ಮಾಜಿ ಸಚಿವೆ ಉಮಾಶ್ರೀ ಮನೆ ದರೋಡೆ ಮಾಡಿದ್ದ ಖದೀಮರು ಒಂದೇ ವಾರದಲ್ಲಿ ಲಾಕ್​!

ಬಾಗಲಕೋಟೆ: ಮಾಜಿ ಸಚಿವೆ ಉಮಾಶ್ರೀ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸದಂತೆ ಒಂದೇ ವಾರದಲ್ಲಿ ಖದೀಮರನ್ನು ಪತ್ತೆಹಚ್ಚಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಖದೀಮರನ್ನು ಯಲ್ಲಪ್ಪ ಗಡ್ಡಿ ಹಾಗೂ ದುರ್ಗಪ್ಪ ವಾಲ್ಮೀಕಿ ಎಂದು ಗುರುತಿಸಲಾಗಿದೆ. ಬಂಧಿತರು ಜಿಲ್ಲೆಯ ಜಮಖಂಡಿ ಹಾಗೂ ಮುಧೋಳ ನಗರದವರು. ರಬಕವಿಯ ವಿದ್ಯಾನಗರದಲ್ಲಿರುವ ಉಮಾಶ್ರೀಯವರ ನಿವಾಸದಲ್ಲಿ ನವೆಂಬರ್ 2 ರಂದು ಕಳ್ಳತನವಾಗಿತ್ತು. ಚೋರರು ಮಾಜಿ ಸಚಿವೆ ಮನೆಯಲ್ಲಿದ್ದ 2 ಲಕ್ಷ ರೂಪಾಯಿ ನಗದು ಎಗರಿಸಿ ಪರಾರಿಯಾಗಿದ್ದರು. ಈ ಬಗ್ಗೆ ತೇರದಾಳ ಪೊಲೀಸ್ ಠಾಣೆಗೆ ಉಮಾಶ್ರೀ ದೂರು ಕೊಟ್ಟಿದ್ದರು. […]

ಮಾಜಿ ಸಚಿವೆ ಉಮಾಶ್ರೀ ಮನೆ ದರೋಡೆ ಮಾಡಿದ್ದ ಖದೀಮರು ಒಂದೇ ವಾರದಲ್ಲಿ ಲಾಕ್​!

Updated on: Nov 08, 2020 | 5:22 PM

ಬಾಗಲಕೋಟೆ: ಮಾಜಿ ಸಚಿವೆ ಉಮಾಶ್ರೀ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸದಂತೆ ಒಂದೇ ವಾರದಲ್ಲಿ ಖದೀಮರನ್ನು ಪತ್ತೆಹಚ್ಚಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಖದೀಮರನ್ನು ಯಲ್ಲಪ್ಪ ಗಡ್ಡಿ ಹಾಗೂ ದುರ್ಗಪ್ಪ ವಾಲ್ಮೀಕಿ ಎಂದು ಗುರುತಿಸಲಾಗಿದೆ. ಬಂಧಿತರು ಜಿಲ್ಲೆಯ ಜಮಖಂಡಿ ಹಾಗೂ ಮುಧೋಳ ನಗರದವರು.

ರಬಕವಿಯ ವಿದ್ಯಾನಗರದಲ್ಲಿರುವ ಉಮಾಶ್ರೀಯವರ ನಿವಾಸದಲ್ಲಿ ನವೆಂಬರ್ 2 ರಂದು ಕಳ್ಳತನವಾಗಿತ್ತು. ಚೋರರು ಮಾಜಿ ಸಚಿವೆ ಮನೆಯಲ್ಲಿದ್ದ 2 ಲಕ್ಷ ರೂಪಾಯಿ ನಗದು ಎಗರಿಸಿ ಪರಾರಿಯಾಗಿದ್ದರು. ಈ ಬಗ್ಗೆ ತೇರದಾಳ ಪೊಲೀಸ್ ಠಾಣೆಗೆ ಉಮಾಶ್ರೀ ದೂರು ಕೊಟ್ಟಿದ್ದರು.

ಸದ್ಯ, ಬಂಧಿತರಿಂದ 1.94 ಲಕ್ಷ ರೂಪಾಯಿಯನ್ನು ತೇರದಾಳ ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇಬ್ಬರಲ್ಲಿ ಓರ್ವ ಬಂಧಿತ ಆರೋಪಿ ಯಲ್ಲಪ್ಪ ಗಡ್ಡಿ ಅಂತರ್ ಜಿಲ್ಲಾ ಕಳ್ಳನೆಂದು ಸಹ ಮಾಹಿತಿ ಸಿಕ್ಕಿದೆ.