ಹೃದಯಾಘಾತದಿಂದ ರವಿ ಬೆಳಗೆರೆ ನಿಧನ, ಪುತ್ರ ಕರ್ಣ ಹೇಳಿದ್ದೇನು?

ಬೆಂಗಳೂರು: ಹೃದಯಾಘಾತದಿಂದ ಪತ್ರಕರ್ತ ರವಿ ಬೆಳಗೆರೆ(62) ನಿಧನ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಳಗೆರೆ ಅವರ ಪುತ್ರ ಕರ್ಣ ಪ್ರತಿಕ್ರಿಯೆ ನೀಡಿದ್ದಾರೆ. ತಂದೆಯವರು ನಿನ್ನೆ ರಾತ್ರಿ ಪದ್ಮನಾಭನಗರದ ತಮ್ಮ ಕಚೇರಿಯಲ್ಲಿದ್ದರು. ರಾತ್ರಿ 12.15ರ ಸುಮಾರಿಗೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಆದರೆ ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ಪತ್ರಕರ್ತ ರವಿ ಬೆಳಗೆರೆ ಪುತ್ರ ಕರ್ಣ ಪ್ರತಿಕ್ರಿಯೆ ನೀಡಿದ್ದಾರೆ. ತಂದೆಯವರಿಗೆ ಪ್ರಾರ್ಥನಾ ಶಾಲೆ ಎತ್ತರಕ್ಕೆ ಬೆಳೆಸಬೇಕೆಂಬ ಆಸೆಯಿತ್ತು. ಅವರು ಸಕ್ಕರೆ ಕಾಯಿಲೆ […]

ಹೃದಯಾಘಾತದಿಂದ ರವಿ ಬೆಳಗೆರೆ ನಿಧನ, ಪುತ್ರ ಕರ್ಣ ಹೇಳಿದ್ದೇನು?
pruthvi Shankar

| Edited By: sadhu srinath

Nov 13, 2020 | 8:51 AM

ಬೆಂಗಳೂರು: ಹೃದಯಾಘಾತದಿಂದ ಪತ್ರಕರ್ತ ರವಿ ಬೆಳಗೆರೆ(62) ನಿಧನ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಳಗೆರೆ ಅವರ ಪುತ್ರ ಕರ್ಣ ಪ್ರತಿಕ್ರಿಯೆ ನೀಡಿದ್ದಾರೆ.

ತಂದೆಯವರು ನಿನ್ನೆ ರಾತ್ರಿ ಪದ್ಮನಾಭನಗರದ ತಮ್ಮ ಕಚೇರಿಯಲ್ಲಿದ್ದರು. ರಾತ್ರಿ 12.15ರ ಸುಮಾರಿಗೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಆದರೆ ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ಪತ್ರಕರ್ತ ರವಿ ಬೆಳಗೆರೆ ಪುತ್ರ ಕರ್ಣ ಪ್ರತಿಕ್ರಿಯೆ ನೀಡಿದ್ದಾರೆ.

ತಂದೆಯವರಿಗೆ ಪ್ರಾರ್ಥನಾ ಶಾಲೆ ಎತ್ತರಕ್ಕೆ ಬೆಳೆಸಬೇಕೆಂಬ ಆಸೆಯಿತ್ತು. ಅವರು ಸಕ್ಕರೆ ಕಾಯಿಲೆ ಹಾಗೂ ಕಾಲು ನೋವಿನಿಂದ ತೀವ್ರವಾಗಿ ಬಳಲುತ್ತಿದ್ದರು. 3 ದಿನಗಳ ಹಿಂದಷ್ಟೇ ನಾನು ಅವರ ಜತೆ ಮಾತನಾಡಿದ್ದೆ. ಆಗ ಅವರು ನಿಮ್ಮ ಜತೆ ನಾನಿದ್ದೀನಿ ಕಣೋ ಎಂದಿದ್ದರು. ಅವರ ಸಾವಿನ ಸುದ್ದಿಯನ್ನು ಕೇಳಿ ನಮಗೆ ಶಾಕ್ ಆಗಿದೆ ಎಂದು ಮಗ ತಮ್ಮ ಅಳಲು ತೋಡಿಕೊಂಡರು.

ಬೆಳಗ್ಗೆ 9ಕ್ಕೆ ತಂದೆಯವರ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ಪ್ರಾರ್ಥನಾ ಶಾಲೆಯ ಮೈದಾನದಲ್ಲಿ ಏರ್ಪಾಟು ಮಾಡಲಾಗಿದೆ. ಅವರ ಅಭಿಮಾನಿಗಳು ಬಂದು ದರ್ಶನ ಮಾಡಿಕೊಳ್ಳಬಹುದು. ಬಳಿಕ ಸಂಜೆ ನಾಲ್ಕುಗಂಟೆ ಒಳಗೆ ಬನಶಕಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಪುತ್ರ ಕರ್ಣ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada