ಕೆ.ಜಿ.ಹಳ್ಳಿ-ಡಿ.ಜೆ ಹಳ್ಳಿ ಗಲಾಟೆ: ಕಾರ್ಪೊರೇಟರ್ ಪತಿ ಕಲೀಂ ಪಾಷಾ ಅರೆಸ್ಟ್

  • TV9 Web Team
  • Published On - 7:58 AM, 14 Aug 2020
ಕೆ.ಜಿ.ಹಳ್ಳಿ-ಡಿ.ಜೆ ಹಳ್ಳಿ ಗಲಾಟೆ: ಕಾರ್ಪೊರೇಟರ್ ಪತಿ ಕಲೀಂ ಪಾಷಾ ಅರೆಸ್ಟ್

ಬೆಂಗಳೂರು: ನಗರದ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಕೇಸ್ ಸಂಬಂಧಿಸಿ ಕೆ.ಜಿ.ಹಳ್ಳಿ ಕಾರ್ಪೊರೇಟರ್ ಪತಿ ಕಲೀಂ ಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ.

ರಾತ್ರಿ 12ರಿಂದ ಬೆಳಗಿನ ಜಾವ 4ರವರೆಗೂ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿಯ ಗಲ್ಲಿಗಲ್ಲಿಗೆ ತೆರಳಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಬಿಬಿಎಂಪಿ ಸದಸ್ಯೆ ಇರ್ಷಾದ್ ಬೇಗಂ ಪತಿ ಕಲೀಂ ಪಾಷಾನನ್ನು ಅರೆಸ್ಟ್ ಮಾಡಲಾಗಿದೆ. ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯ ಗಲಾಟೆಗೂ ಮೊದಲೇ ಠಾಣೆ ಬಳಿ ಕಲೀಂ ಪಾಷಾ ಬಂದಿದ್ದ.

ಪೊಲೀಸ್ ಠಾಣೆ ಬಳಿ ಉದ್ರೇಕಗೊಳ್ಳುವಂತೆ ಮಾತನಾಡಿದ್ದ. ಗಲಾಟೆ ಆರಂಭವಾದ ಬಳಿಕ ಸ್ಥಳದಿಂದ ಪರಾರಿಯಾಗಿದ್ದ. ಬಳಿಕ ಮತ್ತೆ ಠಾಣೆಗೆ ಬಂದು ಪೊಲೀಸರಿಗೆ ಸಹಕರಿಸುವಂತೆ ನಟಿಸಿದ್ದ. ಹೀಗಾಗಿ ಕಾರ್ಪೊರೇಟರ್ ಪತಿ ಕಲೀಂನನ್ನು ಪೊಲೀಸರು ಬಂಧಿಸಿದ್ದಾರೆ.