ಹಾಸನ: ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ವರ್ಷದಿಂದ ವರ್ಷಕ್ಕೆ ಏರುತ್ತಲೆ ಇದೆ. ಹೀಗಾಗಿ ಹಾಸನದ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿಗೆ ಜನ ಹೈರಾಣಾಗಿ ಹೋಗಿದ್ದಾರೆ.
ಆಲೂರು ತಾಲ್ಲೂಕಿನ ಕಾಣಿಗೆರೆ ಭಾಗದಲ್ಲಿ ರಾತ್ರೋ ರಾತ್ರಿ ದಾಳಿ ಮಾಡಿದ 40 ಕ್ಕೂ ಅಧಿಕ ಆನೆಗಳ ಹಿಂಡು ಕೊಯ್ಲಿಗೆ ಬಂದಿದ್ದ ನೂರಾರು ಎಕರೆ ಭತ್ತದ ಬೆಳೆಯನ್ನ ನಾಶ ಮಾಡಿವೆ. ಹೀಗಾಗಿ ಕಟಾವಿಗೆ ಬಂದಿದ್ದ ನೂರಾರು ಎಕರೆ ಬೆಳೆ ಕಳೆದುಕೊಂಡು ಅನ್ನದಾತ ಕಂಗಾಲಾಗಿದ್ದಾನೆ.
ಸಾಕಷ್ಟು ಬಾರಿ ಕಾಡಾನೆಗಳನ್ನು ಅಲ್ಲಿಂದ ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆಗ್ರಹಿಸಿದರೂ ಸಹ ಅರಣ್ಯ ಇಲಾಖೆ ರೈತರ ಮನವಿಗೆ ಸ್ಪಂದಿಸಿಲ್ಲ. ಹೀಗಾಗಿ ರೊಚಿಗೆದ್ದಿರುವ ಗ್ರಾಮಸ್ಥರು ಈ ಕೂಡಲೆ ಕಾಡಾನೆಗಳನ್ನು ಸ್ಥಳಾಂತರ ಮಾಡುವಂತೆ ಅರಣ್ಯಾಧಿಕಾರಿಗಳ ಬಳಿ ಆಗ್ರಹ ಮಾಡಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.