ಅರಣ್ಯ ಸಚಿವ ಆನಂದರನ್ನು ಹುಡುಕಿಕೊಂಡು ಅವರ ಮನೆಗೇ ಬಂತು ಮೊಸಳೆ!

ಬಳ್ಳಾರಿ: ಅರಣ್ಯ ಸಚಿವ ಆನಂದ್ ಸಿಂಗ್ ನಿವಾಸದ ಬಳಿ ಮೊಸಳೆ ಪ್ರತ್ಯಕ್ಷವಾಗಿದೆ. ಜಿಲ್ಲೆಯ ಹೊಸಪೇಟೆ ನಗರದ ಬೈಪಾಸ್ ಬಳಿಯ ಸಚಿವರ ಮನೆ ಮುಂದೆ ಮೊಸಳೆ ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಯಿತು. ಎಲ್.ಎಲ್.ಸಿ. ಕಾಲುವೆಯಿಂದ ಸಚಿವರ‌ ನಿವಾಸದ ಮುಂಭಾಗದ ರಸ್ತೆಗೆ ಬಂದಿದ್ದ ಮೊಸಳೆಯನ್ನು ಕಮಲಾಪುರದ ಅಟಲ್ ವಾಜಪೇಯಿ ‌ಝೂಲಾಜಿಕಲ್ ಪಾರ್ಕ್ ಸಿಬ್ಬಂದಿ ಸೆರೆ ಹಿಡಿದು ಝೂಲಾಜಿಕಲ್ ಪಾರ್ಕ್​ಗೆ ಕೊಂಡೊಯ್ದಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದ್ದು ಅರಣ್ಯ ಸಚಿವರ ಮನೆ ಬಳಿ ಬಂದಿದ್ದ ಅತಿಥಿಯನ್ನು ಸಿಬ್ಬಂದಿ ತಕ್ಷಣ ಹಿಡಿದಿದ್ದಾರೆ.

ಅರಣ್ಯ ಸಚಿವ ಆನಂದರನ್ನು ಹುಡುಕಿಕೊಂಡು ಅವರ ಮನೆಗೇ ಬಂತು ಮೊಸಳೆ!

Updated on: Nov 11, 2020 | 10:56 AM

ಬಳ್ಳಾರಿ: ಅರಣ್ಯ ಸಚಿವ ಆನಂದ್ ಸಿಂಗ್ ನಿವಾಸದ ಬಳಿ ಮೊಸಳೆ ಪ್ರತ್ಯಕ್ಷವಾಗಿದೆ. ಜಿಲ್ಲೆಯ ಹೊಸಪೇಟೆ ನಗರದ ಬೈಪಾಸ್ ಬಳಿಯ ಸಚಿವರ ಮನೆ ಮುಂದೆ ಮೊಸಳೆ ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಯಿತು.

ಎಲ್.ಎಲ್.ಸಿ. ಕಾಲುವೆಯಿಂದ ಸಚಿವರ‌ ನಿವಾಸದ ಮುಂಭಾಗದ ರಸ್ತೆಗೆ ಬಂದಿದ್ದ ಮೊಸಳೆಯನ್ನು ಕಮಲಾಪುರದ ಅಟಲ್ ವಾಜಪೇಯಿ ‌ಝೂಲಾಜಿಕಲ್ ಪಾರ್ಕ್ ಸಿಬ್ಬಂದಿ ಸೆರೆ ಹಿಡಿದು ಝೂಲಾಜಿಕಲ್ ಪಾರ್ಕ್​ಗೆ ಕೊಂಡೊಯ್ದಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದ್ದು ಅರಣ್ಯ ಸಚಿವರ ಮನೆ ಬಳಿ ಬಂದಿದ್ದ ಅತಿಥಿಯನ್ನು ಸಿಬ್ಬಂದಿ ತಕ್ಷಣ ಹಿಡಿದಿದ್ದಾರೆ.

Published On - 8:17 am, Wed, 11 November 20