ಪ್ರಸಿದ್ಧ ಲೇಖಕ, ಹಾಯ್ ಬೆಂಗಳೂರ್ ಸಂಪಾದಕ ರವಿ ಬೆಳಗೆರೆ ಇನ್ನಿಲ್ಲ
ಬೆಂಗಳೂರು: ಪ್ರಸಿದ್ಧ ಲೇಖಕ, ಹಾಯ್ ಬೆಂಗಳೂರ್ ಸಂಪಾದಕ ರವಿ ಬೆಳೆಗೆರೆ (62) ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪದ್ಮನಾಭನಗರದ ಆಫೀಸ್ನಲ್ಲಿ ತಡ ರಾತ್ರಿ 12 ಗಂಟೆ ಸುಮಾರಿಗೆ ಹೃದಯಾಘಾತವಾಗಿದೆ. ಕೂಡಲೇ ರವಿ ಬೆಳಗೆರೆ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬೆಳಗೆರೆ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರವಿ ಬೆಳಗೆರೆ ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದು, ಬೆಳಗೆರೆ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಕನಕಪುರ ರಸ್ತೆಯಲ್ಲಿರುವ ಅವರ ನಿವಾಸ ಕರಿಷ್ಮಾ ಹಿಲ್ಸ್ಗೆ ಶಿಫ್ಟ್ […]
ಬೆಂಗಳೂರು: ಪ್ರಸಿದ್ಧ ಲೇಖಕ, ಹಾಯ್ ಬೆಂಗಳೂರ್ ಸಂಪಾದಕ ರವಿ ಬೆಳೆಗೆರೆ (62) ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪದ್ಮನಾಭನಗರದ ಆಫೀಸ್ನಲ್ಲಿ ತಡ ರಾತ್ರಿ 12 ಗಂಟೆ ಸುಮಾರಿಗೆ ಹೃದಯಾಘಾತವಾಗಿದೆ. ಕೂಡಲೇ ರವಿ ಬೆಳಗೆರೆ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬೆಳಗೆರೆ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ರವಿ ಬೆಳಗೆರೆ ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದು, ಬೆಳಗೆರೆ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಕನಕಪುರ ರಸ್ತೆಯಲ್ಲಿರುವ ಅವರ ನಿವಾಸ ಕರಿಷ್ಮಾ ಹಿಲ್ಸ್ಗೆ ಶಿಫ್ಟ್ ಮಾಡಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಪ್ರಾರ್ಥನಾ ಶಾಲೆ ಮೈದಾನದಲ್ಲಿ ರವಿ ಬೆಳಗೆರೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ರವಿ ಬೆಳಗೆರೆ ತಮ್ಮ ಆತ್ಮೀಯ ಬರಹಗಳ ಮೂಲಕ ದೊಡ್ಡ ಅಭಿಮಾನಿಗಳ ಬಳಗವನ್ನೇ ನಿರ್ಮಿಸಿಕೊಂಡಿದ್ದರು. ರವಿಯನ್ನು ಕಳೆದುಕೊಂಡ ಅವರ ಅಭಿಮಾನಿ ಬಳಗ ಹಾಗೂ ಕುಟುಂಬಸ್ಥರು ಶೋಕಸಾಗರದಲ್ಲಿ ಮುಳುಗಿದ್ದಾರೆ.
Published On - 7:51 am, Fri, 13 November 20