ದಾವಣಗೆರೆ ಜ್ಯೋತಿಷಿಗೆ 9.20 ಲಕ್ಷ ರೂ. ನಾಮ ಹಾಕಿದ ಅಮೆರಿಕಾದ ರಚೆಲ್!
ದಾವಣಗೆರೆ: ಗಿಫ್ಟ್ ಆಸೆಗೆ ಬಿದ್ದು ಜ್ಯೋತಿಷಿಯೊಬ್ಬರು 9.20 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗಡಿಮಾಕುಂಟೆ ಬಳಿ ನಡೆದಿದೆ. ಗಡಿಮಾಕುಂಟೆ ಗ್ರಾಮದ ಜ್ಯೋತಿಷಿ ಹಾಗೂ ಪೋಸ್ಟ್ ಮ್ಯಾನ್ ಆಗಿರು ವಿರೂಪಾಕ್ಷಯ್ಯ 9.20 ಲಕ್ಷ ರೂ ಕಳೆದುಕೊಂಡಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದ ರಚೆಲ್ ಎಂಬಾತನಿಗೆ ಫೇಸ್ಬುಕ್ನಲ್ಲಿ ವಿರೂಪಾಕ್ಷಯ್ಯ ಭವಿಷ್ಯ ಹೇಳಿದ್ದರು. ನೀವು ಹೇಳಿದ ಭವಿಷ್ಯದಂತೆ ನನ್ನ ಜೀವನದಲ್ಲಿ ನಡೆದಿದೆ. ನೀವು ಹೇಳಿದಂತೆ ನನ್ನ ಜೀವನದಲ್ಲಿ ಎಲ್ಲ ಒಳ್ಳೆಯದಾಗಿದೆ. ನಿಮಗೆ ಗಿಫ್ಟ್ ನೀಡಬೇಕು ಅದಕ್ಕೆ ಶುಲ್ಕವಾಗುತ್ತೆ ಎಂದಿದ್ದ. […]

ದಾವಣಗೆರೆ: ಗಿಫ್ಟ್ ಆಸೆಗೆ ಬಿದ್ದು ಜ್ಯೋತಿಷಿಯೊಬ್ಬರು 9.20 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗಡಿಮಾಕುಂಟೆ ಬಳಿ ನಡೆದಿದೆ.
ಗಡಿಮಾಕುಂಟೆ ಗ್ರಾಮದ ಜ್ಯೋತಿಷಿ ಹಾಗೂ ಪೋಸ್ಟ್ ಮ್ಯಾನ್ ಆಗಿರು ವಿರೂಪಾಕ್ಷಯ್ಯ 9.20 ಲಕ್ಷ ರೂ ಕಳೆದುಕೊಂಡಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದ ರಚೆಲ್ ಎಂಬಾತನಿಗೆ ಫೇಸ್ಬುಕ್ನಲ್ಲಿ ವಿರೂಪಾಕ್ಷಯ್ಯ ಭವಿಷ್ಯ ಹೇಳಿದ್ದರು. ನೀವು ಹೇಳಿದ ಭವಿಷ್ಯದಂತೆ ನನ್ನ ಜೀವನದಲ್ಲಿ ನಡೆದಿದೆ. ನೀವು ಹೇಳಿದಂತೆ ನನ್ನ ಜೀವನದಲ್ಲಿ ಎಲ್ಲ ಒಳ್ಳೆಯದಾಗಿದೆ. ನಿಮಗೆ ಗಿಫ್ಟ್ ನೀಡಬೇಕು ಅದಕ್ಕೆ ಶುಲ್ಕವಾಗುತ್ತೆ ಎಂದಿದ್ದ.
ಇದನ್ನು ನಂಬಿದ ವಿರೂಪಾಕ್ಷಯ್ಯ ರಚೆಲ್ ಬ್ಯಾಂಕ್ ಖಾತೆಗೆ ಹಣ ಹಾಕಿದ್ದಾರೆ. ಬಳಿಕ ಗಿಫ್ಟ್ ಇಲ್ಲ, ಹಣವೂ ನೀಡದೆ ರಚೆಲ್ ಎಸ್ಕೇಪ್ ಆಗಿದ್ದಾನೆ. ಶುಲ್ಕದ ನೆಪದಲ್ಲಿ 9.20 ಲಕ್ಷ ರೂಪಾಯಿ ವಂಚನೆ ಮಾಡಿದ್ದಾನೆ. ಈ ಕುರಿತು ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.