BTM Layout ​​ನಲ್ಲಿ ಆಸ್ಪತ್ರೆಗೆ ಸಾಗಿಸುವಾಗಲೇ ಕೊರೊನಾ ಸೋಂಕಿನಿಂದ ದಂಪತಿ ಸಾವು

ಬೆಂಗಳೂರು: ಬಿಟಿಎಂ ಲೇಔಟ್​​ನಲ್ಲಿ ಕೊರೊನಾದಿಂದ ಪತಿ, ಪತ್ನಿ ಸಾವಿಗೀಡಾಗಿದ್ದಾರೆ. 55 ವರ್ಷದ ಮಹಿಳೆ, 65 ವರ್ಷದ ವೃದ್ಧ ಕೊರೊನಾಗೆ ಬಲಿಯಾದವರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ದಂಪತಿ ಮೃತಪಟ್ಟಿದ್ದಾರೆ. ಸೋಂಕಿತರ ಮೃತದೇಹ ವಿಕ್ಟೋರಿಯಾ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಒಬ್ಬೊಬ್ಬರೂ ಒಂದೊಂದು ಆಸ್ಪತ್ರೆಗೆ ತೆರಳುವಾಗ.. ಮಹಿಳಾ ರೋಗಿಯನ್ನ ಜಯದೇವ ಆಸ್ಪತ್ರೆಗೆ ಕರೆದೋಯ್ದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪುರುಷ ರೋಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆಯೇ ಸಾವಿಗೀಡಾಗಿದ್ದಾರೆ. ಇದರಲ್ಲಿ ಪುರುಷ ರೋಗಿ ಬಿಟಿಎಂ ಲೇ ಔಟ್ ನ ಹಲವಡೆ ಸುತ್ತಾಡಿದ್ದ. […]

BTM Layout ​​ನಲ್ಲಿ ಆಸ್ಪತ್ರೆಗೆ ಸಾಗಿಸುವಾಗಲೇ ಕೊರೊನಾ ಸೋಂಕಿನಿಂದ ದಂಪತಿ ಸಾವು

Updated on: Jun 13, 2020 | 4:52 PM

ಬೆಂಗಳೂರು: ಬಿಟಿಎಂ ಲೇಔಟ್​​ನಲ್ಲಿ ಕೊರೊನಾದಿಂದ ಪತಿ, ಪತ್ನಿ ಸಾವಿಗೀಡಾಗಿದ್ದಾರೆ. 55 ವರ್ಷದ ಮಹಿಳೆ, 65 ವರ್ಷದ ವೃದ್ಧ ಕೊರೊನಾಗೆ ಬಲಿಯಾದವರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ದಂಪತಿ ಮೃತಪಟ್ಟಿದ್ದಾರೆ. ಸೋಂಕಿತರ ಮೃತದೇಹ ವಿಕ್ಟೋರಿಯಾ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ.

ಒಬ್ಬೊಬ್ಬರೂ ಒಂದೊಂದು ಆಸ್ಪತ್ರೆಗೆ ತೆರಳುವಾಗ..
ಮಹಿಳಾ ರೋಗಿಯನ್ನ ಜಯದೇವ ಆಸ್ಪತ್ರೆಗೆ ಕರೆದೋಯ್ದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪುರುಷ ರೋಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆಯೇ ಸಾವಿಗೀಡಾಗಿದ್ದಾರೆ.

ಇದರಲ್ಲಿ ಪುರುಷ ರೋಗಿ ಬಿಟಿಎಂ ಲೇ ಔಟ್ ನ ಹಲವಡೆ ಸುತ್ತಾಡಿದ್ದ. ಹಾಗಾಗಿ, ಬಿಟಿಎಂ ಲೇ ಔಟ್ ಸೆಕೆಂಡ್ ಸ್ಟೇಜ್ ಮೈಕೋ ಪೊಲೀಸ್ ಠಾಣೆ ಹಿಂಭಾದ 16ನೇ ಕ್ರಾಸ್ ನ ಕೆಲ ಅಂಗಡಿಗಳನ್ನು ಕ್ಲೋಸ್ ಮಾಡಲಾಗಿದೆ. ಆತ ತರಕಾರಿ ಅಂಗಡಿ, ಬೇಕರಿ ಸೇರಿದಂತೆ ಎಲ್ಲಾ ಕಡೆ ಓಡಾಡಿದ್ದ ಎನ್ನಲಾಗಿದೆ. ಆತ ಹೋಗಿದ್ದ ಅಂಗಡಿಗಳನ್ನ ಕ್ಲೋಸ್ ಮಾಡಲಾಗಿದೆ. ಅವರ ಸಂಪರ್ಕದಲ್ಲಿದ್ದ 5 ಮಂದಿಯನ್ನೂ ಕ್ವಾರೆಂಟೇನ್ ಮಾಡಲಾಗಿದೆ. ಇನ್ನೂ ಯಾರೆಲ್ಲ ಸಂಪರ್ಕದಲ್ಲಿದ್ದರು ಅನ್ನೋದನ್ನ ಆರೋಗ್ಯಾಧಿಕಾರಿಗಳು ಚೆಕ್ ಮಾಡುತ್ತಿದ್ದಾರೆ.

Published On - 4:48 pm, Sat, 13 June 20