ಶಿವಣ್ಣ 58ನೇ ಮಹೋತ್ಸವಕ್ಕೆ ಕಿಚ್ಚ ಸುದೀಪ್ ವಿಭಿನ್ನ ಚಾಲನೆ
ಸ್ಯಾಂಡಲ್ವುಡ್ನಲ್ಲಿ ಸೆಲೆಬ್ರಿಟಿಗಳ ಹುಟ್ಟುಹಬ್ಬ ಬಂತು ಅಂದ್ರೆನೇ ಒಂದು ಸಂಭ್ರಮ. ವರ್ಷಕ್ಕೊಮ್ಮೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನ ನೋಡೋಕೆ ದೂರದೂರಿನಿಂದ ಕೇಕ್, ಉಡುಗೊರೆಗಳನ್ನ ಹಿಡ್ಕೊಂಡು ಬರ್ತಾರೆ. ಆದ್ರೆ ಈ ಬಾರಿ ಆ ಸಂಭ್ರಮಕ್ಕೆಲ್ಲ ಕೊರೊನಾ ಬ್ರೇಕ್ ಹಾಕಿದೆ. ಅದ್ರಲ್ಲೂ ಸೆಂಚುರಿ ಸ್ಟಾರ್ ಶಿವಣ್ಣನ ಅಭಿಮಾನಿಗಳಿಗಾದ ನಿರಾಸೆ ಅಷ್ಟಿಷ್ಟಲ್ಲ. ಆದ್ರೂ ಶಿವಣ್ಣನ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ ಆಚರಿಸೋಕೆ ಮುಂದಾಗಿದ್ದಾರೆ. ಶಿವಣ್ಣನ ಅಭಿಮಾನಿಗಳಿಗೆ ಬೆಂಬಲವಾಗಿ ಕಿಚ್ಚ ಸುದೀಪ್ ನಿಂತಿದ್ದಾರೆ. ಜುಲೈ 12 ಬಂತು ಅಂದ್ರೆ, ಶಿವಣ್ಣನ ಮುಂದೆ ಜನವೋ […]
ಸ್ಯಾಂಡಲ್ವುಡ್ನಲ್ಲಿ ಸೆಲೆಬ್ರಿಟಿಗಳ ಹುಟ್ಟುಹಬ್ಬ ಬಂತು ಅಂದ್ರೆನೇ ಒಂದು ಸಂಭ್ರಮ. ವರ್ಷಕ್ಕೊಮ್ಮೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನ ನೋಡೋಕೆ ದೂರದೂರಿನಿಂದ ಕೇಕ್, ಉಡುಗೊರೆಗಳನ್ನ ಹಿಡ್ಕೊಂಡು ಬರ್ತಾರೆ. ಆದ್ರೆ ಈ ಬಾರಿ ಆ ಸಂಭ್ರಮಕ್ಕೆಲ್ಲ ಕೊರೊನಾ ಬ್ರೇಕ್ ಹಾಕಿದೆ.
ಅದ್ರಲ್ಲೂ ಸೆಂಚುರಿ ಸ್ಟಾರ್ ಶಿವಣ್ಣನ ಅಭಿಮಾನಿಗಳಿಗಾದ ನಿರಾಸೆ ಅಷ್ಟಿಷ್ಟಲ್ಲ. ಆದ್ರೂ ಶಿವಣ್ಣನ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ ಆಚರಿಸೋಕೆ ಮುಂದಾಗಿದ್ದಾರೆ. ಶಿವಣ್ಣನ ಅಭಿಮಾನಿಗಳಿಗೆ ಬೆಂಬಲವಾಗಿ ಕಿಚ್ಚ ಸುದೀಪ್ ನಿಂತಿದ್ದಾರೆ.
ಜುಲೈ 12 ಬಂತು ಅಂದ್ರೆ, ಶಿವಣ್ಣನ ಮುಂದೆ ಜನವೋ ಜನ. ಕರ್ನಾಟಕದ ಮೂಲೆ ಮೂಲೆಯಿಂದ ಅಭಿಮಾನಿಗಳು ಸೆಂಚುರಿ ಸ್ಟಾರ್ ಅನ್ನ ನೋಡಲು ಬರ್ತಾರೆ. ಆದ್ರೆ ಈ ಬಾರಿ ಕೊರೊನಾ ಭೀತಿಯಿಂದಾಗಿ ಶಿವಣ್ಣ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳದೆ ಇರಲು ನಿರ್ಧರಿಸಿದ್ದಾರೆ. ಹೀಗಾಗಿ ಸ್ವತ: ಶಿವಣ್ಣನೇ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದು, ಬರ್ತ್ಡೇ ದಿನ ಮನೆಯಲ್ಲಿ ಇರೋದಿಲ್ಲ ಅಂತ ಹೇಳಿದ್ದರು. ಜೊತೆಗೆ ಕೊರೊನಾ ಮುಗಿದ ಮೇಲೆ ಎಲ್ಲರನ್ನೂ ಭೇಟಿಯಾಗೋದಾಗಿ ಪ್ರಾಮಿಸ್ ಮಾಡಿದ್ದಾರೆ.
ಇಷ್ಟೆಲ್ಲ ಆದ್ರೂ ಅಭಿಮಾನಿಗಳು ಸುಮ್ಮನಿರ್ತಾರಾ? ತಮ್ಮ ಅಭಿಮಾನವನ್ನ ಹೇಗಾದ್ರೂ ವ್ಯಕ್ತಪಡಿಸ್ತಾರೆ. ಅದಕ್ಕಾಗಿ ಶಿವಣ್ಣನ 58ನೇ ಹುಟ್ಟುಹಬ್ಬವನ್ನ ಶಿವಣ್ಣನ ಮಹೋತ್ಸವವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅಭಿಮಾನಿಗಳೇ ಸೇರಿ ಕಾಮನ್ ಡಿಪಿಯನ್ನೂ ರೆಡಿ ಮಾಡಿದ್ದಾರೆ. ಇನ್ನೊಂದು ವಾರ ಶಿವಣ್ಣ ಅಭಿಮಾನಿಗಳು ಇದೇ ಡಿಪಿಯನ್ನ ತಮ್ಮ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಶಿವಣ್ಣ ಹುಟ್ಟುಹಬ್ಬ ಹಬ್ಬವನ್ನ ಆಚರಿಸಲು ನಿರ್ಧರಿಸಿದ್ದಾರೆ.
ಶಿವಣ್ಣನ ಅಭಿಮಾನಿಗಳು ಸೃಷ್ಟಿಸಿದ ಈ ಕಾಮನ್ ಡಿಪಿಯನ್ನ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ಶಿವಣ್ಣ ಅಭಿಮಾನಿಗಳಿಗೆ ಶುಭಾಶಯವನ್ನ ಕೋರುವ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.