ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಸಾಂಪ್ರದಾಯಿಕ ಪೂಜೆ; ಗಜಪಯಣಕ್ಕೆ ಚಾಲನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2020 ರ ಭಾಗವಾಗಿ ಜಲ್ಲೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇದರ ಅಂಗವಾಗಿ ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಇಂದು ದಸರಾ ಗಜಪಡೆಗೆ ಪೂಜೆ ಸಲ್ಲಿಸಲಾಯಿತು. ಜಿಲ್ಲಾಡಳಿತದಿಂದ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿಲಾಯಿತು. ತುಲಾ ಲಗ್ನ ಸಮಯ 10:10 ರಿಂದ 11 ರ ಶುಭ ಲಗ್ನದಲ್ಲಿ ಗಜಪಡೆಗೆ ಪೂಜೆ ಸಲ್ಲಿಸಲಾಯಿತು. ಆರ್ಚಕರಾದ ಪ್ರಹ್ಲಾದ ರಾವ್ ನೇತೃತ್ವದಲ್ಲಿ ಪೂಜೆ ನೆರವೇರಿಸಿಲಾಯಿತು. ಪೂಜೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಹ ಭಾಗಿಯಾಗಿದ್ದರು. ಕ್ಯಾಪ್ಟನ್​ ಅಭಿಮನ್ಯು ಸೇರಿದಂತೆ ಗಜಪಡೆಗೆ […]

ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಸಾಂಪ್ರದಾಯಿಕ ಪೂಜೆ; ಗಜಪಯಣಕ್ಕೆ ಚಾಲನೆ
Edited By:

Updated on: Oct 16, 2020 | 4:55 PM

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2020 ರ ಭಾಗವಾಗಿ ಜಲ್ಲೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇದರ ಅಂಗವಾಗಿ ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಇಂದು ದಸರಾ ಗಜಪಡೆಗೆ ಪೂಜೆ ಸಲ್ಲಿಸಲಾಯಿತು. ಜಿಲ್ಲಾಡಳಿತದಿಂದ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿಲಾಯಿತು.
ತುಲಾ ಲಗ್ನ ಸಮಯ 10:10 ರಿಂದ 11 ರ ಶುಭ ಲಗ್ನದಲ್ಲಿ ಗಜಪಡೆಗೆ ಪೂಜೆ ಸಲ್ಲಿಸಲಾಯಿತು. ಆರ್ಚಕರಾದ ಪ್ರಹ್ಲಾದ ರಾವ್ ನೇತೃತ್ವದಲ್ಲಿ ಪೂಜೆ ನೆರವೇರಿಸಿಲಾಯಿತು. ಪೂಜೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಹ ಭಾಗಿಯಾಗಿದ್ದರು.

ಕ್ಯಾಪ್ಟನ್​ ಅಭಿಮನ್ಯು ಸೇರಿದಂತೆ ಗಜಪಡೆಗೆ ಅಷ್ಟಗಂಧ, ಅರಶಿನ ಮತ್ತು ಕುಂಕುಮ ಹಚ್ಚಿದ ಬಳಿಕ ಪುಷ್ಪಾರ್ಚನೆ ಮಾಡಿ ಗಜಪಯಣಕ್ಕೆ ಚಾಲನೆ ನೀಡಲಾಯಿತು.

Published On - 1:48 pm, Thu, 1 October 20