AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಮೀಣ ಭಾಗಕ್ಕೆ ಬಲ ತುಂಬಲು ಡಿಸಿಸಿ ಬ್ಯಾಂಕ್​ನಿಂದ ರೂ. 14,400 ಕೋಟಿ ಗುರಿಯನ್ನೂ ಮೀರಿ ಸಾಲ ವಿತರಣೆ

2020-21ನೇ ಸಾಲಿನಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್​ಗಳಿಂದ (ಡಿಸಿಸಿ ಬ್ಯಾಂಕ್) ಗುರಿಗೂ ಮೀರಿ ಸಾಲವನ್ನು ನೀಡಲಾಗಿದೆ. ಇದರಿಂದ ಗ್ರಾಮೀಣ ಭಾಗದ ಆರ್ಥಿಕತೆಗೆ ನೆರವಾಗುತ್ತದೆ.

ಗ್ರಾಮೀಣ ಭಾಗಕ್ಕೆ ಬಲ ತುಂಬಲು ಡಿಸಿಸಿ ಬ್ಯಾಂಕ್​ನಿಂದ ರೂ. 14,400 ಕೋಟಿ ಗುರಿಯನ್ನೂ ಮೀರಿ ಸಾಲ ವಿತರಣೆ
ಸಚಿವ ಎಸ್​.ಟಿ ​ಸೋಮಶೇಖರ್ (ಸಂಗ್ರಹ ಚಿತ್ರ)
Srinivas Mata
|

Updated on: May 31, 2021 | 5:44 PM

Share

ಬೆಂಗಳೂರು: ಕೃಷಿ ಮತ್ತು ಕೃಷಿ ಆಧಾರಿತ ಚಟುವಟಿಕೆಗಳಿಗೆ ಸಾಲ ಪಡೆಯುವುದಕ್ಕೆ ರೈತರು ಅವಲಂಬಿಸುವುದರಲ್ಲಿ ಜಿಲ್ಲಾ ಸಹಕಾರಿ ಬ್ಯಾಂಕ್​ಗಳು (ಡಿಸಿಸಿ ಬ್ಯಾಂಕ್) ಹೆಚ್ಚು. ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಸಾಲ ವಿತರಣೆಗೆ ಗುರಿ ನೀಡಲಾಗಿತ್ತು. 14,400 ಕೋಟಿ ರೂಪಾಯಿಯನ್ನು ವಿತರಿಸುವಂತೆ ನೀಡಿದ್ದ ಗುರಿಯನ್ನೂ ಮೀರಿ, ಸಹಕಾರ ಇಲಾಖೆಯಿಂದ ಸಾಲ ನೀಡಲಾಗಿದೆ. ಹಾಗಿದ್ದಲ್ಲಿ ಎಷ್ಟು ಮೊತ್ತ ಎಂದು ನೋಡುವುದಾದರೆ, 16900 ಕೋಟಿ ರೂಪಾಯಿ ಎಂದು ಗೊತ್ತಾಗುತ್ತದೆ. ಈ ಬಗ್ಗೆ ಸಹಕಾರ ಸಚಿವರಾದ ಎಸ್​.ಟಿ. ಸೋಮಶೇಖರ್ ಹೇಳಿಕೆ ನೀಡಿದ್ದಾರೆ. 2020- 21ನೇ ಸಾಲಿನಲ್ಲಿ ನೀಡಿದ್ದ ಗುರಿ ಇದಾಗಿತ್ತು. ಈ ಮೊತ್ತವನ್ನು ಮೀರಿ, ಕೃಷಿ ಹಾಗೂ ಕೃಷಿ ಆಧಾರಿತ ಚಟುವಟಿಕೆಗಳಿಗೆ ಹಣಕಾಸಿನ ನೆರವನ್ನು ನೀಡಲಾಗಿದೆ ಎಂದು ಸಚಿವರು ಅಂಕಿ- ಅಂಶವನ್ನು ತೆರೆದಿಟ್ಟರು. ಅಂದಹಾಗೆ ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯನ್ನು ಒದಗಿಸುವ ಉದ್ದೇಶದಿಂದಲೇ ಆರಂಭವಾಗಿರುವಂಥದ್ದು ಡಿಸಿಸಿ ಬ್ಯಾಂಕ್.

ಭಾರತದ ಪ್ರತಿ ಜಿಲ್ಲೆಯಲ್ಲೂ ಡಿಸಿಸಿ ಬ್ಯಾಂಕ್​ಗಳಿದ್ದು, ಮುಖ್ಯವಾಗಿ ಗ್ರಾಮೀಣ ಜನರು ಹಾಗೂ ಕೃಷಿಕರಿಗೆ ಹಣಕಾಸಿನ ನೆರವು ನೀಡುತ್ತಿದೆ. ಅದರಲ್ಲೂ ಕೊರೊನಾ ಸಂದರ್ಭದಲ್ಲಿ ಇಡೀ ದೇಶದಲ್ಲಿ ಸಕಾರಾತ್ಮಕ ಬೆಳವಣಿಗೆ ದಾಖಲಿಸಿ, ಜಿಡಿಪಿಗೆ ಉತ್ತಮ ಕೊಡುಗೆ ನೀಡಿರುವಂತಹ ವಲಯ ಕೃಷಿ ಕ್ಷೇತ್ರ. ಇನ್ನು ಗ್ರಾಮೀಣ ಭಾಗದಲ್ಲಿನ ಉದ್ಯೋಗ ಸೃಷ್ಟಿ, ಆರ್ಥಿಕ ಚಟುವಟಿಕೆಗೆ ಹಣಕಾಸು ಹರಿದಾಡುವುದು ಬಹಳ ಮುಖ್ಯ. ಆ ದೃಷ್ಟಿಯಿಂದ ನರೇಗಾದಂಥ ಯೋಜನೆಗಳ ಅನುಷ್ಠಾನವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ. ಇದು ಒಂದು ಕಡೆಯಾದರೆ, ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಅಗತ್ಯ ಇರುವ ಸಾಲ ಒದಗಿಸುತ್ತಿವೆ ಡಿಸಿಸಿ ಬ್ಯಾಂಕ್​ಗಳು.

ಸಹಕಾರ ಸಚಿವರಾದ ಎಸ್​.ಟಿ. ಸೋಮಶೇಖರ್ ಮಾತನಾಡಿ, ಸಹಕಾರಿ ಬ್ಯಾಂಕ್​ಗಳಿಗೆ 2020-21ರಲ್ಲಿ 15.400 ಕೋಟಿ ರೂಪಾಯಿ ಗುರಿ ನೀಡಿದ್ದೆವು. ಆದರೆ ಬ್ಯಾಂಕ್​ಗಳಿಂದ 17,901 ಕೋಟಿ ಮುಟ್ಟಿದ್ದಾರೆ. ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿಯ ಸಾಲದ ಗುರಿ ನೀಡಲಾಗಿತ್ತು. ನೀಡಿದ್ದ ಗುರಿಗಿಂತ ಹೆಚ್ಚಿನದನ್ನೇ ಬ್ಯಾಂಕ್​ಗಳು ಸಾಧಿಸಿವೆ. 2021- 22ನೇ ಸಾಲಿಗೆ 20,820 ಕೋಟಿ ರೂಪಾಯಿ ಗುರಿಯನ್ನು 21 ಡಿಸಿಸಿ ಬ್ಯಾಂಕ್​ಗಳಿಗೆ ನೀಡಿದ್ದೇವೆ. ಇನ್ನು 30 ಲಕ್ಷ ರೈತರನ್ನು ತಲುಪುವಂತೆ ತಿಳಿಸಿದ್ದೇವೆ. ಲಾಕ್​ಡೌನ್ ಮುಗಿದ ಬಳಿಕ 21 ಡಿಸಿಸಿ ಬ್ಯಾಂಕ್​ಗಳಿಗೆ ಭೇಟಿ ನೀಡುತ್ತೇವೆ. ಕಳೆದ ವರ್ಷದಲ್ಲಿ ಐದಾರು ಡಿಸಿಸಿ ಬ್ಯಾಂಕ್​ಗಳು ಗುರಿ ತಲುಪುವಲ್ಲಿ ಸಫಲವಾಗಿಲ್ಲ. ಈ ವರ್ಷ ಮುಟ್ಟಲೇಬೇಕು ಎಂದು ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Rural unemployment: ಗ್ರಾಮೀಣ ಪ್ರದೇಶದ ನಿರುದ್ಯೋಗ ಪ್ರಮಾಣ ಶೇ 14.3ಕ್ಕೆ ತಲುಪಿ ಒಂದು ವಾರದಲ್ಲೇ ಡಬಲ್

(Cooperative minister ST Somashekhar said, DCC banks exceed targets in distribution of loans in 2020- 21

ಪರಿಸ್ಥಿತಿಯ ಲಾಭ ಪಡೆಯಲು ಸುಲಿಗೆಗಿಳಿದ ಖಾಸಗಿ ಸಾರಿಗೆ ಸಂಸ್ಥೆಗಳು
ಪರಿಸ್ಥಿತಿಯ ಲಾಭ ಪಡೆಯಲು ಸುಲಿಗೆಗಿಳಿದ ಖಾಸಗಿ ಸಾರಿಗೆ ಸಂಸ್ಥೆಗಳು
ಅಪ್ಪು ಹೋದಮೇಲೆ ಏರಿಯಾನಲ್ಲಿ ಗಣೇಶ ಇಡುತ್ತಿಲ್ಲ: ವಿನಯ್ ರಾಜ್​ಕುಮಾರ್
ಅಪ್ಪು ಹೋದಮೇಲೆ ಏರಿಯಾನಲ್ಲಿ ಗಣೇಶ ಇಡುತ್ತಿಲ್ಲ: ವಿನಯ್ ರಾಜ್​ಕುಮಾರ್
ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಬಹುದು: ಬಾನು
ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಬಹುದು: ಬಾನು
ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಟೀಕೆಗಳಿಗೆ ಬಾನು ಟಾಂಗ್
ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಟೀಕೆಗಳಿಗೆ ಬಾನು ಟಾಂಗ್
ಪ್ರವಾಹದಿಂದ ಕೊಚ್ಚಿ ಹೋದ ಮನಾಲಿ ರಸ್ತೆ; ನದಿಯಲ್ಲಿ ಉರುಳಿ ಬಿದ್ದ ಕಾರು
ಪ್ರವಾಹದಿಂದ ಕೊಚ್ಚಿ ಹೋದ ಮನಾಲಿ ರಸ್ತೆ; ನದಿಯಲ್ಲಿ ಉರುಳಿ ಬಿದ್ದ ಕಾರು
ಮಟ್ಟಣ್ಣನವರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು: ದೂರುದಾರ
ಮಟ್ಟಣ್ಣನವರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು: ದೂರುದಾರ
ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು
ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು
ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ
ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ
ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚು: ಪ್ರಸಾದ್
ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚು: ಪ್ರಸಾದ್