
ಬೆಂಗಳೂರು: ಆರ್.ಆರ್.ನಗರದಲ್ಲಿ ಮುನಿರತ್ನ ಪರ ಚುನಾವಣಾ ಪ್ರಚಾರ ನಡೆಸಿದ ನಟ ದರ್ಶನ್, ನಟಿ ಅಮೂಲ್ಯ ಹಾಗೂ ಪಕ್ಷದ ಇತರೆ ರಾಜಕೀಯ ನಾಯಕರಿಗೆ ಕಂದಾಯ ಸಚಿವ ಆರ್ ಅಶೋಕ್ ಮನೆಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಜಾಲಹಳ್ಳಿ ವಿಲೇಜ್ ಸರ್ಕಲ್ನಲ್ಲಿ ನಟ ದರ್ಶನ್ ಸಾರ್ವಜನಿಕ ಭಾಷಣ ಮುಕ್ತಾಯವಾದ ಬಳಿಕ ಒಂದು ಗಂಟೆಗಳ ಕಾಲ ಭೋಜನ ವಿಶ್ರಾಂತಿ ಪಡೆಯಲಾಗಿದೆ.
ಸದ್ಯ, ಸಚಿವ ಅಶೋಕ್ ಮನೆಗೆ ತೆರಳಿದ ನಾಯಕರು ಹಾಗೂ ನಟರಿಗೆ ಭೂರಿಭೋಜನವನ್ನೇ ಏರ್ಪಡಿಸಲಾಗಿತ್ತು. ಅಪ್ಪಟ ಸಸ್ಯಾಹಾರಿ ಭೋಜನದ ವ್ಯವಸ್ಥೆ ಮಾಡಲಾಗಿದ್ದು ಪ್ರಚಾರದಿಂದ ದಣಿವರಿದಿದ್ದ ದರ್ಶನ್ ಮತ್ತು ಎಲ್ಲರಿಗೂ ಚಪಾತಿ- ಪಲ್ಯ, ಮುದ್ದೆ- ಸಾರು ಮತ್ತು ಈರುಳ್ಳಿ ಪಕೋಡಾವನ್ನು ಉಣಬಡಿಸಲಾಯಿತು.
ಭೂರಿ ಭೋಜನ ಸವಿದ ನಟ ದರ್ಶನ್ ಕೊಂಚ ವಿಶ್ರಾಂತಿ ಪಡೆದ ಬಳಿಕ ಮತ್ತೆ ಪ್ರಚಾರಕ್ಕೆ ಇಳಿದರು. ಇಂದು ಸಂಜೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಹ ಪ್ರಚಾರಕ್ಕೆ ಎಂಟ್ರಿ ಕೊಡಲಿದ್ದಾರೆ. ಜಾಲಹಳ್ಳಿ ವಿಲೇಜ್ ಭಾಗದಲ್ಲಿ ಪ್ರಚಾರ ಮಾಡಲಿರೋ ಬೊಮ್ಮಾಯಿ ಮುನಿರತ್ನ ಪರ ಮತಬೇಟೆಯಲ್ಲಿ ಭಾಗಿಯಾಗಲಿದ್ದಾರೆ.
Published On - 4:39 pm, Fri, 30 October 20