Dating App: ಟಿಕ್​ಟಾಕ್​ ಬಳಕೆದಾರರನ್ನು ಸೆಳೆಯಲೆಂದೇ ಬಂತು ಹೊಸ ಡೇಟಿಂಗ್​ ಆ್ಯಪ್​ ಸ್ನ್ಯಾಕ್​

Snack Dating App: ಸ್ನ್ಯಾಕ್​ನಲ್ಲಿ ಬೇರೆ ಡೇಟಿಂಗ್​ ಆ್ಯಪ್​ಗಳಲ್ಲಿರುವ ಎಲ್ಲಾ ಸೌಲಭ್ಯಗಳೂ ಇರಲಿವೆ. ಆದರೆ, ಡೇಟಿಂಗ್​ ಆ್ಯಪ್​ಗಳಲ್ಲಿರುವಂತೆ ಫೋಟೋ ಅಪ್ಲೋಡ್​ ಮಾಡುವ ಬದಲು ಟಿಕ್​ಟಾಕ್​ನಲ್ಲಿ ಮಾಡುವಂತೆ ಶಾರ್ಟ್​ ವಿಡಿಯೋಗಳನ್ನು ಅಪ್ಲೋಡ್ ಮಾಡಲು ಅವಕಾಶ ಇರುತ್ತದೆ.

Dating App: ಟಿಕ್​ಟಾಕ್​ ಬಳಕೆದಾರರನ್ನು ಸೆಳೆಯಲೆಂದೇ ಬಂತು ಹೊಸ ಡೇಟಿಂಗ್​ ಆ್ಯಪ್​ ಸ್ನ್ಯಾಕ್​
ಸಂಗ್ರಹ ಚಿತ್ರ
Follow us
Skanda
| Updated By: Lakshmi Hegde

Updated on: Feb 25, 2021 | 3:02 PM

ಮಹಿಳೆಯರಿಗಾಗಿಯೇ ರೂಪುಗೊಂಡ ಬಂಬಲ್​ ಆ್ಯಪ್​ ಅತಿದೊಡ್ಡ ಮಟ್ಟದ ಯಶಸ್ಸಿಗೆ ಸಾಕ್ಷಿಯಾದ ಬೆನ್ನಲ್ಲೇ ಅದೇ ಮಾದರಿಯ ಮತ್ತೊಂದು ಆ್ಯಪ್​ ಮಾರುಕಟ್ಟೆಗೆ ಬಹು ನಿರೀಕ್ಷೆಯೊಂದಿಗೆ ಕಾಲಿಟ್ಟಿದೆ. ಕಿಂಬರ್ಲಿ ಕಪ್ಲಾನ್​ ಒಡೆತನದ ಸ್ನ್ಯಾಕ್​ ಹೆಸರಿನ ಡೇಟಿಂಗ್​ ಆ್ಯಪ್​ ಭಾರೀ ಸದ್ದು ಮಾಡುತ್ತಿದೆ. ಈಗಿರುವ ಡೇಟಿಂಗ್​ ಆ್ಯಪ್​ಗಳಿಗಿಂತಲೂ ಹಲವು ವಿಶೇಷತೆಗಳೊಂದಿಗೆ ರೂಪುಗೊಂಡಿರುವ ಸ್ನ್ಯಾಕ್​ನಲ್ಲಿ ಟಿಕ್​ಟಾಕ್​ ಅಭಿಮಾನಿಗಳನ್ನು ಸೆಳೆಯುವ ಅಂಶವೂ ಇದೆಯಂತೆ. ಹೀಗಾಗಿ ಟಿಕ್​ಟಾಕ್​ ಮತ್ತು ಡೇಟಿಂಗ್​ ಆ್ಯಪ್​ನ ಸಮ್ಮಿಲನದಂತೆ ಕಂಡುಬರುವ ಈ ಆ್ಯಪ್​ ಹೆಚ್ಚಿನ ಜನರನ್ನು ಸೆಳೆಯುವ ನಿರೀಕ್ಷೆ ಇದೆ.

ಸ್ನ್ಯಾಕ್​ ಸಂಸ್ಥಾಪಕಿ ಕಿಂಬರ್ಲಿ ಕಪ್ಲಾನ್​ ಅವರು ಈ ಹಿಂದೆ ‘ಪ್ಲೆಂಟಿ ಆಫ್​ ಫಿಶ್​’ನಂತಹ ಡೇಟಿಂಗ್​ ಆ್ಯಪ್​ನಲ್ಲಿ ಕೆಲಸ ಮಾಡುವಾಗ, ಹೊಸ ತಲೆಮಾರಿನ ಯುವಕ ಯುವತಿಯರು ಡೇಟಿಂಗ್​ ಆ್ಯಪ್​ನಲ್ಲಿ ಪರಿಚಿತಗೊಂಡು ನಂತರ ಚಾಟ್​ ಮಾಡಲು ಟಿಕ್​ಟಾಕ್​, ಇನ್​ಸ್ಟಾಗ್ರಾಂ, ಸ್ನ್ಯಾಪ್​ಚಾಟ್​ನಂತಹ ಆ್ಯಪ್​ಗಳ ಮೊರೆ ಹೋಗುವುದನ್ನು ಗಮನಿಸಿದ್ದರಂತೆ ಹೀಗಾಗಿ, ಡೇಟಿಂಗ್​ ಆ್ಯಪ್​ಗಳಲ್ಲಿರುವ ಕೊರತೆಯನ್ನು ನೀಗಿಸಲೆಂದೇ ಸ್ನ್ಯಾಕ್​ ಮೂಲಕ ಮಾರುಕಟ್ಟೆಗೆ ಲಗ್ಗೆ ಇಡಲಾಗಿದೆ ಎಂದು ಕಪ್ಲಾನ್ ತಿಳಿಸಿದ್ದಾರೆ.

ಸ್ನ್ಯಾಕ್​ ಹೇಗೆ ಕೆಲಸ ಮಾಡಲಿದೆ? ಸ್ನ್ಯಾಕ್​ನಲ್ಲಿ ಬೇರೆ ಡೇಟಿಂಗ್​ ಆ್ಯಪ್​ಗಳಲ್ಲಿರುವ ಎಲ್ಲಾ ಸೌಲಭ್ಯಗಳೂ ಇರಲಿವೆ. ಆದರೆ, ಡೇಟಿಂಗ್​ ಆ್ಯಪ್​ಗಳಲ್ಲಿರುವಂತೆ ಫೋಟೋ ಅಪ್ಲೋಡ್​ ಮಾಡುವ ಬದಲು ಟಿಕ್​ಟಾಕ್​ನಲ್ಲಿ ಮಾಡುವಂತೆ ಶಾರ್ಟ್​ ವಿಡಿಯೋಗಳನ್ನು ಅಪ್ಲೋಡ್ ಮಾಡಲು ಅವಕಾಶ ಇರುತ್ತದೆ. ಈ ಮೂಲಕ ತನಗೆ ಸೂಕ್ತ ಎನಿಸುವ ವ್ಯಕ್ತಿಯನ್ನು ಫೋಟೋಗಳ ಮೂಲಕ ನೋಡುವ ಬದಲು ವಿಡಿಯೋಗಳಲ್ಲಿ ನೋಡಿ ಆರಿಸಿಕೊಳ್ಳಬಹುದಾಗಿದೆ. ಇನ್ನು ಕ್ರಿಯಾತ್ಮಕವಾಗಿ ವಿಡಿಯೋ ಮಾಡಲು ಅವಕಾಶವನ್ನೂ ನೀಡಲಾಗಿದ್ದು, ಅದು ಮುಖ್ಯ ಆಕರ್ಷಣೆ ಆಗಿರಲಿದೆ ಎಂದು ಸ್ನ್ಯಾಕ್ ಹೇಳಿಕೊಂಡಿದೆ.

ಸ್ನ್ಯಾಕ್​ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಸಂಸ್ಥಾಪಕಿ ಕಪ್ಲಾನ್​ ಈ ಆ್ಯಪ್​ ತಯಾರಿಕೆಗೆ ಟಿಕ್​ಟಾಕ್​ನಂತಹ ಆ್ಯಪ್​ಗಳೇ ಕಾರಣ. ಟಿಕ್​ಟಾಕ್​ ಬಳಸುವಾಗೊಮ್ಮೆ ಜನರು ಅಲ್ಲಿ ಡೇಟಿಂಗ್​ ಮಾಡಲು ಹೆಚ್ಚು ಇಷ್ಟಪಡುತ್ತಿದ್ದಾರೆ ಎಂಬ ಅಂಶ ಗಮನ ಸೆಳೆಯಿತು. ಆದರೆ, ಟಿಕ್​ಟಾಕ್​ನ ಮೂಲ ಉದ್ದೇಶ ಡೇಟಿಂಗ್​ ಆಗಿರಲಿಲ್ಲ. ಹೀಗಾಗಿ ಅದರಿಂದ ಪ್ರೇರಣೆ ಪಡೆದ ನಾನು ಸ್ನ್ಯಾಕ್​ ಅಭಿವೃದ್ಧಿಪಡಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಸದ್ಯ ಇನ್​ಸ್ಟಾಗ್ರಾಂ ಮತ್ತು ಟಿಕ್​ಟಾಕ್​ನ ಎಲ್ಲಾ ಅಂಶಗಳನ್ನು ಒಳಗೊಂಡು ರೂಪುಗೊಂಡಿರುವ ಸ್ನ್ಯಾಕ್​ ಮಾರುಕಟ್ಟೆಯಲ್ಲಿ ಹೆಚ್ಚಿನ ಬಳಕೆದಾರರನ್ನು ಸೆಳೆಯುವ ನಿರೀಕ್ಷೆ ಇದೆ. ಅಲ್ಲದೇ ಡೇಟಿಂಗ್​ ಮಾಡಲಿಚ್ಛಿಸುವ ಯುವ ಸಮೂಹದ ಮೊದಲ ಆಯ್ಕೆಯೂ ಇದೇ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು ಜಾಗತಿಕ ಮಾರುಕಟ್ಟೆಯ ಡೇಟಿಂಗ್​ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಟಿಕ್​ಟಾಕ್​ ಮತ್ತು ಟಿಂಡರ್​ ಸಮ್ಮಿಶ್ರಣದಿಂದ ಹುಟ್ಟಿತು ಹೊಸ ಆ್ಯಪ್​!

ಇರಲಿ ಎಚ್ಚರ, ಬೇಡ ಆತುರ.. Dating App ಬಳಸುವ ಮುನ್ನ ನೀವು ಓದಲೇಬೇಕಾದ ಸ್ಟೋರಿ ಇದು

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು