ವಿಜಯಪುರ:ದೇವಸ್ಥಾನದ ಕಟ್ಟೆಯ ಮೇಲೆ ಮೇಲ್ಜಾತಿಯವರ ಸಮನಾಗಿ ಕುಳಿತಿದ್ದಕ್ಕೆ, ದಲಿತ ಸಮಾಜದ ಯುವಕನ ಹತ್ಯೆ ನಡೆದಿರುವ ಶಂಕೆ ವಿಜಯಪುರ ಜಿಲ್ಲೆಯಾದ್ಯಂತ ಈಗ ಭಾರಿ ತಲ್ಲಣ ಮೂಡಿಸಿದೆ.
ಕೆಲವು ದಿನಗಳ ಹಿಂದೆ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ, ಮೇಲ್ಜಾತಿಯವರ ಸಮಾನಾಗಿ ದೇವಸ್ಥಾನದ ಕಟ್ಟೆಯ ಮೇಲೆ ಅನಿಲ್ ಕುಳಿತಿದ್ದ. ಇದನ್ನು ಪ್ರಶ್ನಿಸಿದ ಸಿದ್ದು ಬಿರಾದಾರ್, ಅನಿಲ್ ಜೊತೆ ಜಗಳ ಮಾಡಿದ್ದ. ಈ ದ್ವೇಷದ ಹಿನ್ನೆಲೆಯಿಂದ ಸಿದ್ದು ಬಿರಾದಾರ್ ಹಾಗೂ ಸಂತೋಷ್ ಇಬ್ಬರು ಸೇರಿ ಅನಿಲ್ನನ್ನು ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.
ಅನಿಲ್ ಮೃತದೇಹವನ್ನು ಸಿಂದಗಿ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಇಟ್ಟು ಸಂಬಂಧಿಕರು ಹಾಗೂ ಕೆಲವು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ. ಹಾಗೂ ಇಂಥ ಘಟನೆ ಮತ್ತೆಲ್ಲೂ ಜರುಗಬಾರದು, ಹೀಗಾಗಿ ಅನಿಲ್ ಹತ್ಯೆ ಮಾಡಿದವರನ್ನು ಕೂಡಲೇ ಬಂಧಿಸಬೇಕೆಂದು ಕುಟುಂಬಸ್ಥರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.