ಸೋಂಕಿತ ಗರ್ಭಿಣಿ ಕರೆದೊಯ್ಯಲು ಬಂದ ಕೊರೊನಾ ವಾರಿಯರ್ಸ್ ಮೇಲೆ ಕುಟುಂಬಸ್ಥರಿಂದ ಹಲ್ಲೆ

| Updated By:

Updated on: Jul 26, 2020 | 4:13 PM

ಬೆಳಗಾವಿ: ಸೋಂಕಿತೆಯನ್ನ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕೆ ವಿರೋಧ ವ್ಯಕ್ತಪಡಿಸಿ ಕೊರೊನಾ ವಾರಿಯರ್ಸ್​ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ನಡೆದಿದೆ. ಗರ್ಭಿಣಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಕೆಯನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ಬಂದಿದ್ದ ಆ್ಯಂಬುಲೆನ್ಸ್ ತಡೆದು ಕೊರೊನಾ ವಾರಿಯರ್ಸ್​ನ ಸೋಂಕಿತೆಯ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ಬೆಳಗಾವಿಗೆ ಸೋಂಕಿತೆಯನ್ನ ಕರೆದುಕೊಂಡು ಹೋಗದಂತೆ ವಿರೋಧಿಸಿ ಆ್ಯಂಬುಲೆನ್ಸ್ ಡ್ರೈವರ್ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಅರ್ಧ ದಾರಿಗೆ ಆ್ಯಂಬುಲೆನ್ಸ್ ವಾಪಾಸ್ ಕರೆತಂದು ನಿಪ್ಪಾಣಿ ಆಸ್ಪತ್ರೆಯಲ್ಲೆ […]

ಸೋಂಕಿತ ಗರ್ಭಿಣಿ ಕರೆದೊಯ್ಯಲು ಬಂದ ಕೊರೊನಾ ವಾರಿಯರ್ಸ್ ಮೇಲೆ ಕುಟುಂಬಸ್ಥರಿಂದ ಹಲ್ಲೆ
Follow us on

ಬೆಳಗಾವಿ: ಸೋಂಕಿತೆಯನ್ನ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕೆ ವಿರೋಧ ವ್ಯಕ್ತಪಡಿಸಿ ಕೊರೊನಾ ವಾರಿಯರ್ಸ್​ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ನಡೆದಿದೆ.

ಗರ್ಭಿಣಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಕೆಯನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ಬಂದಿದ್ದ ಆ್ಯಂಬುಲೆನ್ಸ್ ತಡೆದು ಕೊರೊನಾ ವಾರಿಯರ್ಸ್​ನ ಸೋಂಕಿತೆಯ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ಬೆಳಗಾವಿಗೆ ಸೋಂಕಿತೆಯನ್ನ ಕರೆದುಕೊಂಡು ಹೋಗದಂತೆ ವಿರೋಧಿಸಿ ಆ್ಯಂಬುಲೆನ್ಸ್ ಡ್ರೈವರ್ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.

ಅರ್ಧ ದಾರಿಗೆ ಆ್ಯಂಬುಲೆನ್ಸ್ ವಾಪಾಸ್ ಕರೆತಂದು ನಿಪ್ಪಾಣಿ ಆಸ್ಪತ್ರೆಯಲ್ಲೆ ಹೆರಿಗೆ ಮಾಡಿಸುವಂತೆ ಒತ್ತಾಯ ಮಾಡಿದ್ದಾರೆ. ಸಿಬ್ಬಂದಿಗೆ ಹೆದರಿಸಿ ನಿಪ್ಪಾಣಿ ಆಸ್ಪತ್ರೆಗೆ ಸೋಂಕಿತೆಯನ್ನ ದಾಖಲು‌ ಮಾಡಿಸಿ ಪುಂಡಾಡ ಮೆರೆದಿದ್ದಾರೆ. ನಿಪ್ಪಾಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 11:56 am, Sun, 26 July 20