ದಿನಭವಿಷ್ಯ | ಜನವರಿ 15, 2021

|

Updated on: Jan 15, 2021 | 6:37 AM

ಜನವರಿ 15, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನಭವಿಷ್ಯ

ದಿನಭವಿಷ್ಯ | ಜನವರಿ 15, 2021
ದಿನ ಭವಿಷ್ಯ
Follow us on

ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಪುಷ್ಯಮಾಸ, ಹೇಮಂತ ಋತು, ಶುಕ್ಲಪಕ್ಷ, ಬಿದಿಗೆ, ಶುಕ್ರವಾರ, ಜನವರಿ 15, 2021. ಧನಿಷ್ಥೆ ನಕ್ಷತ್ರ, ರಾಹುಕಾಲ: 11 ಇಂದು ಬೆಳಿಗ್ಗೆ 12.23. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.49. ಸೂರ್ಯಾಸ್ತ: ಸಂಜೆ 6.1ಕ್ಕೆ.

ತಾ.15-01-2021 ರ ಶುಕ್ರವಾರದ ರಾಶಿಭವಿಷ್ಯ

ಮೇಷ: ಅಪಮಾನ, ಅಪವಾದದಂತಹ ಸಮಸ್ಸೆಗೆ ಸಿಲುಕದಂತೆ ಜಾಗರೂಕರಾಗಿರಿ. ಈ ಸಮಯದಲ್ಲಿ ಮಾತನಾಡುವ ಬದಲು ಮಾತು ಕೇಳುವದು ಉತ್ತಮ. ಮಕ್ಕಳು ಶಾಲಾ ಕಾಲೇಜುಗಳಲ್ಲಿ ಸಾಧನೆ ತೋರುವರು. ಶುಭ ಸಂಖ್ಯೆ: 7

ವೃಷಭ: ಕೃಷಿಮೂಲದ ಲಾಭ ದೊರೆಯುವುದು. ಸಹೋದ್ಯೋಗಿಗಳ ಸಹಾಯ ಅಪೃಕ್ಷಿಸದೇ ಸ್ವಂತ ಬಲದಿಂದ ಕೆಲಸ ನಿರ್ವಹಿಸುವಿರಿ. ಕೈಗೊಂಡ ಕಾರ್ಯಗಳು ಯಶಸ್ವಿಯಾಗುವವು. ನೌಕರರಿಗೆ ಕಿರಿಕಿರಿಯಾಗುವ ಸಂಭವವಿದೆ. ಶುಭ ಸಂಖ್ಯೆ: 3

ಮಿಥುನ: ಹಳೆಯ ಸಾಲ ಮರುಪಾವತಿಯಾಗುವುದು. ಬೇಡವಾದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಂಭವವಿದೆ. ಆತುರತೆಯ ನಿರ್ಣಯಗಳು ಅಪಾಯ ತರಬಹುದು. ಅತೀ ವಿಶ್ವಾಸಿಕರೇ ಎದುರಾಡುವ ಸಂಭವವಿದೆ. ಶುಭ ಸಂಖ್ಯೆ: 6

ಕಟಕ: ಕೆಲಸದಲ್ಲಿ ವಿಘ್ನ ಉಂಟಾಗುವ ಸಾಧ್ಯತೆ ಇರುವುದು. ಎಚ್ಚರಿಕೆವಹಿಸಿರಿ. ಜಾರಿಕೊಳ್ಳುವ ಸ್ವಭಾವದಿಂದ ಉದ್ಯೋಗದಲ್ಲಿ ಕಿರಿಕಿರಿ ಕಂಡುಬರುವುದು. ಗೊಂದಲಕ್ಕೆ ಒಳಗಾಗದೇ ಮುನ್ನುಗ್ಗಿರಿ. ಕೊಟ್ಟಸಾಲ ಪಾವತಿಯಾಗುವುದು. ಶುಭ ಸಂಖ್ಯೆ: 4

ಸಿಂಹ: ಹೊಸ ಯೋಜನೆಗೆ ಸಂಬಂಧಿಸಿದಂತೆ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ತೊಂದರೆ ಇದ್ದರೂ ನಿಭಾಯಿಸುವಲ್ಲಿ ಸಫಲರಾಗುವಿರಿ. ಬುದ್ಧಿ ಚಂಚಲವಾಗಿ ಹಿಡಿದ ಕಾರ್ಯ ಅರ್ದಕ್ಕೆ ನಿಲ್ಲುವ ಸಂಭವವಿದೆ. ಶುಭ ಸಂಖ್ಯೆ:8

ಕನ್ಯಾ: ಉದ್ಯೋಗದ ಬಗ್ಗೆ ಆತ್ಮಸಂತೃಪ್ತಿ ಇರುವುದು. ಮನೋಚಿಂತಿತ ಕಾರ್ಯ ಕೈಗೂಡುವುದು. ಸ್ವಪ್ರಯತ್ನದಿಂದಲೇ ಎಲ್ಲವೂ ಸಾಧ್ಯವಾಗುವುದು. ಪರರ ಸಹಾಯದ ಅನಿವಾರ್ಯತೆ ಇರಲಾರದು. ಆರೋಗ್ಯದ ಕಾಳಜಿ ಇರಲಿ. ಶುಭ ಸಂಖ್ಯೆ: 5

ತುಲಾ: ಸಹೋದ್ಯೋಗಿಗಳೊಂದಿಗೆ ಮನಸ್ತಾಪವಾಗುವ ಯೋಗವಿದೆ. ಅಪೂರ್ಣ ನಿರ್ಣಯಗಳು ಅಪಾಯ ತರಬಹುದು. ಅತೀ ವಿಶ್ವಾಸಿಕರೇ ಮೋಸಮಾಡುವ ಸಂಭವವಿದೆ. ದೂರ ಪ್ರಯಾಣ ಅಥವಾ ಪರಸ್ಥಳವಾಸ ಸಂಭವ.
ಶುಭ ಸಂಖ್ಯೆ: 2

ವೃಶ್ಚಿಕ: ಗಣ್ಯರೊಂದಿಗೆ ವ್ಯವಹಾರಿಕ ಬಾಂಧವ್ಯ ವೃದ್ಧಿಯಾಗುವುದು. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ಶುಭ ಸಂಖ್ಯೆ: 1

ಧನು: ದಿನೇ ದಿನೇ ಅಭಿವೃದ್ಧಿ ತೋರಿ ವ್ಯವಹಾರಗಳೆಲ್ಲಾ ಇಷ್ಟದಂತೆ ನಡೆಯುತ್ತದೆ. ಹಲವು ರೀತಿಯಿಂದ ಧನಾಗಮನ ತೋರಿಬರುತ್ತದೆ. ಐಶ್ವರ್ಯ, ಮುಟ್ಟಿದ್ದು ಚಿನ್ನವಾಗುವ ಕಾಲ. ಸ್ಥಿರಾಸ್ತಿ ಪ್ರಾಪ್ತಿ. ಅಲ್ಪ ಅನಾರೋಗ್ಯ ತೋರಿದರೂ ಕ್ಷಣಿಕವೆನ್ನಬಹುದು. ಶುಭ ಸಂಖ್ಯೆ: 4

ಮಕರ: ಅನಿರೀಕ್ಷಿತ ಸಂಚಾರ ಒದಗಿಬಂದರೂ ತೃಪ್ತಿದಾಯಕವೆನ್ನಬಹುದು. ವ್ಯಾಪಾರಾದಿ ಉದ್ಯಮಗಳಲ್ಲಿ ಅಪೇಕಿಸಿದಂತೆ ಪ್ರಗತಿ. ಲಾಭ ತೋರಿಬರುತ್ತದೆ. ಹೊಸದಾದ ಆಲೋಚನಾ ಸಿದ್ಧಿ. ವಿಪರೀತ ಖರ್ಚು. ಶುಭ ಸಂಖ್ಯೆ: 5

ಕುಂಭ: ಹೊಸ ಯೋಜನೆಗಳು ಬೇಡ. ಸ್ಥಳಾಂತರ, ವರ್ಗಾವಣೆ, ಮನೆ ಬದಲಿ, ಅಧಿಕಾರಿ ವರ್ಗದವರಿಂದ ಕಿರಿಕಿರಿ ಇರುವುದು. ಕೊಟ್ಟ ಸಾಲ ಮರುಪಾವತಿ ಆಗಲಾರದು, ವ್ಯಾಪರಿಗಳಿಗೆ ವ್ಯವಹಾರಿಕ ತೊಂದರೆ ಆಗುವ ಸಧ್ಯತೆ ಇದೆ.
ಶುಭ ಸಂಖ್ಯೆ: 7

ಮೀನ: ಬಹುಜನರ ಪ್ರಶಂಸೆಗೆ ಪಾತ್ರವಾಗುವ ಆಡಳಿತಾತ್ಮಕ ನಿರ್ಧಾರ. ಇದ್ದಕ್ಕಿದಂತೆ ಶುಭಕರ ಒಲವು. ಸಲ್ಲುವ ವಿಚಾರದಲ್ಲಿ ಕುಟುಂಬದ ಒಗ್ಗಟ್ಟು ವೃದ್ಧಿ. ಆರ್ಥಿಕಾನೂಕೂಲದಿಂದ ಸರಳ ವ್ಯವಹಾರ. ಹೆಂಗಳೆಯರದು ಮೌನವಾದ ಕೆಲಸ. ಆದರೆ ಪರಿಣಾಮ ಜಾಸ್ತಿ . ಶುಭ ಸಂಖ್ಯೆ: 9

ಬಸವರಾಜ್ ಗುರೂಜಿ

(ಡಾ.ಬಸವರಾಜ ಗುರೂಜಿ ಸಂಪರ್ಕ ಸಂಖ್ಯೆ: 9972848937)

Published On - 6:35 am, Fri, 15 January 21