ಹುಬ್ಬಳ್ಳಿ: 60 ರೂಪಾಯಿ ಬಿಲ್ ಹೆಚ್ಚಾಗಿ ಹಾಕಿದ್ದೀರೆಂದು ಪ್ರಶ್ನಿಸಿದ್ದಕ್ಕೆ ಹೋಟೆಲ್ ಮಾಲೀಕ ಮತ್ತು ಸಿಬ್ಬಂದಿ ಸೇರಿ ಗ್ರಾಹಕರ ಮೇಲೆ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿ ನಗರದ ಪಿಬಿ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ನಡೆದಿದೆ. ನಿನ್ನೆ ತಡ ರಾತ್ರಿ ಊಟ ಮಾಡಲು ಬಂದಿದ್ದ ಪ್ರಕಾಶ ಬಿದರಕುಂದಿ ಮತ್ತು ಮುತ್ತಪ್ಪ ಬಿದರಕುಂದಿ ಎಂಬ ಇಬ್ಬರು ಗ್ರಾಹಕರು ಊಟ ಮಾಡಿದ ಬಳಿಕ ಬಿಲ್ ಕೇಳಿದ್ದಾರೆ.
ಬಿಲ್ನಲ್ಲಿ 60 ರೂಪಾಯಿ ಹೆಚ್ಚಾಗಿ ಬಿಲ್ ಹಾಕಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಹೋಟೆಲ್ ಮಾಲೀಕ ಮತ್ತು ಸಿಬ್ಬಂದಿ ಸೇರಿ ನೀರಿನ ಜಗ್ ಹಾಗೂ ಕಬ್ಬಿಣದ ರಾಡ್‌ನಿಂದ ಗ್ರಾಹಕರ ಮೇಲೆ ಹಲ್ಲೆ ಮಾಡಿದ್ದಾರೆ. ಗಾಯಾಳುಗಳಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.