ಹಾಸನ: ಆಶ್ರಯ ಮನೆ ಹಂಚಿಕೆಯಲ್ಲಿ ಅನ್ಯಾಯ ಆಗಿರುವುದಾಗಿ ಆರೋಪ ಮಾಡಿ ದಂಪತಿಗಳು ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿರುವ ಘಟನೆ ಹಾಸನ ಜಿಲ್ಲೆ ಬೇಲೂರಿನ ನೆಹರು ನಗರದಲ್ಲಿ ನಡೆದಿದೆ.
ಮುಂಜಾನೆಯಿಂದ ಟವರ್ ಏರಿ ಕುಳಿತಿರುವ ದಂಪತಿಗಳು ನಮಗೆ ನ್ಯಾಯಬೇಕು ಎಂದು ರಂಪಾಟ ಶುರು ಮಾಡಿದ್ದಾರೆ. ನಮ್ಮ ಬೇಡಿಕೆ ಈಡೇರಿಸುವವರೆಗೂ ಕೆಳಗೆ ಇಳಿಯಲ್ಲ ಎಂದು ಪಟ್ಟು ಹಿಡಿದಿರುವ ದಂಪತಿಗಳು ಯಾರ ಮನವಿಗೂ ಸ್ಪಂದಿಸದೆ ಮೊಬೈಲ್ ಟವರ್ ಮೇಲೆಯೆ ಕುಳಿತಿದ್ದಾರೆ. ಘಟನಾ ಸ್ಥಳಕ್ಕೆ ಬೇಲೂರು ಪೊಲೀಸರು ಬೇಟಿ ನೀಡಿ ದಂಪತಿಗಳ ಮನವೋಲಿಸಲು ಶತ ಪ್ರಯತ್ನ ಮಾಡುತ್ತಿದ್ದಾರೆ.