ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರವೂ ಬೃಹತ್ ಪ್ರಮಾಣದಲ್ಲಿಯೇ ಇರುತ್ತದೆ ಅನ್ನೋದು ಜನಸಾಮಾನ್ಯ ಮಾತು. ಇದಕ್ಕೆ ಪುಷ್ಟಿ ನೀಡುವಂತೆ ಬಿಬಿಎಂಪಿಗೆ ಸಂಬಂಧಿಸಿದಂತೆ ನಡೆದಿರುವ ಆತ್ಮಹತ್ಯೆ ಪ್ರಕರಣವೊಂದು ಜನರ ಗಮನ ಸೆಳೆದಿದೆ. ಗುತ್ತಿಗೆದಾರರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಮತ್ತೊಂದು ಪ್ರಕರಣ ಇದಾಗಿದೆ.
ಕಾಂಟ್ರಾಕ್ಟರ್ ಪತ್ನಿಯಿಂದ ಬಿಬಿಎಂಪಿ ಮಹಿಳಾ ಸಿಬ್ಬಂದಿ ವಿರುದ್ಧ ದೂರು
ಜಯನಗರ ಪಾರ್ಕ್ ನಿರ್ವಹಣೆ ಆತ್ಮಹತ್ಯೆ ಯತ್ನಕ್ಕೆ ಕಾರಣ?
ಆತ್ಮಹತ್ಯೆಗೆ ಕಾರಣ ಜಯನಗರದ ಪಾರ್ಕ್ ನಿರ್ವಹಣೆಯ ಗುತ್ತಿಗೆ ವಿವಾದ ಎನ್ನಲಾಗ್ತಿದೆ. ಗಿರೀಶ್ ಈ ಪಾರ್ಕ್ ನಿರ್ವಹಣೆಯ ಗುತ್ತಿಗೆ ಕೇಳಿದ್ದ. ಆದ್ರೆ ಉಷಾ ಇದಕ್ಕಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಗಿರೀಶ್ ತನ್ನ ಇನ್ನೋವಾ ಕಾರ್‌ನ ಡ್ಯಾಕ್ಯುಮೆಂಟ್ಸ್‌ನ್ನ ಗ್ಯಾರೆಂಟಿಯಾಗಿ ಉಷಾ ಹತ್ತಿರ ಇಟ್ಟಿದ್ದರು ಎನ್ನಲಾಗ್ತಿದೆ.
ಆದ್ರೂ ಉಷಾ ಮತ್ತು ಅವರ ಸೋದರ ಸಂಬಂಧಿ ದೀಪಕ್ ಅನ್ನೋರು ದುಡ್ಡಿಗಾಗಿ ಗಿರೀಶ್‌ಗೆ ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿತ್ತು. ಈಗ ಕಾಂಟ್ರಾಕ್ಟರ್ ಗಿರೀಶ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಗಿರೀಶ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಬಸವನಗುಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Published On - 4:59 pm, Wed, 17 June 20