೊತೆಗೂ ಚೆನ್ನಾಗಿಯೇ ಇದ್ದೇನೆ. ಅಷ್ಟೇ ಏಕೆ, ಅಡ್ವಾಣಿ ಮನೆಯಲ್ಲೂ ತಿಂಡಿ ತಿಂದಿದ್ದೆ. ಬಿಜೆಪಿ ಪಕ್ಷದ ನಾಯಕರು ಸಹ ನನ್ನ ಜೊತೆ ಚೆನ್ನಾಗಿದ್ದಾರೆ. ಹಾಗಂತ ಕಾಂಗ್ರೆಸ್ ಬಿಡ್ತೀನಿ ಅಂತಲ್ಲ. ಬಸವ ತತ್ವದಲ್ಲಿ ನಂಬಿಕೆ ಇರೋನು ನಾನು.

ಬಸವ ತತ್ವದಲ್ಲಿ ನಂಬಿಕೆ ಇಟ್ಟೋನು ನಾನು, ಬಿಜೆಪಿ ಅವ್ರ ಮನೇಲೂ ಊಟ ಮಾಡ್ತೀನಿ, ಜೆಡಿಎಸ್​ ಜೊತೆಗೂ ಚೆನ್ನಾಗಿದ್ದೀನಿ: ಸಿ.ಎಂ.ಇಬ್ರಾಹಿಂ
ಸಿ.ಎಂ.ಇಬ್ರಾಹಿಂ
Follow us
Skanda
|

Updated on:Mar 05, 2021 | 11:15 AM

ಬೆಂಗಳೂರು: ಸದ್ಯ ಕಾಂಗ್ರೆಸ್ ಪಕ್ಷದಲ್ಲಿರುವ ಸಿ.ಎಂ.ಇಬ್ರಾಹಿಂ ಜೆಡಿಎಸ್​ ಬಾಗಿಲು ತಟ್ಟುತ್ತಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸ್ವತಃ ಸಿ.ಎಂ.ಇಬ್ರಾಹಿಂ ಕೂಡ ಜೆಡಿಎಸ್​ಗೆ ಸೇರುವ ವಿಚಾರ ದೆಹಲಿಯಲ್ಲಿ ತೀರ್ಮಾನವಾಗುತ್ತೆ. ಸಮಯ ಸಿಕ್ಕಾಗ ದೆಹಲಿಗೆ ಹೋಗಿ ಬರುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು. ಆದರೆ, ಇಂದು ಮುಂಜಾನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ಹೋಗುವ ಮುನ್ನ ಹೀಗೆ ಹೇಳಿದ್ದ ಕಾಂಗ್ರೆಸ್ ಎಂಎಲ್​ಸಿ ಸಿ.ಎಂ.ಇಬ್ರಾಹಿಂ ತಿಂಡಿ ಮುಗಿಸಿ ಹೊರಬರುವಷ್ಟರಲ್ಲಿ ಕೊಂಚ ವರಸೆ ಬದಲಿಸಿದಂತೆ ಕಾಣುತ್ತಿದೆ. ಸಿದ್ದರಾಮಯ್ಯ ಭೇಟಿ ನಂತರ ಮಾತನಾಡಿರುವ ಸಿ.ಎಂ.ಇಬ್ರಾಹಿಂ, ನಾನು ಈಗ ಎಲ್ಲಿ ನಿಂತು ಮಾತನಾಡುತ್ತಿದ್ದೇನೆ ಹೇಳಿ. ಜೆಡಿಎಸ್ ಸೇರುತ್ತೇನೆ ಅಂತ ಎಲ್ಲಿ ಹೇಳಿದ್ದೆ? ಸಿದ್ದರಾಮಯ್ಯ ಜೊತೆ ನಂಗೆ ಯಾವತ್ತೂ ಬೇಸರವಿರಲಿಲ್ಲ ಇವತ್ತೂ ಇಲ್ಲ, ಮುಂದೂ ಇರಲ್ಲ ಎಂದಿದ್ದಾರೆ.

ನಾನು ಕುಮಾರಸ್ವಾಮಿ, ದೇವೆಗೌಡ ಜೊತೆಗೂ ಚೆನ್ನಾಗಿಯೇ ಇದ್ದೇನೆ. ಅಷ್ಟೇ ಏಕೆ, ಅಡ್ವಾಣಿ ಮನೆಯಲ್ಲೂ ತಿಂಡಿ ತಿಂದಿದ್ದೆ. ಬಿಜೆಪಿ ಪಕ್ಷದ ನಾಯಕರು ಸಹ ನನ್ನ ಜೊತೆ ಚೆನ್ನಾಗಿದ್ದಾರೆ. ಹಾಗಂತ ಕಾಂಗ್ರೆಸ್ ಬಿಡ್ತೀನಿ ಅಂತಲ್ಲ. ಬಸವ ತತ್ವದಲ್ಲಿ ನಂಬಿಕೆ ಇರೋನು ನಾನು. ಸಿದ್ದರಾಮಯ್ಯ ಜೊತೆ ರಾಜ್ಯ, ರಾಷ್ಟ್ರ ರಾಜಕಾರಣದ ಬಗ್ಗೆ ಮಾತಾಡಿದ್ದೇನೆ. ಪಕ್ಷದಲ್ಲಿ ನನ್ನ ಪಾತ್ರ ಏನು ಅನ್ನೋದನ್ನ ಚರ್ಚೆ ಮಾಡಿದ್ದೇನೆ. ರಾಜ್ಯದಲ್ಲಿ ನಮ್ಮ ಸಮುದಾಯದ ಶೇ.18ರಷ್ಟು ಇದೆ. ಹೀಗಾಗಿ ನಾವು ಒಂದು ರೂಪಾಯಿ ಖರ್ಚು ಮಾಡಿ ಎಂಟಾಣೆ ಕೇಳುತ್ತಿದ್ದೇವೆ ಅಷ್ಟೇ. ಒಂದರ್ಥದಲ್ಲಿ ನಾನು ಕೂಲಿ ಕೇಳುತ್ತಿದ್ದೇನೆ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚಿಸುತ್ತೇವೆ. ಇದಕ್ಕಾಗಿ ಸೋನಿಯಾ ಗಾಂಧಿ ಭೇಟಿಗೆ ಟೈಮ್ ಸಹ ಕೇಳಿದ್ದೇವೆ. ಕೆಲವರು ಏನೂ ಖರ್ಚು ಮಾಡದೆ ಎರಡು ರುಪಾಯಿ ಲಾಭ ಮಾಡ್ತಿದ್ದಾರೆ. ಮುಂಡೇವು ಒಂದು ರೂಪಾಯಿ ಹಾಕಿ ಹತ್ತು ರೂಪಾಯಿ ತಗೊಂಡ್ ಹೋಗೋವ್ರು ಇದಾವೆ ಇಲ್ಲಿ ಎನ್ನುವ ಮೂಲಕ ಜಮೀರ್ ಅಹ್ಮದ್ ಖಾನ್​ಗೆ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ.

ಇತ್ತೀಚೆಗೆ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಊಟ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ಸಿ.ಎಂ.ಇಬ್ರಾಹಿಂ, ಎಲ್ಲ ದೇವರ ದಯೆ, ಋಣ ಸಂದಾಯ ಎಂದಷ್ಟೇ ಹೇಳಿದ್ದು ಗುಟ್ಟು ಬಿಟ್ಟುಕೊಟ್ಟಿಲ್ಲ. ಇಷ್ಟಾದರೂ ಅಂತಿಮವಾಗಿ ಜೆಡಿಎಸ್ ಸೇರುವ ಬಗ್ಗೆ ಮತ್ತೆ ಪ್ರಶ್ನಿಸಿದಾಗ ರಾಜಕೀಯವಾಗಿ ನನ್ನ ತೀರ್ಮಾನ ಏನು ಅಂತ ದೆಹಲಿಗೆ ಹೋದ ನಂತರ ಅಂತಿಮಗೊಳಿಸುವೆ. ತೀರ್ಮಾನ ಕೈಗೊಳ್ಳುವಿಕೆಯಲ್ಲಿ ಭಾಗಿಯಾಗೋದು ಮುಖ್ಯ. ಶುಭ ಶುಕ್ರವಾರ, ಎಲ್ಲವೂ ಒಳ್ಳೆಯದಾಗುತ್ತದೆ ಎನ್ನುವ ಮೂಲಕ ಈ ವಿಚಾರವನ್ನು ಒಗಟಾಗಿಯೇ ಉಳಿಸಿದ್ದಾರೆ.

ಇದನ್ನೂ ಓದಿ: ಮುಖ್ಯಮಂತ್ರಿಗೆ ತಕ್ಕ ಸಹಪಾಠಿ, ಅದಕ್ಕೊಂದು ಪಕ್ಷ, ಇವರ ಮಧ್ಯೆ ಕೇಶವಕೃಪಾ ಒದ್ದಾಟ: ಸಿ.ಎಂ. ಇಬ್ರಾಹಿಂ

ರಾಜಕೀಯ ವಿಶ್ಲೇಷಣೆ | ರಮೇಶ್ ಜಾರಕಿಹೊಳಿ ಮುಂದಿರುವ ಮೂರು ಆಯ್ಕೆಗಳು

Published On - 11:14 am, Fri, 5 March 21