ನಡುರಸ್ತೆಯಲ್ಲೇ ಜಿಲ್ಲಾಧಿಕಾರಿಯಿಂದ RIಗೆ ಕಪಾಳಮೋಕ್ಷ

ಚಿಕ್ಕಮಗಳೂರು: ನಡುರಸ್ತೆಯಲ್ಲೇ ಜಿಲ್ಲಾಧಿಕಾರಿಯಿಂದ RIಗೆ ಕಪಾಳಮೋಕ್ಷವಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹಿರೇಬೈಲ್​ನಲ್ಲಿ ಡಿಸಿ ಬಗಾದಿ ಗೌತಮ್‌ ಕಳಸ ಕಂದಾಯ ನಿರೀಕ್ಷಕ ಅಜ್ಜೇಗೌಡರಿಗೆ ಕಪಾಳಕ್ಕೆ ಬಾರಿಸಿದ್ದಾರೆ. ಪ್ರವಾಹ ಸಂದರ್ಭದಲ್ಲಿ ಅಗತ್ಯವಸ್ತುಗಳನ್ನು ನೀಡಲು ಸೂಚನೆ ನೀಡಲಾಗಿತ್ತು. ನಂತರ RI ಸೂಚನೆಯಂತೆ ಪ್ರವಾಹ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಜನರು ಸಹಕಾರ ನೀಡಿದ್ದರು. ಆದರೆ ಅದಕ್ಕೆ ಈವರೆಗೆ RI ಹಣ ನೀಡದ ಹಿನ್ನೆಲೆ ಸ್ಥಳೀಯ ಅಂಗಡಿ ಮಾಲೀಕರು ಡಿಸಿಗೆ ದೂರು ನೀಡಿದ್ದರು. ಇದರಿಂದ ಕೋಪಗೊಂಡು ಡಿಸಿಯಿಂದ RIಗೆ ಕಪಾಳಮೋಕ್ಷವಾಗಿದೆ.

ನಡುರಸ್ತೆಯಲ್ಲೇ ಜಿಲ್ಲಾಧಿಕಾರಿಯಿಂದ RIಗೆ ಕಪಾಳಮೋಕ್ಷ
ಸಾಧು ಶ್ರೀನಾಥ್​

Updated on: Jan 23, 2020 | 9:27 AM

ಚಿಕ್ಕಮಗಳೂರು: ನಡುರಸ್ತೆಯಲ್ಲೇ ಜಿಲ್ಲಾಧಿಕಾರಿಯಿಂದ RIಗೆ ಕಪಾಳಮೋಕ್ಷವಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹಿರೇಬೈಲ್​ನಲ್ಲಿ ಡಿಸಿ ಬಗಾದಿ ಗೌತಮ್‌ ಕಳಸ ಕಂದಾಯ ನಿರೀಕ್ಷಕ ಅಜ್ಜೇಗೌಡರಿಗೆ ಕಪಾಳಕ್ಕೆ ಬಾರಿಸಿದ್ದಾರೆ. ಪ್ರವಾಹ ಸಂದರ್ಭದಲ್ಲಿ ಅಗತ್ಯವಸ್ತುಗಳನ್ನು ನೀಡಲು ಸೂಚನೆ ನೀಡಲಾಗಿತ್ತು.

ನಂತರ RI ಸೂಚನೆಯಂತೆ ಪ್ರವಾಹ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಜನರು ಸಹಕಾರ ನೀಡಿದ್ದರು. ಆದರೆ ಅದಕ್ಕೆ ಈವರೆಗೆ RI ಹಣ ನೀಡದ ಹಿನ್ನೆಲೆ ಸ್ಥಳೀಯ ಅಂಗಡಿ ಮಾಲೀಕರು ಡಿಸಿಗೆ ದೂರು ನೀಡಿದ್ದರು. ಇದರಿಂದ ಕೋಪಗೊಂಡು ಡಿಸಿಯಿಂದ RIಗೆ ಕಪಾಳಮೋಕ್ಷವಾಗಿದೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us