ಒಂದೇ ಕಾಲಿದ್ರೂ ಭೂತಾಯಿ ಸೇವೆ ನಿಂತಿಲ್ಲ, ಉಡುಪಿಯಲ್ಲೊಬ್ಬ ಮಾದರಿ ರೈತ

ಉಡುಪಿ: ಕೃಷಿ ಅಂದ್ರೆ ಮೂಗು ಮುರಿದು ಹೆಚ್ಚಿನ ಹಣದ ಆಸೆಗೆ ಪಟ್ಟಣ ಸೇರುವವರೇ ಹೆಚ್ಚಿದ್ದಾರೆ. ಅಂಥದ್ರಲ್ಲಿ ಒಂದು ಕಾಲು ಕಳೆದುಕೊಂಡರೂ ಹಠ ಬಿಡದ ದಶರಥನಂತೆ ಒಂದೇ ಕಾಲಿನಲ್ಲಿ ಕೃಷಿ ಹಸಿರನ್ನೇ ಉಸಿರು ಮಾಡಿಕೊಂಡು ಭೂತಾಯಿ ಸೇವೆಯಲ್ಲಿ ತೊಡಗಿರುವ ಅಪರೊಪದ ರೈತರೊಬ್ಬರು ಉಡುಪಿಯಲ್ಲಿ ಜನಮನ ಗೆದ್ದಿದ್ದಾರೆ. ಹೌದು, ಉಡುಪಿ ಜಿಲ್ಲೆ ಕಾಪು ತಾಲೂಕಿನ ಕುರ್ಕಾಲು ನಿವಾಸಿ ನಾರಾಯಣ ತಿಂಗಳಾಯರೇ ಈ ಹಸಿರುನಾಡಿನ ದಶರಥ. 59 ವರ್ಷದ ನಾರಾಯಣ ಕೃಷಿ ಕುಟುಂಬದಲ್ಲಿ ಹುಟ್ಟಿ ಕೃಷಿಯನ್ನೇ ಮೈಗೂಡಿಸಿಕೊಂಡವರು. ತಮ್ಮ ಕುಟುಂಬದೊಡನೆ ಗದ್ದೆಯಲ್ಲಿ […]

ಒಂದೇ ಕಾಲಿದ್ರೂ ಭೂತಾಯಿ ಸೇವೆ ನಿಂತಿಲ್ಲ, ಉಡುಪಿಯಲ್ಲೊಬ್ಬ ಮಾದರಿ ರೈತ
Follow us
Guru
| Updated By: ಸಾಧು ಶ್ರೀನಾಥ್​

Updated on:Jul 04, 2020 | 6:46 PM

ಉಡುಪಿ: ಕೃಷಿ ಅಂದ್ರೆ ಮೂಗು ಮುರಿದು ಹೆಚ್ಚಿನ ಹಣದ ಆಸೆಗೆ ಪಟ್ಟಣ ಸೇರುವವರೇ ಹೆಚ್ಚಿದ್ದಾರೆ. ಅಂಥದ್ರಲ್ಲಿ ಒಂದು ಕಾಲು ಕಳೆದುಕೊಂಡರೂ ಹಠ ಬಿಡದ ದಶರಥನಂತೆ ಒಂದೇ ಕಾಲಿನಲ್ಲಿ ಕೃಷಿ ಹಸಿರನ್ನೇ ಉಸಿರು ಮಾಡಿಕೊಂಡು ಭೂತಾಯಿ ಸೇವೆಯಲ್ಲಿ ತೊಡಗಿರುವ ಅಪರೊಪದ ರೈತರೊಬ್ಬರು ಉಡುಪಿಯಲ್ಲಿ ಜನಮನ ಗೆದ್ದಿದ್ದಾರೆ.

ಹೌದು, ಉಡುಪಿ ಜಿಲ್ಲೆ ಕಾಪು ತಾಲೂಕಿನ ಕುರ್ಕಾಲು ನಿವಾಸಿ ನಾರಾಯಣ ತಿಂಗಳಾಯರೇ ಈ ಹಸಿರುನಾಡಿನ ದಶರಥ. 59 ವರ್ಷದ ನಾರಾಯಣ ಕೃಷಿ ಕುಟುಂಬದಲ್ಲಿ ಹುಟ್ಟಿ ಕೃಷಿಯನ್ನೇ ಮೈಗೂಡಿಸಿಕೊಂಡವರು. ತಮ್ಮ ಕುಟುಂಬದೊಡನೆ ಗದ್ದೆಯಲ್ಲಿ ಕೃಷಿ ಕಾಯಕವನ್ನೇ ಮಾಡಿಕೊಂಡಿದ್ದಾರೆ.

ಕೃಷಿಯೇ ಇವರ ಜೀವನಕ್ಕೆ ಆಧಾರ.. ಸಕ್ಕರೆ ಕಾಯಿಲೆಯಿಂದ ಒಂದು ಕಾಲು ಕಳೆದುಕೊಂಡ ದುರ್ದೈವಿ ಆದ್ರೆ ಕೆಲ ವರ್ಷಗಳ ಹಿಂದೆ ವಿಪರೀತ ಸಕ್ಕರೆ ಕಾಯಿಲೆಯಿಂದ ತಮ್ಮ ಒಂದು ಕಾಲನ್ನು ಕಳೆದುಕೊಳ್ಳಬೇಕಾಯಿತು. ಪರಿಣಾಮ ಮೂರು ವರ್ಷ ಕೃಷಿ ಕಾರ್ಯದಿಂದ ದೂರವಿರಬೇಕಾಯಿತು. ಆದ್ರೆ ಮನೆಯಲ್ಲಿ ಕೂತು ಜೀವನ ಸಾಗಿಸಲು ಮನಸ್ಸು ಒಪ್ಪಿಲ್ಲ. ಹೀಗಾಗಿ ಕಾಯಕವೇ ಕೈಲಾಸ ಅಂತಾ ಕೃತಕ ಕಾಲು ಜೋಡಿಸಿಕೊಂಡು ಮತ್ತೇ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಇತರರಿಗೆ ಮಾದರಿ ಈ ಸ್ವಾವಲಂಬಿ ಕೃಷಿಯ ಮೇಲೆ ಅಪಾರ ಮೋಹ ಹೊಂದಿರುವ ಸ್ವಾಭಿಮಾನಿ ನಾರಾಯಣ ತಿಂಗಳಾಯ ತಮ್ಮ ಒಂದು ಎಕ್ರೆ ಗದ್ದೆಯಲ್ಲಿ ಭತ್ತದ ಕೃಷಿ ಮಾಡುತ್ತಾರೆ. ಹಗಲಿರುಳೆನ್ನದೇ ಭೂತಾಯಿಯ ಸೇವೆ ಮಾಡತ್ತಾರೆ. ಒಂದು ಕಾಲು ಇಲ್ಲ ನಾನ್ಯಾಕೆ ಗದ್ದೆಯಲ್ಲಿ ಕೆಲಸ ಮಾಡಬೇಕು ಎನ್ನದೇ ನಿರಂತರವಾಗಿ ಕಾಯಕದಲ್ಲಿ ತೊಡಗಿ ಸ್ವಾವಲಂಬಿಯಾಗಿ ಇತರರಿಗೆ ಮಾದರಿ ರೈತನಾಗಿದ್ದಾರೆ. -ಹರೀಶ್ ಪಾಲೆಚ್ಚಾರ್

Published On - 6:44 pm, Sat, 4 July 20

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ