‘ಕೋಳಿಯೊಂದಿಗೇ ಹುಳು ಬಂತು’ ಎಂದ ಹೋಟೆಲ್ ಸಿಬ್ಬಂದಿ: ಜಗಳಕ್ಕಿಳಿದ ಗ್ರಾಹಕರು!

ದಕ್ಷಿಣ ಕನ್ನಡ: ಏನ್ರೀ, ನೀವು ಕೊಟ್ಟ ಚಿಕನ್ ಕಬಾಬ್​ನಲ್ಲಿ ಹುಳುಗಳಿವೆ ಎಂದು ಗ್ರಾಹಕರ ವಾದ. ಇದರಲ್ಲಿ ನಮ್ಮ ತಪ್ಪೇನಿಲ್ಲ, ಕೋಳಿ ಮಾರಿದವರದ್ದು ತಪ್ಪು ಎಂದು ಹೋಟೆಲ್ ಸಿಬ್ಬಂದಿಯ ಸಮಜಾಯಿಷಿ. ಈ ವಾಗ್ವಾದ ನಡೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಹೋಟೆಲ್ ಒಂದರಲ್ಲಿ. ಎಂದಿನಂತೆ ಮಧ್ಯಾಹ್ನ ಊಟಕ್ಕೆ ಹೋಟೆಲಿಗೆ ಬಂದಿದ್ದ ಗ್ರಾಹಕರೊಬ್ಬರು ಚಿಕನ್ ಕಬಾಬ್ ಆರ್ಡರ್ ಮಾಡಿದ್ದರು. ಕಬಾಬ್ ಬರುತ್ತಿದ್ದಂತೆ ಹಸಿದ ಹೊಟ್ಟೆಗೆ ಬಿಸಿಬಿಸಿ ಕೋಳಿ ಎಂದು ಖುಷಿಪಡುತ್ತಾ ಕಬಾಬ್ ಒಂದನ್ನು ಮುರಿದು ಸವಿಯಲು ಮುಂದಾದರು. ಆದರೆ ಅಷ್ಟರಲ್ಲೇ ಇವರಿಗೆ ಕಂಡಿದ್ದು ಕಬಾಬ್ನಲ್ಲಿದ್ದ ಸತ್ತ ಹುಳು. ಶಾಕ್ ಆದ […]

‘ಕೋಳಿಯೊಂದಿಗೇ ಹುಳು ಬಂತು’ ಎಂದ ಹೋಟೆಲ್ ಸಿಬ್ಬಂದಿ: ಜಗಳಕ್ಕಿಳಿದ ಗ್ರಾಹಕರು!
sadhu srinath

|

Jun 13, 2020 | 4:01 PM

ದಕ್ಷಿಣ ಕನ್ನಡ: ಏನ್ರೀ, ನೀವು ಕೊಟ್ಟ ಚಿಕನ್ ಕಬಾಬ್​ನಲ್ಲಿ ಹುಳುಗಳಿವೆ ಎಂದು ಗ್ರಾಹಕರ ವಾದ. ಇದರಲ್ಲಿ ನಮ್ಮ ತಪ್ಪೇನಿಲ್ಲ, ಕೋಳಿ ಮಾರಿದವರದ್ದು ತಪ್ಪು ಎಂದು ಹೋಟೆಲ್ ಸಿಬ್ಬಂದಿಯ ಸಮಜಾಯಿಷಿ. ಈ ವಾಗ್ವಾದ ನಡೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಹೋಟೆಲ್ ಒಂದರಲ್ಲಿ.

ಎಂದಿನಂತೆ ಮಧ್ಯಾಹ್ನ ಊಟಕ್ಕೆ ಹೋಟೆಲಿಗೆ ಬಂದಿದ್ದ ಗ್ರಾಹಕರೊಬ್ಬರು ಚಿಕನ್ ಕಬಾಬ್ ಆರ್ಡರ್ ಮಾಡಿದ್ದರು. ಕಬಾಬ್ ಬರುತ್ತಿದ್ದಂತೆ ಹಸಿದ ಹೊಟ್ಟೆಗೆ ಬಿಸಿಬಿಸಿ ಕೋಳಿ ಎಂದು ಖುಷಿಪಡುತ್ತಾ ಕಬಾಬ್ ಒಂದನ್ನು ಮುರಿದು ಸವಿಯಲು ಮುಂದಾದರು. ಆದರೆ ಅಷ್ಟರಲ್ಲೇ ಇವರಿಗೆ ಕಂಡಿದ್ದು ಕಬಾಬ್ನಲ್ಲಿದ್ದ ಸತ್ತ ಹುಳು. ಶಾಕ್ ಆದ ಗ್ರಾಹಕರು ಇನ್ನೊಂದು ಕಬಾಬ್ ಚೂರನ್ನು ಮುರಿದು ನೋಡಿದಾಗ ಅದರಲ್ಲೂ ಹುಳು ಸಿಗಬೇಕೇ!

ತಪ್ಪು ನಮ್ಮದಲ್ಲ, ಕೋಳಿ ಮಾರಿದವರದ್ದು ಎಂದ ಹೋಟೆಲ್ ಸಿಬ್ಬಂದಿ ಸಿಟ್ಟಾದ ಗ್ರಾಹಕ ಕೂಡಲೇ ಸಪ್ಲೈಯರ್ ಮತ್ತು ಆತನ ಮ್ಯಾನೇಜರ್ರನ್ನು ಕರೆಸಿ ಹುಳುಗಳನ್ನು ತೋರಿಸಿದರು. ಹೋಟೆಲ್ ಸಿಬ್ಬಂದಿಯಿಂದ ‘ಸಾರಿ ಸಾರ್.. ತಪ್ಪಾಯ್ತು.. ಮತ್ತೆ ಹೀಗೆ ಆಗೋದಿಲ್ಲ’ ಅಂತಾ ಉತ್ತರ ಬಯಸುತ್ತಿದ್ದ ಗ್ರಾಹಕನಿಗೆ ‘ಇದರಲ್ಲಿ ನಮ್ಮ ತಪ್ಪೇನಿಲ್ಲ.. ಕೋಳಿ ಮಾರಿದವರದ್ದು ತಪ್ಪು’ ಎಂದು ಹೋಟೆಲ್ ಸಿಬ್ಬಂದಿಯ ಉತ್ತರ ಕೇಳಿದಾಗ ಗ್ರಾಹಕ ಫುಲ್ ಥಂಡಾ. ಒಂದು ಸೆಕೆಂಡ್ ಚೇತರಿಸಿಕೊಂಡ ಗ್ರಾಹಕ ಕೂಡಲೇ ವಾಗ್ವಾದಕ್ಕಿಳಿದರು. ಆದರೆ ಸಿಬ್ಬಂದಿ ಮಾತ್ರ ತಮ್ಮ ವಾದದಿಂದ ಹಿಂದೆ ಸರಿಯಲಿಲ್ಲ. ಕೊನೆಗೂ ಪಟ್ಟು ಬಿಡದ ಗ್ರಾಹಕರು ಬಿಲ್ಕುಲ್ ಬಿಲ್ ಪಾವತಿಸಲ್ಲ ಎಂದು ಹೇಳಿ ಹೊರನಡೆದರು. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada