Credit card Benefits: ಕ್ರೆಡಿಟ್​ ಕಾರ್ಡ್​ನಿಂದ ನಿಮಗೆ ಸಿಗಲಿದೆ ಈ ಐದು ಸೀಕ್ರೆಟ್​ ಲಾಭಗಳು!

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 17, 2021 | 10:08 PM

ಇ-ಕಾಮರ್ಸ್​ ತಾಣಗಳು ಕ್ರೆಡಿಟ್​ ಕಾರ್ಡ್​ ಮೇಲೆ ಸಾಕಷ್ಟು ಆಫರ್​ಗಳನ್ನು ಕೂಡ ನೀಡುತ್ತಿವೆ. ಹಾಗಾದರೆ, ಕ್ರೆಡಿಟ್​ ಕಾರ್ಡ್​ನಿಂದ ಆಗುವ ಲಾಭಗಳೇನು ಎನ್ನುವ ಬಗ್ಗೆ ಇಲ್ಲಿದೆ ವಿವರ.

Credit card Benefits: ಕ್ರೆಡಿಟ್​ ಕಾರ್ಡ್​ನಿಂದ ನಿಮಗೆ ಸಿಗಲಿದೆ ಈ ಐದು ಸೀಕ್ರೆಟ್​ ಲಾಭಗಳು!
ಕ್ರೆಡಿಟ್ ಕಾರ್ಡ್ (ಸಾಂದರ್ಭಿಕ ಚಿತ್ರ)
Follow us on

ಕ್ರೆಡಿಟ್​ ಕಾರ್ಡ್​ ಕಂಡರೆ ಇಂದಿಗೂ ಅನೇಕರಿಗೆ ಭಯವಿದೆ. ಕ್ರೆಡಿಟ್​ ಕಾರ್ಡ್​ ಬಳಕೆ ಮಾಡಲು ಆರಂಭಿಸಿದರೆ ಸಾಲದಲ್ಲಿದ್ದಂತೆ ಭಾಸವಾಗುತ್ತದೆ ಎಂಬುದು ಅನೇಕರ ನಂಬಿಕೆ. ಆದರೆ, ಕ್ರೆಡಿಕ್​ ಕಾರ್ಡ್​ ಬಳಕೆಯಿಂದ ನಿಮಗೆ ಗೊತ್ತಿಲ್ಲದೆ ಇರುವ ಅನೇಕ ಲಾಭಗಳಿವೆ. ಹೀಗಾಗಿ, ಕ್ರೆಡಿಟ್​ ಕಾರ್ಡ್​ ಸರಿಯಾಗಿ ಬಳಕೆ ಮಾಡಿಕೊಂಡರೆ ನಿಮ್ಮ ಆರ್ಥಿಕ ಯೋಜನೆಗೆಳಿಗೆ ಹೊಸ ಅರ್ಥ ಬರಲಿದೆ.

ಆಧುನಿಕ ಯುಗದಲ್ಲಿ ಕ್ರೆಡಿಟ್​ ಕಾರ್ಡ್​ ಬಳಕೆ ನಿಧಾನವಾಗಿ ಹೆಚ್ಚುತ್ತಿದೆ. ಅಷ್ಟೇ ಅಲ್ಲ, ಇ-ಕಾಮರ್ಸ್​ ತಾಣಗಳು ಕ್ರೆಡಿಟ್​ ಕಾರ್ಡ್​ ಮೇಲೆ ಸಾಕಷ್ಟು ಆಫರ್​ಗಳನ್ನು ಕೂಡ ನೀಡುತ್ತಿವೆ. ಹಾಗಾದರೆ, ಕ್ರೆಡಿಟ್​ ಕಾರ್ಡ್​ನಿಂದ ಆಗುವ ಲಾಭಗಳೇನು ಎನ್ನುವ ಬಗ್ಗೆ ಇಲ್ಲಿದೆ ವಿವರ.

1. ಸಿಬಿಲ್​ ಸ್ಕೋರ್​ ಹೆಚ್ಚುತ್ತದೆ..
ನೀವು ಬ್ಯಾಂಕ್​ಗೆ ಹೋಗಿ ಸಾಲ ಕೇಳಿದರೆ, ಅವರು ನಿಮ್ಮ ಸಿಬಿಲ್​ ಸ್ಕೋರ್​ ಚೆಕ್​ ಮಾಡುತ್ತಾರೆ. ಸಿಬಿಲ್​ ಸ್ಕೋರ್​ ಉತ್ತಮವಾಗಿದ್ದರೆ ನಿಮಗೆ ಸುಲಭವಾಗಿ ಸಾಲ ದೊರೆಯುತ್ತದೆ. ಸಿಬಿಲ್​ ಸ್ಕೋರ್​ ಹೆಚ್ಚುವಲ್ಲಿ ಕ್ರೆಡಿಟ್​ ಕಾರ್ಡ್​ನ ಪಾತ್ರ ದೊಡ್ಡದಿದೆ. ನೀವು ಕ್ರೆಡಿಟ್​ ಕಾರ್ಡ್​ ಬಳಕೆ ಮಾಡಿ, ನಂತರ ಸರಿಯಾದ ಸಮಯಕ್ಕೆ ಕ್ರೆಡಿಟ್​ ಕಾರ್ಡ್​ ಬಿಲ್​ ಪಾವತಿಸಿದರೆ, ಸಿಬಿಲ್​ ಸ್ಕೋರ್​ ಹೆಚ್ಚಲಿದೆ.

2.ಕ್ಯಾಶ್​ಬ್ಯಾಕ್​ ಆಫರ್​ಗಳು..
ಪ್ರತಿ ವರ್ಷ ಹಬ್ಬದ ಸಮಯದಲ್ಲಿ ಅಥವಾ ವಿಶೇಷ ಸಂದರ್ಭದಲ್ಲಿ ಇ-ಕಾಮರ್ಸ್​ ತಾಣಗಳು ಸಾಕಷ್ಟು ಆಫರ್​ಗಳನ್ನು ನೀಡುತ್ತವೆ. ಅಲ್ಲದೆ, ಕ್ರೆಡಿಟ್​ ಕಾರ್ಡ್​ ಬಳಕೆಯಿಂದ ಮೊಬೈಲ್​ ಅಥವಾ ಯಾವುದೇ ವಸ್ತುವನ್ನು ಖರೀದಿಸಿದರೆ ನಿಮಗೆ ಆಫರ್​ ಸಿಗುತ್ತದೆ. ಕೆಲವೊಮ್ಮೆ ಕ್ಯಾಶ್​ಬ್ಯಾಕ್​ ಸಿಕ್ಕರೆ, ಕೆಲವೊಮ್ಮೆ ಶೇ 5-15 ಆಫ್​ ಸಿಗುತ್ತದೆ. ಅಷ್ಟೇ ಅಲ್ಲದೆ, ಕ್ರೆಡಿಟ್​ ಕಾರ್ಡ್​ ಬಳಕೆಯಿಂದ ನಿಮಗೆ ಪಾಯಿಂಟ್ಸ್​​ ರಿವಾರ್ಡ್​​ಗಳು ಕೂಡ ಸಿಗಲಿವೆ.

3.ನೀವು ಎಷ್ಟು ಖರ್ಚು ಮಾಡಿದ್ದೀರಿ ಎನ್ನುವುದು ಗೊತ್ತಾಗುತ್ತದೆ..
ನೀವು ತಿಂಗಳಿಡೀ ಶಾಪಿಂಗ್​ ಮಾಡುತ್ತೀರಿ. ಆದರೆ, ಮಾಸಾಂತ್ಯಕ್ಕೆ ನೀವು ಯಾವುದರ ಮೇಲೆ ಎಷ್ಟು ಹಣ ಪಾವತಿ ಮಾಡಿದ್ದೀರಿ ಎನ್ನುವುದು ಗೊತ್ತಾಗುವುದಿಲ್ಲ. ಆದರೆ ಕ್ರೆಡಿಟ್​ ಕಾರ್ಡ್​ ಮೂಲಕ ಹಣ ಪಾವತಿ ಮಾಡಿದರೆ ನಿಮಗೆ ಸುಲಭವಾಗಿ ಎಷ್ಟು ಹಣ ಖರ್ಚು ಮಾಡಿದ್ದೀರಿ ಎನ್ನುವುದು ಗೊತ್ತಾಗುತ್ತದೆ. ಕ್ರೆಡಿಟ್​ ಕಾರ್ಡ್​ ಸ್ಟೇಟ್​ಮೆಂಟ್​ ಪಡೆಯುವ ಮೂಲಕ ನೀವು ಯಾವುದರ ಮೇಲೆ ಎಷ್ಟು ಹಣ ಖರ್ಚು ಮಾಡಿದ್ದೀರಿ ಎನ್ನುವುದನ್ನು ತಿಳಿಯಬಹುದು!

4.ಕಾರ್ಡ್​ಗಳಿಗೆ ಇರುತ್ತೆ ವಿಶೇಷ ಆಫರ್
ನೀವು ಬಳಕೆ ಮಾಡುವ ಕ್ರೆಡಿಟ್​ ಕಾರ್ಡ್​ನಲ್ಲಿ ಕೆಲವೊಮ್ಮೆ ವಿಶೇಷ ಆಫರ್​ಗಳನ್ನು ಬ್ಯಾಂಕ್​ನವರು ನೀಡಿರುತ್ತಾರೆ. ಯಾವ ಯಾವ ಆಫರ್​ಗಳು ಇದರಲ್ಲಿ ಇವೆ ಎನ್ನುವದನ್ನು ತಿಳಿದುಕೊಳ್ಳಿ. ಈ ಮೂಲಕ ಅದರ ಪೂರ್ತಿ ಬೆನಿಫಿಟ್​ ಪಡೆಯಿರಿ.

5.ಒಂದು ತಿಂಗಳ ಹಣಕ್ಕೆ ಸಿಗುತ್ತೆ ಬಡ್ಡಿ!
ಕ್ರೆಡಿಟ್​ ಕಾರ್ಡ್​ನಲ್ಲಿ ನೀವು ಬಿಲ್​ ಪಾವತಿ ಮಾಡುವುದರಿಂದ ಒಂದು ತಿಂಗಳ ಬಡ್ಡಿ ನಿಮಗೆ ಸಿಗಲಿದೆ. ಇದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. ನೀವು ಫೆಬ್ರವರಿ 6ರಂದು ಕ್ರೆಡಿಟ್​ ಕಾರ್ಡ್​ ಮೂಲಕ 20 ಸಾವಿರ ರೂಪಾಯಿಯ ವಸ್ತುವನ್ನು ಖರೀದಿ ಮಾಡುತ್ತೀರಿ. 6ನೇ ತಾರೀಕಿಗೆ ಇದನ್ನು ನೀವು ಖರೀದಿಸಿದರೂ ಇದಕ್ಕೆ ಬಿಲ್​ ಪೇ ಮಾಡಲು ನಿಮಗೆ ಮಾರ್ಚ್​ 5ರವರೆಗೆ ಅವಕಾಶ ಇರಲಿದೆ. ಅಲ್ಲಿಯವರೆಗೆ 20 ಸಾವಿರ ರೂಪಾಯಿ ನಿಮ್ಮ ಖಾತೆಯಲ್ಲೇ ಇರಲಿದೆ. ಅದಕ್ಕೆ ಬಡ್ಡಿ ಕೂಡ ನಿಮಗೆ ಸಿಗಲಿದೆ.

ಇದನ್ನೂ ಓದಿ:  ಕ್ರೆಡಿಟ್ ರೇಟಿಂಗ್ ಎಂದರೇನು? ಆರ್ಥಿಕ ಸಮೀಕ್ಷೆಯಲ್ಲಿ ಭಾರತ ಅಷ್ಟೇಕೆ ತಕರಾರು ಮಾಡಿತು?