ಆಹಾರ ಸಾಮಗ್ರಿ, ದನಕರುಗಳಿಗೆ ಮೇವು ನೀಡಿ: ಕಂಟೈನ್ಮೆಂಟ್ ಜೋನ್ ನಿವಾಸಿಗಳ ಅಳಲು

|

Updated on: Jun 11, 2020 | 4:12 PM

ಹಾವೇರಿ: ಆಹಾರ ಸಾಮಗ್ರಿ ಮತ್ತು ದನಕರುಗಳಿಗೆ ಮೇವು ನೀಡಲು ಆಗ್ರಹಿಸಿ ಕಂಟೈನ್ಮೆಂಟ್ ಜೋನ್ ನಿವಾಸಿಗಳು ಧರಣಿ ನಡೆಸಿರುವ ಘಟನೆ ಹಾವೇರಿ ತಾಲೂಕಿನ ಗುತ್ತಲದ ಬಳಿ ನಡೆದಿದೆ. ಜೂನ್ 5ರಂದು ಪಟ್ಟಣದ ಕಲಾಲ್ ಪ್ಲಾಟ್​ನ ಇಪ್ಪತ್ತೇಳು ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ನಂತರ ಸೋಂಕಿತೆ ವಾಸವಾಗಿದ್ದ ಪ್ರದೇಶವನ್ನು ಜಿಲ್ಲಾಡಳಿತ ಸೀಲ್​ಡೌನ್ ಮಾಡಿತ್ತು. ಸೀಲ್​ಡೌನ್ ಮಾಡಿ ಒಂದು ವಾರ ಕಳೆದ್ರೂ ಅಲ್ಲಿನ ಜನರಿಗೆ ಸಿಗಬೇಕಾದ ಸೌಲಭ್ಯ ಸಿಕ್ಕಿಲ್ಲ. ಹೀಗಾಗಿ ಊಟ, ನೀರಿಗಾಗಿ ಜನ ಪರದಾಡುತ್ತಿದ್ದಾರೆ. ದನ-ಕರುಗಳಿಗೆ ಮೇವು […]

ಆಹಾರ ಸಾಮಗ್ರಿ, ದನಕರುಗಳಿಗೆ ಮೇವು ನೀಡಿ: ಕಂಟೈನ್ಮೆಂಟ್ ಜೋನ್ ನಿವಾಸಿಗಳ ಅಳಲು
Follow us on

ಹಾವೇರಿ: ಆಹಾರ ಸಾಮಗ್ರಿ ಮತ್ತು ದನಕರುಗಳಿಗೆ ಮೇವು ನೀಡಲು ಆಗ್ರಹಿಸಿ ಕಂಟೈನ್ಮೆಂಟ್ ಜೋನ್ ನಿವಾಸಿಗಳು ಧರಣಿ ನಡೆಸಿರುವ ಘಟನೆ ಹಾವೇರಿ ತಾಲೂಕಿನ ಗುತ್ತಲದ ಬಳಿ ನಡೆದಿದೆ.

ಜೂನ್ 5ರಂದು ಪಟ್ಟಣದ ಕಲಾಲ್ ಪ್ಲಾಟ್​ನ ಇಪ್ಪತ್ತೇಳು ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ನಂತರ ಸೋಂಕಿತೆ ವಾಸವಾಗಿದ್ದ ಪ್ರದೇಶವನ್ನು ಜಿಲ್ಲಾಡಳಿತ ಸೀಲ್​ಡೌನ್ ಮಾಡಿತ್ತು. ಸೀಲ್​ಡೌನ್ ಮಾಡಿ ಒಂದು ವಾರ ಕಳೆದ್ರೂ ಅಲ್ಲಿನ ಜನರಿಗೆ ಸಿಗಬೇಕಾದ ಸೌಲಭ್ಯ ಸಿಕ್ಕಿಲ್ಲ.

ಹೀಗಾಗಿ ಊಟ, ನೀರಿಗಾಗಿ ಜನ ಪರದಾಡುತ್ತಿದ್ದಾರೆ. ದನ-ಕರುಗಳಿಗೆ ಮೇವು ಸಹ ಸಿಗದೆ ಒದ್ದಾಡುತ್ತಿದ್ದಾರೆ. ಜಿಲ್ಲಾಡಳಿತದ ಬೇಜವಾಬ್ದಾರಿತನಕ್ಕೆ ಸಾಮಾಜಿಕ ಅಂತರವಿಲ್ಲದೆ ಆಡಳಿತದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಬಂದು ಸಿಗಬೇಕಾದ ಸೌಲಭ್ಯ ಕಲ್ಪಿಸೋವರೆಗೂ ಪ್ರತಿಭಟನೆ ಕೈಬಿಡದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

Published On - 12:54 pm, Thu, 11 June 20