ಕೊರೊನಾ ಸಂಕಷ್ಟದಿಂದ ಕೃಷಿಗೆ ಮರಳಿದ ರೈತರಿಗೆ ಗದ್ದೆಯಲ್ಲಿಯೇ ಸನ್ಮಾನ!
ಉಡುಪಿ: ಭಾರತ ಕೃಷಿ ಪ್ರಧಾನ ದೇಶ. ಆದ್ರೆ ಕೃಷಿಯೇತರ ಉದ್ಯೋಗಕ್ಕೆ ಮಾರು ಹೋಗಿ ಕೆಲವರು ಮೂಲ ಕಸುಬನ್ನೇ ಮರೆತಿದ್ರು. ಓಲ್ಡ್ ಈಸ್ ಗೋಲ್ಡ್ ಎಂಬಂತೆ ಸಾಕಷ್ಟು ಜನ ಉಡುಪಿಯಲ್ಲಿ ಈಗ ಮತ್ತೆ ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ. ಹೌದು ಕೊರೋನದಿಂದ ನಾವೆಲ್ಲಾ ಬಹಳಷ್ಟು ಕಲಿತಿದ್ದೇವೆ. ಉದ್ಯೋಗ ಅರಸಿ ದೂರದ ರಾಜ್ಯಗಳಿಗೆ ಹೋಗಿದ್ದ ಜನ ಈಗ ಮತ್ತೆ ಕೃಷಿಯತ್ತ ಮುಖ ಮಾಡಿದ್ದಾರೆ. ಇದನ್ನ ಗಮನಿಸಿದ ಸ್ಥಳೀಯ ಐಸಿವೈಎಂ ಯುವ ಸಂಘಟನೆ ಕೃಷಿಯಲ್ಲಿ ತೊಡಗಿರುವ ಮಹಿಳೆಯರನ್ನು ಕೃಷಿ ಗದ್ದೆಯಲ್ಲಿಯೇ ಸನ್ಮಾನಿಸುವ ಮೂಲಕ ಕೃಷಿಕರಿಗೆ […]
ಉಡುಪಿ: ಭಾರತ ಕೃಷಿ ಪ್ರಧಾನ ದೇಶ. ಆದ್ರೆ ಕೃಷಿಯೇತರ ಉದ್ಯೋಗಕ್ಕೆ ಮಾರು ಹೋಗಿ ಕೆಲವರು ಮೂಲ ಕಸುಬನ್ನೇ ಮರೆತಿದ್ರು. ಓಲ್ಡ್ ಈಸ್ ಗೋಲ್ಡ್ ಎಂಬಂತೆ ಸಾಕಷ್ಟು ಜನ ಉಡುಪಿಯಲ್ಲಿ ಈಗ ಮತ್ತೆ ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ.
ಹೌದು ಕೊರೋನದಿಂದ ನಾವೆಲ್ಲಾ ಬಹಳಷ್ಟು ಕಲಿತಿದ್ದೇವೆ. ಉದ್ಯೋಗ ಅರಸಿ ದೂರದ ರಾಜ್ಯಗಳಿಗೆ ಹೋಗಿದ್ದ ಜನ ಈಗ ಮತ್ತೆ ಕೃಷಿಯತ್ತ ಮುಖ ಮಾಡಿದ್ದಾರೆ. ಇದನ್ನ ಗಮನಿಸಿದ ಸ್ಥಳೀಯ ಐಸಿವೈಎಂ ಯುವ ಸಂಘಟನೆ ಕೃಷಿಯಲ್ಲಿ ತೊಡಗಿರುವ ಮಹಿಳೆಯರನ್ನು ಕೃಷಿ ಗದ್ದೆಯಲ್ಲಿಯೇ ಸನ್ಮಾನಿಸುವ ಮೂಲಕ ಕೃಷಿಕರಿಗೆ ಗೌರವ ಸಲ್ಲಿಸಿದೆ.
ಕ್ಯಾಥೋಲಿಕ್ ಸಂಘಟನೆಯ ವಿನೂತನ ಕಾರ್ಯಕ್ರಮ ಉದ್ಯಾವರದ ಭಾರತೀಯ ಕ್ಯಾಥೋಲಿಕ್ ಯುವ ಸಂಚಾಲನ (ಐಸಿವೈಎಂ) ಸುವರ್ಣ ಮಹೋತ್ಸವ ಸಮಿತಿ ವತಿಯಿಂದ ಉದ್ಯಾವರ ಕುತ್ಪಾಡಿ ಹಿರಿಯ ಪ್ರಾಥಮಿಕ ಶಾಲೆ ಸಮೀಪವಿರುವ ಹಿರಿಯ ಕೃಷಿಕ ಜೂಲಿಯನ್ ದಾಂತಿ ಅವರ ಗದ್ದೆಯಲ್ಲಿ, ಭತ್ತದ ಸಸಿ (ನೇಜಿ) ನೆಡುವವರಿಗೆ ಮತ್ತು ಗದ್ದೆ ಕೆಲಸ ಮಾಡುವವರಿಗೆ, ಕೃಷಿ ಗದ್ದೆಯಲ್ಲಿಯೆ ಸನ್ಮಾನಿಸಲಾಯಿತು -ಹರೀಶ್ ಪಾಲೆಚ್ಚಾರ್
Published On - 5:08 pm, Wed, 17 June 20