ಪಾದರಾಯನಪುರ ಕಾರ್ಪೊರೇಟರ್‌ಗೆ ಕೊರೊನಾ ‘ಪಾಶ’..!

| Updated By:

Updated on: May 30, 2020 | 8:16 AM

ಬೆಂಗಳೂರು: ಪಾದರಾಯನ ಪುರ.. ಬೆಂಗಳೂರಿಗೆ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ ಏರಿಯಾ. ಇಲ್ಲಿನ ಕೆಲ ಪುಂಡರು ಕೊರೊನಾ ಆರ್ಭಟದ ನಡುವೆ ಅಟ್ಟಹಾಸ ಮೆರೆದಿದ್ದು ಗೊತ್ತೇ ಇದೆ. ಆ ಗಲಾಟೆಯ ನಂತರ ದಿನಕ್ಕೆ ಒಬ್ಬರಿಗಾದ್ರೂ ಕೊರೊನಾ ಪಾಸಿಟಿವ್ ಬರ್ತಾನೆ ಇದೆ. ಹೀಗೆ ಪಾದರಾಯನಪುರದಲ್ಲಿ ಕ್ರೂರಿ ನರ್ತಿಸಿದ್ರೂ ಇಲ್ಲಿನ ಜನಕ್ಕೆ ಬುದ್ಧಿನೇ ಬಂದಿಲ್ಲ. ಬರೋದು ಇಲ್ಲ. ಇಲ್ಲಿನ ಜನ ಹೇಗೋ ಜನ ಪ್ರತಿನಿಧಿಗಳು ಕೂಡ ಇವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಅದರ ಎಫೆಕ್ಟ್‌ ಈಗ ಏನ್ ಆಗಿದೆ ನೋಡಿ. ಕಾರ್ಪೊರೇಟರ್‌ ಪಾದ […]

ಪಾದರಾಯನಪುರ ಕಾರ್ಪೊರೇಟರ್‌ಗೆ ಕೊರೊನಾ ‘ಪಾಶ’..!
Follow us on

ಬೆಂಗಳೂರು: ಪಾದರಾಯನ ಪುರ.. ಬೆಂಗಳೂರಿಗೆ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ ಏರಿಯಾ. ಇಲ್ಲಿನ ಕೆಲ ಪುಂಡರು ಕೊರೊನಾ ಆರ್ಭಟದ ನಡುವೆ ಅಟ್ಟಹಾಸ ಮೆರೆದಿದ್ದು ಗೊತ್ತೇ ಇದೆ. ಆ ಗಲಾಟೆಯ ನಂತರ ದಿನಕ್ಕೆ ಒಬ್ಬರಿಗಾದ್ರೂ ಕೊರೊನಾ ಪಾಸಿಟಿವ್ ಬರ್ತಾನೆ ಇದೆ. ಹೀಗೆ ಪಾದರಾಯನಪುರದಲ್ಲಿ ಕ್ರೂರಿ ನರ್ತಿಸಿದ್ರೂ ಇಲ್ಲಿನ ಜನಕ್ಕೆ ಬುದ್ಧಿನೇ ಬಂದಿಲ್ಲ. ಬರೋದು ಇಲ್ಲ. ಇಲ್ಲಿನ ಜನ ಹೇಗೋ ಜನ ಪ್ರತಿನಿಧಿಗಳು ಕೂಡ ಇವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಅದರ ಎಫೆಕ್ಟ್‌ ಈಗ ಏನ್ ಆಗಿದೆ ನೋಡಿ.

ಕಾರ್ಪೊರೇಟರ್‌ ಪಾದ ಇಟ್ಟ ಕಡೆ ಈಗ ಭಯ.. ಭಯ..!
ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೊನಾ ನಾಟ್ಯ ಮಾಡ್ತಾ ಇರೋದು ನಿಮಗೆ ಗೊತ್ತಾ ಇದೆ. ಈಗ ಮತ್ತೆ ಈ ಏರಿಯಾ ಮೂಲಕ ಕೊರೊನಾ ಬೆಂಗಳೂರಿಗೆ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಇದೇ ವಾರ್ಡ್ ನ ಕಾರ್ಪೊರೇಟರ್‌ ಕೊರೊನಾ ಸೋಂಕು ಹರಡಿರೋ ಶಂಕೆ ವ್ಯಕ್ತವಾಗಿದ್ದು, ಅಧಿಕಾರಿಗಳಲ್ಲಿ, ಸಾರ್ವಜನಿಕರಲ್ಲಿ ಸಾಕಷ್ಟು ಭಯ ಶುರುವಾಗಿದೆ.

‘ಕಾರ್ಪೊರೇಟರ್ ಭೇಟಿಯಾದವರು ತಪಾಸಣೆ ಮಾಡಿಸಿಕೊಳ್ಳಿ’
ಪಾದರಾಯನಪುರ ಕಾರ್ಪೊರೇಟರ್​ ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ರಿಪೋರ್ಟ್‌ನಲ್ಲಿ ಕೊರೊನಾ ಶಂಕೆ ವ್ಯಕ್ತವಾಗಿದ್ದು, ಅಧಿಕೃತವಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರ ಜೊತೆ ಹೆಚ್ಚಾಗಿ ಕಾರ್ಪೊರೇಟರ್ ಓಡಾಡಿದ್ರಿಂದ ‘ಕಾರ್ಪೊರೇಟರ್ ಭೇಟಿಯಾದವರು ತಪಾಸಣೆ ಮಾಡಿಸಿಕೊಳ್ಳಿ’ ಎಂದು ಬಿಬಿಎಂಪಿ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಕಾರ್ಪೊರೇಟರ್‌ ಅಧಿಕಾರಿಗಳ ಜೊತೆಗೂಡಿ ಕಂಟೇನ್ಮೆಂಟ್‌ ಜೋನ್‌ನಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದು ಬಿಬಿಎಂಪಿ ಉನ್ನತ ಅಧಿಕಾರಿಗಳಿಗೂ ಸೋಂಕಿನ ಆತಂಕ ಶುರುವಾಗಿದೆ.

ಕಿಟ್ ಪಡೆದ ಸಾವಿರಾರು ಜನರಿಗೆ ಶುರು ಸೋಂಕಿನ ಭೀತಿ..!
ಈ ಕಾರ್ಪೊರೇಟರ್ ಇದೇ ತಿಂಗಳ 26 ರಂದು ರಂಜಾನ್ ಪ್ರಯುಕ್ತವಾಗಿ 7000 ಆಹಾರ ಕಿಟ್ ವಿತರಣೆ ಮಾಡಿದ್ರು. ಕಿಟ್ ಕೊಡುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರೋದಕ್ಕೆ ಕಾರ್ಪೋರೆಟ್‌ಗೆ ಕೊರೊನಾ ಬಂದಿದ್ಯಾ ಅನ್ನೋ ಅನುಮಾನ ವ್ಯಕ್ತವಾಗಿದೆ. ಅಷ್ಟೇ ಅಲ್ಲ ಇವರಿಂದ ಕಿಟ್ ಪಡೆದವರಿಗೂ ಭಯ ಶುರುವಾಗಿದೆ.

ಗಲಾಟೆಯಲ್ಲೂ ಭಾಗಿಯಾಗಿದ್ದ ಕಾರ್ಪೊರೇಟರ್..!
ನಿನ್ನೆ ಪಾದರಾಯನಪುರದ ಮುಸ್ಲಿಂ ಮಹಿಳೆಯರು ತಮ್ಮ ಏರಿಯಾದ ಸೀಲ್‌ಡೌನ್ ತೆರವುಗೊಳಿಸಿ ಅಂತ ಬಳಿ ಗಲಾಟೆ ಮಾಡಿದ್ರು. ಇದೇ ಏರಿಯಾದ 11 ನೇ ಕ್ರಾಸ್ ನ ರಸ್ತೆಗಳನ್ನ ಫ್ರೀ ಮಾಡುವಂತೆ 2 ಸಾವಿರ ಮಹಿಳೆಯರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ರು. ಈ ಗಲಾಟೆಯಲ್ಲೂ ಕೂಡ ಕಾರ್ಪೂರೇಟರ್‌ ಭಾಗಿಯಾಗಿದ್ರು ಎನ್ನಲಾಗಿದೆ.

ಒಟ್ನಲ್ಲಿ ಪಾದರಾಯನಪುರ ಕೊರೊನಾ ಕಂಟಕ ಬೆಂಗಳೂರನ್ನ ಬಿಟ್ಟೂ ಬಿಡದೆ ಕಾಡುತ್ತಿದೆ. ಈ ಏರಿಯಾದ ಜನರ ನಿರ್ಲಕ್ಷ್ಯಕ್ಕೆ ಕೊರೊನಾ ಮತ್ತಷ್ಟು ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ 300ರ ಗಡಿ ದಾಟಿರುವ ಕೊರೊನಾ ಸೋಂಕಿತರ ಸಂಖ್ಯೆ ಅದೆಲ್ಲಿಗೆ ಹೋಗಿ ಮುಟ್ಟುತ್ತೋ ಅನ್ನೋ ಆತಂಕ ಆವರಿಸಿದೆ.