ಐದಷ್ಟೇ ಅಲ್ಲ, 7ನೇ ತರಗತಿವರೆಗೂ ಆನ್‌ಲೈನ್ ಕ್ಲಾಸ್ ರದ್ದು
ಬೆಂಗಳೂರು: ಕೊರೊನಾ ಸಂಕಷ್ಟದಿಂದಾಗಿ ರಾಜ್ಯದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ಗಳನ್ನ ಮಾಡಲಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ನಿನ್ನೆ 1ರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ಗಳನ್ನ ರದ್ದು ಮಾಡಿತ್ತು. ಇಂದು ರಾಜ್ಯದಲ್ಲಿ 7ನೇ ತರಗತಿವರೆಗೂ ಆನ್‌ಲೈನ್ ಕ್ಲಾಸ್ ರದ್ದು ಮಾಡುವುದಾಗಿ ವಿಧಾನಸೌಧದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. ಇಂದು ನಡೆದ ಸಂಪುಟ ಸಭೆಯಲ್ಲಿ ಆನ್‌ಲೈನ್ ಕ್ಲಾಸ್ ಬಗ್ಗೆ ಚರ್ಚೆ ನಡೆದಿತ್ತು. ಈ ವೇಳೆ 5ನೇ ತರಗತಿ ಬದಲು 7ನೇ ತರಗತಿಯವರೆಗೂ ಆನ್‌ಲೈನ್ ಕ್ಲಾಸ್ ರದ್ದು ಮಾಡುವುದಾಗಿ ಚರ್ಚೆ ನಡೆದು […]
ಬೆಂಗಳೂರು: ಕೊರೊನಾ ಸಂಕಷ್ಟದಿಂದಾಗಿ ರಾಜ್ಯದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ಗಳನ್ನ ಮಾಡಲಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ನಿನ್ನೆ 1ರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ಗಳನ್ನ ರದ್ದು ಮಾಡಿತ್ತು. ಇಂದು ರಾಜ್ಯದಲ್ಲಿ 7ನೇ ತರಗತಿವರೆಗೂ ಆನ್‌ಲೈನ್ ಕ್ಲಾಸ್ ರದ್ದು ಮಾಡುವುದಾಗಿ ವಿಧಾನಸೌಧದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಇಂದು ನಡೆದ ಸಂಪುಟ ಸಭೆಯಲ್ಲಿ ಆನ್‌ಲೈನ್ ಕ್ಲಾಸ್ ಬಗ್ಗೆ ಚರ್ಚೆ ನಡೆದಿತ್ತು. ಈ ವೇಳೆ 5ನೇ ತರಗತಿ ಬದಲು 7ನೇ ತರಗತಿಯವರೆಗೂ ಆನ್‌ಲೈನ್ ಕ್ಲಾಸ್ ರದ್ದು ಮಾಡುವುದಾಗಿ ಚರ್ಚೆ ನಡೆದು ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಾಕಷ್ಟು ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಇದ್ದಾರೆ. ವಿದ್ಯಾರ್ಥಿಗಳಿಗೆ ಅನಾನುಕೂಲವಾಗುವ ಕಾರಣದಿಂದ 7ನೇ ತರಗತಿವರೆಗೆ ಆನ್‌ಲೈನ್ ಶಿಕ್ಷಣ ರದ್ದತಿಗೆ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ರು.
ಆದ್ರೆ ಎಸ್ಎಸ್ಎಲ್ಸಿ ಪರೀಕ್ಷೆ ನಿಗದಿಯಂತೆ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. 8, 9ನೇ ತರಗತಿಗೆ ಆನ್‌ಲೈನ್ ಶಿಕ್ಷಣದ ಬಗ್ಗೆ ಇನ್ನು ನಿರ್ಧಾರ ತೆಗೆದುಕೊಂಡಿಲ್ಲ. ಈ ಬಗ್ಗೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ರು.
Published On - 2:55 pm, Thu, 11 June 20