ರಾಜ್ಯದಲ್ಲಿಂದು ನೂರಕ್ಕೂ ಹೆಚ್ಚು ಸಾವು ಮತ್ತು ಏಳು ಸಾವಿರಕ್ಕಿಂತ ಜಾಸ್ತಿ ಸೋಂಕಿತರು

ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ಇಂದು ಸಾಯಂಕಾಲ ಒದಗಿಸಿರುವ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 122 ಜನ ಕೊವಿಡ್-19ಸೋಂಕಿಗೆ ಬಲಿಯಾಗಿದ್ದಾರೆ ಮತ್ತು ಹೊಸದಾಗಿ 7,339 ಜನರಲ್ಲಿ ಸೋಂಕು ಧೃಡಪಟ್ಟಿದೆ. ವ್ಯಾಧಿಗೆ ಬಲಿಯಾದವರ ಸಂಖ್ಯೆ 8,145 ತಲುಪಿದ್ದು ಸೋಂಕಿತರ ಸಂಖ್ಯೆ 5,26,876ಕ್ಕೇರಿದೆ. ಸೋಂಕಿತರ ಪೈಕಿ 4,23,377 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಉಳಿದ 95,335 ಸೋಂಕಿತರು ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆಯೇ, ಬೆಂಗಳೂರಿನಲ್ಲಿ ಸೋಮವಾರದಂದು 32 ಜನ ಪ್ಯಾಂಡೆಮಿಕ್​ನಿಂದಾಗಿ ಮೃತಪಟ್ಟಿದ್ದಾರೆ ಮತ್ತು […]

ರಾಜ್ಯದಲ್ಲಿಂದು ನೂರಕ್ಕೂ ಹೆಚ್ಚು ಸಾವು ಮತ್ತು ಏಳು ಸಾವಿರಕ್ಕಿಂತ ಜಾಸ್ತಿ ಸೋಂಕಿತರು
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Sep 21, 2020 | 8:29 PM

ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ಇಂದು ಸಾಯಂಕಾಲ ಒದಗಿಸಿರುವ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 122 ಜನ ಕೊವಿಡ್-19ಸೋಂಕಿಗೆ ಬಲಿಯಾಗಿದ್ದಾರೆ ಮತ್ತು ಹೊಸದಾಗಿ 7,339 ಜನರಲ್ಲಿ ಸೋಂಕು ಧೃಡಪಟ್ಟಿದೆ. ವ್ಯಾಧಿಗೆ ಬಲಿಯಾದವರ ಸಂಖ್ಯೆ 8,145 ತಲುಪಿದ್ದು ಸೋಂಕಿತರ ಸಂಖ್ಯೆ 5,26,876ಕ್ಕೇರಿದೆ.

ಸೋಂಕಿತರ ಪೈಕಿ 4,23,377 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಉಳಿದ 95,335 ಸೋಂಕಿತರು ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಾಗೆಯೇ, ಬೆಂಗಳೂರಿನಲ್ಲಿ ಸೋಮವಾರದಂದು 32 ಜನ ಪ್ಯಾಂಡೆಮಿಕ್​ನಿಂದಾಗಿ ಮೃತಪಟ್ಟಿದ್ದಾರೆ ಮತ್ತು 2,886 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದುವರೆಗೆ ರಾಜಧಾನಿಯಲ್ಲಿ ಸೋಂಕಿಗೆ ತುತ್ತಾದವರ ಸಂಖ್ಯೆ 2,689 ತಲುಪಿದೆ ಮತ್ತು ಸೋಂಕು ತಗುಲಿಸಿಕೊಂಡವರ ಸಂಖ್ಯೆ 1,97,646ಕ್ಕೆ ಮುಟ್ಟಿದೆ.

ಸೋಂಕಿತರ ಪೈಕಿ 1,53,884 ಜನ ಗುಣಮುಖರಾಗಿದ್ದಾರೆ, ಮಿಕ್ಕಿದ 41,072 ಸೋಂಕಿತರಿಗೆ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.