ಹಾವೇರಿ: ವೈದ್ಯ ನಾರಾಯಣೋ ಹರಿ ಅಂತಾರೆ. ಆದ್ರೆ ಕೊರೊನಾ ಇಂಥ ವೈದ್ಯರಿಂದಲೂ ಮಾನವಿಯತೆಯನ್ನ ಕಿತ್ತುಕೊಂಡಿದೆ ಅಂತಾ ಕಾಣುತ್ತೆ. ಯಾಕಂದ್ರೆ ಹಾವೇರಿಯಲ್ಲಿನ ವೈದ್ಯಕೀಯ ಸಿಬ್ಬಂದಿ ಪಿಪಿಇ ಕಿಟ್ ಥರ ಮನುಷ್ಯತ್ವವನ್ನು ಕಿತ್ತೆಸೆದಂಗಿದೆ.
ಹೌದು ಮಾನವೀಯತೆಯನ್ನು ಮರೆತ ಹಾವೇರಿ ಜಿಲ್ಲೆ ವೈದ್ಯಕೀಯ ಸಿಬ್ಬಂದಿ ಬಸ್ ನಿಲ್ದಾಣದಲ್ಲಿಯೇ ಅನಾರೋಗ್ಯ ಪೀಡಿತನ ಶವ ಇಟ್ಟು ಜನರಲ್ಲಿ ಆತಂಕಕ್ಕೆ ಕಾರಣರಾಗಿದ್ದಾರೆ. ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಈ ಎಡವಟ್ಟು ಸ್ಥಳಿಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಜನನಿಬಿಡ ಪ್ರದೇಶದಲ್ಲಿನ ನಿಲ್ದಾಣದಲ್ಲಿ ಶವ ಇಟ್ಟ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯ ಕಾರ್ಯಕ್ಕೆ, ಭಯಗೊಂಡ ಸ್ಥಳೀಯ ಜನರು ಹಿಡಿಶಾಪ ಹಾಕಿದ್ದಾರೆ. ಮೃತದೇಹವನ್ನ ಸುಮಾರು 2-3 ಗಂಟೆ ವರೆಗೆ ಅಲ್ಲಿಯೇ ಬಿಟ್ಟಿದ್ದ ಸಿಬ್ಬಂದಿ ನಂತರ ಜನರ ಆಕ್ರೋಶ ಕಂಡು ಆ್ಯಂಬುಲೆನ್ಸ್‌ನಲ್ಲಿ ಕೊಂಡೊಯ್ದಿದ್ದಾರೆ.
Published On - 4:48 pm, Sat, 4 July 20