ಶಿವಮೊಗ್ಗ: ಕೊರೊನಾ ಮಹಾಮಾರಿ ಮರಣ ಮೃದಂಗ ಭಾರಿಸುವುದನ್ನು ಹೆಚ್ಚು ಮಾಡಿದೆ. ಮಲೆನಾಡು ಶಿವಮೊಗ್ಗದಲ್ಲಿ ಇಂದು ಕೊರೊನಾಗೆ ಮೃತಪಟ್ಟ ಮೊದಲ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿಯಾಗಿದೆ.
ಚನ್ನಗಿರಿ ಮೂಲದ 70 ವರ್ಷದ ವೃದ್ಧೆ ಕೊರೊನಾಗೆ ಮೃತಪಟ್ಟಿದ್ದಾರೆ. ಕಳೆದ ಮೂರು ದಿನಗಳ ಹಿಂದೆಯಷ್ಟೇ ಮೃತ ವೃದ್ಧೆ ಮೂಲವ್ಯಾದಿ ಮತ್ತು ಶ್ವಾಸಕೋಶ ಸಮಸ್ಯೆ ಸಂಬಂಧಿಸಿದಂತೆ ಮೆಗ್ಗಾನ್ ಕೊವಿಡ್-19 ಆಸ್ಪತ್ರೆಗೆ ದಾಖಲಾಗಿದ್ದರು. ಸಾವಿನ ನಂತರ ಬಂದಿರುವ ಕೊವಿಡ್-19 ವರದಿಯಲ್ಲಿ ಪಾಸಿಟಿವ್ ಧೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
Published On - 11:19 am, Wed, 17 June 20