ಕಾಶ್ಮೀರದ ಕತ್ರಾ-ರೇಸಿ ಸ್ಟೇಷನ್ ಮಾರ್ಗದಲ್ಲಿ ಸಂಚರಿಸಲು ಸಿದ್ಧವಾಗಿದೆ ಸ್ಪೆಷಲ್ ರೈಲು..

ಜೂನ್ 2021 ರ ವೇಳೆಗೆ ಕಾಶ್ಮೀರ ಕಣಿವೆಗೆ ಸಂಪರ್ಕಿಸುವ ಜಮ್ಮು-ಬಾರಾಮುಲ್ಲಾ 326 ಕಿ.ಮೀ ಟ್ರ್ಯಾಕ್‌ನ ರೈಲ್ವೆ ಸೇತುವೆ ನಿರ್ಮಾಣ ಹಂತವನ್ನು ತಲುಪಲಿದೆ. ಇದೊಂದು ಸೂಪರ್ ಮೆಗಾ ಸೇತುವೆಯಾಗಿದ್ದು ಇದರ ರಚನೆ ವಿಸ್ಮಯವಾಗಿದೆ. ರೈಲ್ವೆ ಹಳಿಗಳ ಮೂಲಕ ಜಮ್ಮು ಮತ್ತು ಕಾಶ್ಮೀರದ ಕತ್ರಾ-ರೇಸಿ ಸ್ಟೇಷನ್ ಯಾರ್ಡ್‌ಗಳ ನಡುವೆ ಮೆಗಾ ಸೇತುವೆಯ ನಿರ್ಮಾಣವನ್ನು ಜೂನ್ 2021 ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಿದೆ. 326 ಕಿ.ಮೀ. ಟ್ರ್ಯಾಕ್‌ನಲ್ಲಿ, 215 ಕಿ.ಮೀ ಟ್ರ್ಯಾಕ್ ಈಗಾಗಲೇ ಪೂರ್ಣಗೊಂಡಿದೆ. ಈ ಬಗ್ಗೆ ಮಾಹಿತಿ ನೀಡುತ್ತಾ ಜನರಲ್ […]

ಕಾಶ್ಮೀರದ ಕತ್ರಾ-ರೇಸಿ ಸ್ಟೇಷನ್ ಮಾರ್ಗದಲ್ಲಿ ಸಂಚರಿಸಲು ಸಿದ್ಧವಾಗಿದೆ ಸ್ಪೆಷಲ್ ರೈಲು..
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Oct 01, 2020 | 1:05 PM

ಜೂನ್ 2021 ರ ವೇಳೆಗೆ ಕಾಶ್ಮೀರ ಕಣಿವೆಗೆ ಸಂಪರ್ಕಿಸುವ ಜಮ್ಮು-ಬಾರಾಮುಲ್ಲಾ 326 ಕಿ.ಮೀ ಟ್ರ್ಯಾಕ್‌ನ ರೈಲ್ವೆ ಸೇತುವೆ ನಿರ್ಮಾಣ ಹಂತವನ್ನು ತಲುಪಲಿದೆ. ಇದೊಂದು ಸೂಪರ್ ಮೆಗಾ ಸೇತುವೆಯಾಗಿದ್ದು ಇದರ ರಚನೆ ವಿಸ್ಮಯವಾಗಿದೆ.

ರೈಲ್ವೆ ಹಳಿಗಳ ಮೂಲಕ ಜಮ್ಮು ಮತ್ತು ಕಾಶ್ಮೀರದ ಕತ್ರಾ-ರೇಸಿ ಸ್ಟೇಷನ್ ಯಾರ್ಡ್‌ಗಳ ನಡುವೆ ಮೆಗಾ ಸೇತುವೆಯ ನಿರ್ಮಾಣವನ್ನು ಜೂನ್ 2021 ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಿದೆ. 326 ಕಿ.ಮೀ. ಟ್ರ್ಯಾಕ್‌ನಲ್ಲಿ, 215 ಕಿ.ಮೀ ಟ್ರ್ಯಾಕ್ ಈಗಾಗಲೇ ಪೂರ್ಣಗೊಂಡಿದೆ.

ಈ ಬಗ್ಗೆ ಮಾಹಿತಿ ನೀಡುತ್ತಾ ಜನರಲ್ ಮ್ಯಾನೇಜರ್ ರಾಜೀವ್ ಚೌಧರಿ, ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ಪರ್ಯಾಯ ಮತ್ತು ವಿಶ್ವಾಸಾರ್ಹ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಜಮ್ಮುವಿನಿಂದ ಬಾರಾಮುಲ್ಲಾವರೆಗಿನ 326 ಕಿ.ಮೀ ಉದ್ದದ ರೈಲ್ವೆ ಮಾರ್ಗವನ್ನು ಭಾರತೀಯ ರೈಲ್ವೆ ಕೊರೆದಿದ್ದು, ಅದು ಕಾಶ್ಮೀರ ಕಣಿವೆಯಲ್ಲಿ ಸೇರಲಿದೆ.

ಒಟ್ಟು 326 ಕಿ.ಮೀ ಉದ್ದದಲ್ಲಿ, 215 ಕಿ.ಮೀ.ಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಮತ್ತು ಈ ಮಾರ್ಗದಲ್ಲಿ ರೈಲುಗಳು ಓಡಾಡುತ್ತಿವೆ. ಕತ್ರ-ಬನಿಹಾಲ್ ವಿಭಾಗದ (111 ಕಿಮೀ) ಮಧ್ಯಪ್ರವೇಶದ ಕೆಲಸ ಪ್ರಗತಿಯಲ್ಲಿದೆ ಎಂದಿದ್ದಾರೆ.