ಬೆಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡರ ಆಸ್ಪತ್ರೆಯಲ್ಲೂ ರೋಗಿಗಳಿಗೆ ಪರದಾಟ ತಪ್ಪಿಲ್ಲ. ಬಿಬಿಎಂಪಿ ವತಿಯಿಂದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಆಗಿರುವ ಕೊರೊನಾ ಸೋಂಕಿತರಿಗೆ ಸಂಕಷ್ಟ ಎದುರಿಸುವಂತಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಸಿಗದ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಶಾಮನೂರು ಶಿವಶಂಕರಪ್ಪ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾಗಿ ಊಟದ ವ್ಯವಸ್ಥೆ ಇಲ್ಲವಂತೆ. ಬಿಪಿ, ಶುಗರ್ ಪರಿಶೀಲಿಸಲ್ಲ, ಅರ್ಧ ಮಾತ್ರೆ ಕೊಡುತ್ತಾರೆ. ಅರ್ಧ ಮಾತ್ರೆ ಕೊಟ್ಟ ಬಳಿಕ ರೋಗಿಗಳನ್ನ ವಿಚಾರಿಸುವುದಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ 3 ದಿನಕ್ಕೆ ಡಿಸ್ಚಾರ್ಜ್ ಮಾಡುತ್ತಾರೆ.
ಮಕ್ಕಳಿಗಂತೂ ಸರಿಯಾದ ಊಟದ ವ್ಯವಸ್ಥೆಯೇ ಇಲ್ಲ. ಮಧುಮೇಹಿಗಳಿಗೆ ಚಪಾತಿ ನೀಡಲು ಕೇಳಿದರೂ ಕೊಡುತ್ತಿಲ್ಲ. ಇದರಿಂದಾಗಿ ಮತ್ತಷ್ಟು ಶುಗರ್ ಲೆವೆಲ್ ಹೆಚ್ಚಾಗಿ ಸಂಕಷ್ಟ ಎದುರಿಸುವಂತಾಗಿದೆ. ಹೀಗೆ ಆದರೆ ಗುಣಮುಖರಾಗುವುದು ಹೇಗೆಂದು ರೋಗಿಗಳು ಅಳಲು ತೋಡಿಕೊಂಡಿದ್ದಾರೆ.
ಸರ್ಕಾರ ಹಣ ಪಾವತಿಸುತ್ತಿದ್ದರೂ ಕಾಟಾಚಾರಕ್ಕೆ ನೋಡ್ತಾರೆ. ಸರ್ಕಾರದಿಂದ ಒಬ್ಬ ರೋಗಿಗೆ ಇಂತಿಷ್ಟು ಹಣ ನೀಡುತ್ತಾರೆ. ಆದ್ರೆ ಕನಿಷ್ಠ ಮೂಲಸೌಕರ್ಯಗಳನ್ನೂ ನೀಡ್ತಿಲ್ಲ ಎಂದು ಖಾಸಗಿ ಆಸ್ಪತ್ರೆಯ ವಿರುದ್ಧ ಬಿಬಿಎಂಪಿ ಕಡೆಯಿಂದ ಬಂದಿರುವ ಕೊರೊನಾ ಸೋಂಕಿತರು ಆರೋಪಿಸಿದ್ದಾರೆ.
Published On - 7:57 am, Thu, 27 August 20