ಕರ್ತವ್ಯದ ವೇಳೆ ಹೃದಯಾಘಾತ, ಕೊವಿಡ್ ವಾರಿಯರ್ ಸಾವು

|

Updated on: May 27, 2020 | 6:55 PM

ಗದಗ: ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಹೃದಯಾಘಾತವಾಗಿ ಕೊವಿಡ್ ವಾರಿಯರ್ ಮೃತಪಟ್ಟಿದ್ದಾರೆ. ಆ್ಯಂಬುಲೆನ್ಸ್ ಚಾಲಕ ಉಮೇಶ್(37) ಮೃತಪಟ್ಟವರು. ಕೊಣ್ಣೂರ ಗ್ರಾಮದಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತವಾಗಿದೆ. ತಕ್ಷಣ ಚಾಲಕ ಉಮೇಶ್​ನನ್ನು ಧಾರವಾಡ ಎಸ್​ಡಿಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದ್ರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ದಾರಿ ಮಧ್ಯೆಯೇ ಉಮೇಶ್ ಮೃತಪಟ್ಟಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಉಮೇಶ್ ಮೃತಪಟ್ಟಿದ್ದರೂ ಡಿಹೆಚ್ಒ ಡಾ.ಸತೀಶ್ ಬಸರಿಗಿಡದ ಅವರಿಗೆ ಗೊತ್ತಿಲ್ಲವಂತೆ!  ಈ ಬಗ್ಗೆ ವಿಚಾರಿಸಿದ್ರೆ.. ಅದು ನನ್ನ ವ್ಯಾಪ್ತಿಗೆ ಬರಲ್ಲ ಎಂದು ಉಡಾಫೆ ಉತ್ತರವನ್ನೂ ನೀಡಿದ್ದಾರೆ.

ಕರ್ತವ್ಯದ ವೇಳೆ ಹೃದಯಾಘಾತ, ಕೊವಿಡ್ ವಾರಿಯರ್ ಸಾವು
Follow us on

ಗದಗ: ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಹೃದಯಾಘಾತವಾಗಿ ಕೊವಿಡ್ ವಾರಿಯರ್ ಮೃತಪಟ್ಟಿದ್ದಾರೆ. ಆ್ಯಂಬುಲೆನ್ಸ್ ಚಾಲಕ ಉಮೇಶ್(37) ಮೃತಪಟ್ಟವರು.

ಕೊಣ್ಣೂರ ಗ್ರಾಮದಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತವಾಗಿದೆ. ತಕ್ಷಣ ಚಾಲಕ ಉಮೇಶ್​ನನ್ನು ಧಾರವಾಡ ಎಸ್​ಡಿಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದ್ರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ದಾರಿ ಮಧ್ಯೆಯೇ ಉಮೇಶ್ ಮೃತಪಟ್ಟಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಉಮೇಶ್ ಮೃತಪಟ್ಟಿದ್ದರೂ ಡಿಹೆಚ್ಒ ಡಾ.ಸತೀಶ್ ಬಸರಿಗಿಡದ ಅವರಿಗೆ ಗೊತ್ತಿಲ್ಲವಂತೆ!  ಈ ಬಗ್ಗೆ ವಿಚಾರಿಸಿದ್ರೆ.. ಅದು ನನ್ನ ವ್ಯಾಪ್ತಿಗೆ ಬರಲ್ಲ ಎಂದು ಉಡಾಫೆ ಉತ್ತರವನ್ನೂ ನೀಡಿದ್ದಾರೆ.

Published On - 6:49 pm, Wed, 27 May 20