Siddaramaiah ರಾಮಮಂದಿರಕ್ಕೆ ದೇಣಿಗೆ ನೀಡಲ್ಲ ಅಂದ ಮಾತ್ರಕ್ಕೆ.. ಸಿದ್ದರಾಮಯ್ಯ ಹಿಂದೂ ವಿರೋಧಿ ಆಗಲ್ಲ -ಡಾ.ಯತೀಂದ್ರ

ದೇಣಿಗೆ ನೀಡಲ್ಲ ಅಂದ ಮಾತ್ರಕ್ಕೆ ಸಿದ್ದರಾಮಯ್ಯ ಹಿಂದೂ ವಿರೋಧಿ ಅಲ್ಲ. ಸಿದ್ದರಾಮಯ್ಯರನ್ನ ಹಿಂದೂ ವಿರೋಧಿ ಅನ್ನುವುದಕ್ಕೆ ಆಗಲ್ಲ ಎಂದು ರಾಮಮಂದಿರಕ್ಕೆ ದೇಣಿಗೆ ನೀಡಲ್ಲ ಎಂಬ ತಮ್ಮ ತಂದೆ ಸಿದ್ದರಾಮಯ್ಯರ ಹೇಳಿಕೆಗೆ ಶಾಸಕ ಡಾ.ಯತೀಂದ್ರ ಪ್ರತಿಕ್ರಿಯಿಸಿದ್ದಾರೆ.

Siddaramaiah ರಾಮಮಂದಿರಕ್ಕೆ ದೇಣಿಗೆ ನೀಡಲ್ಲ ಅಂದ ಮಾತ್ರಕ್ಕೆ.. ಸಿದ್ದರಾಮಯ್ಯ ಹಿಂದೂ ವಿರೋಧಿ ಆಗಲ್ಲ -ಡಾ.ಯತೀಂದ್ರ
ಡಾ.ಯತೀಂದ್ರ ಸಿದ್ದರಾಮಯ್ಯ
Follow us
KUSHAL V
|

Updated on: Feb 18, 2021 | 9:37 PM

ಮೈಸೂರು: ದೇಣಿಗೆ ನೀಡಲ್ಲ ಅಂದ ಮಾತ್ರಕ್ಕೆ ಸಿದ್ದರಾಮಯ್ಯ ಹಿಂದೂ ವಿರೋಧಿ ಅಲ್ಲ. ಸಿದ್ದರಾಮಯ್ಯರನ್ನ ಹಿಂದೂ ವಿರೋಧಿ ಅನ್ನುವುದಕ್ಕೆ ಆಗಲ್ಲ ಎಂದು ರಾಮಮಂದಿರಕ್ಕೆ ದೇಣಿಗೆ ನೀಡಲ್ಲ ಎಂಬ ತಮ್ಮ ತಂದೆ ಸಿದ್ದರಾಮಯ್ಯರ ಹೇಳಿಕೆಗೆ ಶಾಸಕ ಡಾ.ಯತೀಂದ್ರ ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಯ ಟಿ.ನರಸೀಪುರದಲ್ಲಿ ಶಾಸಕ ಯತೀಂದ್ರ ಹೇಳಿದ್ದಾರೆ. ಜೊತೆಗೆ, ದೇಣಿಗೆ ಎಂಬುದು ಸ್ವಇಚ್ಛೆಯಿಂದ ನೀಡುವುದು ಎಂದು ಸಹ ಹೇಳಿದರು.

ನಮ್ಮೂರಲ್ಲಿ ಕಟ್ಟುವ ರಾಮಮಂದಿರಕ್ಕೆ ದೇಣಿಗೆ ನೀಡ್ತೇನೆ ಎಂದು ಸಿದ್ದರಾಮಯ್ಯ ಅಂದಿದ್ದಾರೆ. ಅಂತೆಯೇ, ಅನೇಕ ದೇವಸ್ಥಾನಗಳಿಗೆ ವೈಯಕ್ತಿಕವಾಗಿ ನಮ್ಮ ತಂದೆ ದೇಣಿಗೆ ಕೊಟ್ಟಿದ್ದಾರೆ. ನಮ್ಮೂರಿನಲ್ಲಿ ಕಟ್ಟಿರುವ ಸಿದ್ದರಾಮೇಶ್ವರ ದೇವಾಲಯಕ್ಕೂ ಅವರು ದೇಣಿಗೆ ನೀಡಿದ್ದಾರೆ. ಅಯೋಧ್ಯೆಯ ರಾಮಮಂದಿರಕ್ಕೆ ಯಾರು ದುಡ್ಡು ಕೊಟ್ಟಿದ್ದಾರೆ, ಯಾರು ಕೊಟ್ಟಿಲ್ಲ ಎಂದು ಕೇಳುವುದು ಸರಿಯಲ್ಲ ಎಂದು ಹೇಳಿದರು.

ಸಿದ್ದರಾಮಯ್ಯರಿಗೆ ಹಿಂದೂ ವಿರೋಧಿ ಹಣೆಪಟ್ಟಿ ಕಟ್ಟಲು ಆಗಲ್ಲ. ಹಿಂದೂ ವಿರೋಧಿ ಹಣೆಪಟ್ಟಿ ಕಟ್ಟಲು ಯಾರಿಗೂ ಸಾಧ್ಯವಿಲ್ಲ. ಅವರು ಎಷ್ಟರ ಮಟ್ಟಿಗೆ ಹಿಂದೂಗಳೋ ಅದಕ್ಕಿಂತ ಎರಡರಷ್ಟು ಹಿಂದೂಗಳು ನಾವು ಎಂದು ಜಿಲ್ಲೆಯ ಟಿ.ನರಸೀಪುರದಲ್ಲಿ ಶಾಸಕ ಯತೀಂದ್ರ ಹೇಳಿದ್ದಾರೆ.

‘ಮನೆಯಲ್ಲಿ ಪೂಜೆ ಮಾಡಲ್ಲ, ಹಾಗಂತ ದೇವರಿಲ್ಲ ಅಂತಲ್ಲ’ ಇತ್ತ, ನಾನು ದೇವಸ್ಥಾನಗಳಿಗೆ ಹೋಗುವುದು ತೀರಾ ಕಡಿಮೆ. ಮನೆಯಲ್ಲಿ ಪೂಜೆ ಮಾಡಲ್ಲ, ಹಾಗಂತ ದೇವರಿಲ್ಲ ಅಂತಲ್ಲ ಎಂದು ಟಿ.ನರಸೀಪುರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ದೇವರಿದ್ದಾನೆ. ಬೇರೊಬ್ಬರಿಗೆ ಸಹಾಯ ಮಾಡುವುದುದರಲ್ಲಿ, ಕಷ್ಟಕ್ಕೆ ಸ್ಪಂದಿಸುವುದರಲ್ಲಿ ದೇವರಿದ್ದಾನೆ ಎಂದು ಸಿದ್ದರಾಮಯ್ಯ ಹೇಳಿದರು.

ಜೊತೆಗೆ, ಕೆಲ ಪೂಜಾರಿಗಳು ಕಾಣಿಕೆ ತಟ್ಟೆಯನ್ನೇ ನೋಡುತ್ತಿರುತ್ತಾರೆ. ಎಷ್ಟು ದುಡ್ಡು ಹಾಕಿದ್ರು ಅಂತಾ ತಟ್ಟೆಯನ್ನೇ ನೋಡುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಬಳಿಕ, ಕೆಲ ಸಮಯದ ನಂತರ ನಾನು ಸುಮ್ಮನೆ ಹೇಳಿದೆ. ಎಲ್ಲಾ ಪೂಜಾರಿಗಳು ಹಾಗೆ ಮಾಡಲ್ಲ. ತಮಾಷೆಗೆ ಹೇಳಿದೆ ಅಷ್ಟೇ ಎಂದು ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದರು.

ಮನುಷ್ಯ ಕೆಡುಕನ್ನು ಬಯಸಬಾರದು. ನಮ್ಮ ಒಳ್ಳೆಯ ನಡೆವಳಿಕೆಗಳೇ ಧರ್ಮ, ಕೆಟ್ಟ ನಡೆತಗಳೇ ಅಧರ್ಮ. ನಾನು ದೇವರ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡಲು ಹೋಗಲ್ಲ. ಅದು ದೊಡ್ಡ ಸಬ್ಜೆಕ್ಟ್. ವ್ಯಾಖ್ಯಾನ ಮಾಡುತ್ತ ಹೋದರೆ ದೊಡ್ಡ ಸಬ್ಜೆಕ್ಟ್ ಆಗುತ್ತೆ. ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: Karnataka Budget 2021 ಫೆಬ್ರವರಿ 4ರಿಂದ ಬಜೆಟ್​ ಅಧಿವೇಶನ ಆರಂಭ; ಮಾರ್ಚ್​​ 8ರಂದು ಕರ್ನಾಟಕ ಬಜೆಟ್​ ಮಂಡನೆ