ಮೈಸೂರು: ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಲಸಿಕೆ ತಯಾರಿಕಾ ಕಂಪನಿ ತಯಾರಿಸಲಿರುವ ಕೋವಿಶೀಲ್ಡ್ ಲಸಿಕೆಯ ವೈದ್ಯಕೀಯ ಪ್ರಯೋಗಕ್ಕೆ ಅನಮತಿ ನೀಡಲು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಜೇಷನ್ಗೆ ಶಿಫಾರಸು ಮಾಡಲಾಗಿದೆ.
ಆಕ್ಸ್‌ಫರ್ಡ್ ವಿವಿ ಸಂಶೋಧನೆಯ ಲಸಿಕೆಯ ಮಾನವ ಪ್ರಯೋಗದ ಹಿನ್ನೆಲೆಯಲ್ಲಿ ಭಾರತದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ವೈದ್ಯಕೀಯ ಪ್ರಯೋಗ ನಡೆಸಲು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಬಳಿ ಅನುಮತಿ ಕೋರಿತ್ತು.
ಮೂರನೇ ಹಂತದ ಮಾನವರ ಮೇಲೆ ವೈದ್ಯಕೀಯ ಪ್ರಯೋಗ
ಇದೀಗ, ಭಾರತದಲ್ಲಿ ಎರಡು ಮತ್ತು ಮೂರನೇ ಹಂತದ ಮಾನವರ ಮೇಲೆ ವೈದ್ಯಕೀಯ ಪ್ರಯೋಗಕ್ಕೆ ಅನುಮತಿ ನೀಡಲು ತಜ್ಞರ ಸಮಿತಿಯೊಂದು DCGIಗೆ ಶಿಫಾರಸು ಮಾಡಿದೆ. ಈ ಯೋಜನೆಯ ಅನ್ವಯ 18 ವರ್ಷಕ್ಕಿಂತ ಮೇಲ್ಪಟ್ಟ 1,600 ಜನರ ಮೇಲೆ ಲಸಿಕೆಯ ಪ್ರಯೋಗ ಜರುಗಲಿದೆ.
ಮೈಸೂರಿನ JSS ಅಕಾಡೆಮಿ ಆಫ್ ಹೈಯರ್ ಎಜುಕೇಷನ್ & ರಿಸರ್ಚ್ ಸಂಸ್ಥೆಯಲ್ಲಿಯೂ ಈ ಪ್ರಯೋಗ ನಡೆಯಲಿದ್ದು, ದೆಹಲಿಯ AIIMS ಸೇರಿದಂತೆ 17 ಸ್ಥಳಗಳಲ್ಲಿ ಪ್ರಯೋಗ ನಡೆಸುವ ಯೋಚನೆಯಿದೆ.
Published On - 10:30 am, Sat, 1 August 20