ಕೇಂದ್ರ ಸರ್ಕಾರಿ ನೌಕರರಿಗೆ ಸದ್ಯದಲ್ಲೇ ಪರಿಷ್ಕೃತವಾದ ಹೆಚ್ಚಿನ ದರದ ತುಟ್ಟಿ ಭತ್ಯೆ ದೊರೆಯಲಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಮುಂದಿನ ಕಂತಿನ ತುಟ್ಟಿ ಭತ್ಯೆ (ಡಿಎ) ಜುಲೈ 1, 2021ಕ್ಕೆ ಬಾಕಿ ಇದೆ. ಕೇಂದ್ರ ಸರ್ಕಾರವು ಈ ಬಗ್ಗೆ ರಾಜ್ಯಸಭೆಗೆ ಲಿಖಿತ ಉತ್ತರವನ್ನು ನೀಡಿದೆ. ಯಾವಾಗ ಮುಂದಿನ ಕಂತಿನ ಡಿಎ ಬಿಡುಗಡೆಯ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೋ ಆಗ 1-1-2020, 1-7-2020 ಹಾಗೂ 1-1-2021ರ ದರವನ್ನು ಮತ್ತೆ ನೀಡಲಾಗುವುದು ಎಂದು ತಿಳಿಸಲಾಗಿದೆ.
ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಸಹ ಮಾತನಾಡಿ, ಈ ಹಿಂದಿನ ಮೂರು ದರಗಳನ್ನು ಮತ್ತೆ ನೀಡಲಾಗುವುದು. 1-7-2021ರಿಂದ ಕ್ಯುಮುಲೇಟಿವ್ ಪರಿಷ್ಕೃತ ದರದಲ್ಲಿ ಆರಂಭಿಸಲಾಗುವುದು ಎಂದಿದ್ದಾರೆ. ಇದರರ್ಥ ಏನೆಂದರೆ, ಪರಿಷ್ಕೃತ ಡಿಎ ದರವು ಕಳೆದ ವರ್ಷ ಸ್ಥಗಿತವಾಗಿದ್ದ ದರಕ್ಕಿಂತ ಹೆಚ್ಚಿನದಾಗಿರುತ್ತದೆ.
ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಕೇಂದ್ರ ಸರ್ಕಾರವು ಕಳೆದ ವರ್ಷ ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಡಿಎ ಅಥವಾ ಡಿಯರ್ನೆಸ್ ಅಲೋಯನ್ಸ್ ಮತ್ತು ಡಿಯರ್ನೆಸ್ ರಿಲೀಫ್ ಮೂರು ಕಂತು 1-1-2020, 1-7-2020 ಹಾಗೂ 1-1-2021ಕ್ಕೆ ಸ್ಥಗಿತಗೊಳಿಸಿತ್ತು. ಈ ಸಂಬಂಧ ಠಾಕೂರ್ ಮಾತನಾಡಿ, ಡಿಎ, ಡಿಆರ್, ಸ್ಥಗಿತಗೊಳಿಸಿದ್ದರಿಂದ ಸರ್ಕಾರಕ್ಕೆ 37,530.08 ಕೋಟಿ ರೂಪಾಯಿ ಉಳಿತಾಯ ಮಾಡಲು ಸಾಧ್ಯವಾಯಿತು ಎಂದಿದ್ದಾರೆ. ಕೋವಿಡ್- 19 ಸನ್ನಿವೇಶದಲ್ಲಿ ಆರ್ಥಿಕತೆಗೆ ಇದರಿಂದ ನೆರವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: New Wage Code: ಏಪ್ರಿಲ್ನಿಂದ ನಿಮ್ಮ ಕೈಗೆ ಬರುವ ಸಂಬಳದ ಲೆಕ್ಕಾಚಾರವೇ ಆಗಲಿದೆ ಬದಲು