‘ನನಗೆ ರಾಗಿಣಿ, ಪಾಗಿಣಿ.. ಯಾರೂ ಅಂತಾ ಗೊತ್ತಿಲ್ಲ’

ಬಾಗಲಕೋಟೆ: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿ ಬಾಗಲಕೋಟೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಸ್ವಾರಸ್ಯಕರ ಹೇಳಿಕೆ ನೀಡಿದ್ದಾರೆ. ನನಗೆ ರಾಗಿಣಿ, ಪಾಗಿಣಿ, ಯಾರೂ ಅಂತಾ ಗೊತ್ತಿಲ್ಲ. ಆದರೆ, ಯಾರೇ ತಪ್ಪು ಮಾಡಿದ್ರೂ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ. ರಾಜಕಾರಣಿಗಳ ಮಕ್ಕಳಿರಲಿ, ಶ್ರೀಸಾಮಾನ್ಯರ ಮಕ್ಕಳೇ ಇರಲಿ ಅಥವಾ ಅಧಿಕಾರಿಗಳ ಮಕ್ಕಳಿರಲಿ ಎಲ್ಲರಿಗೂ ದೇಶದ ಕಾನೂನು ಒಂದೇ ಎಂದು ಹೇಳಿದ್ದಾರೆ. ಈ ನಡುವೆ, ಡ್ರಗ್ಸ್ ಮಾಫಿಯಾ ಹಣದಿಂದ ಸರ್ಕಾರ ರಚನೆಯಾಗಿದೆ ಎಂಬು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ […]

‘ನನಗೆ ರಾಗಿಣಿ, ಪಾಗಿಣಿ.. ಯಾರೂ ಅಂತಾ ಗೊತ್ತಿಲ್ಲ’
Edited By:

Updated on: Sep 05, 2020 | 2:02 PM

ಬಾಗಲಕೋಟೆ: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿ ಬಾಗಲಕೋಟೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಸ್ವಾರಸ್ಯಕರ ಹೇಳಿಕೆ ನೀಡಿದ್ದಾರೆ.

ನನಗೆ ರಾಗಿಣಿ, ಪಾಗಿಣಿ, ಯಾರೂ ಅಂತಾ ಗೊತ್ತಿಲ್ಲ. ಆದರೆ, ಯಾರೇ ತಪ್ಪು ಮಾಡಿದ್ರೂ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ. ರಾಜಕಾರಣಿಗಳ ಮಕ್ಕಳಿರಲಿ, ಶ್ರೀಸಾಮಾನ್ಯರ ಮಕ್ಕಳೇ ಇರಲಿ ಅಥವಾ ಅಧಿಕಾರಿಗಳ ಮಕ್ಕಳಿರಲಿ ಎಲ್ಲರಿಗೂ ದೇಶದ ಕಾನೂನು ಒಂದೇ ಎಂದು ಹೇಳಿದ್ದಾರೆ.

ಈ ನಡುವೆ, ಡ್ರಗ್ಸ್ ಮಾಫಿಯಾ ಹಣದಿಂದ ಸರ್ಕಾರ ರಚನೆಯಾಗಿದೆ ಎಂಬು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಕಾರಜೋಳ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿಯವರ ಆರೋಪ ಕೇವಲ ರಾಜಕೀಯ ಆರೋಪ. ಆರೋಪದಲ್ಲಿ ಸತ್ಯಾಂಶವಿಲ್ಲ. ಹಾಗಾಗಿ, ಗಂಭೀರವಾಗಿ ಪರಿಗಣಿಸೋದು ಬೇಡ ಎಂದು ತಿರುಗೇಟು ನೀಡಿದರು.

‘ಸಂಪುಟ ವಿಸ್ತರಣೆ ಮುನ್ನ ಕಾರ್ಡ್ ಛಾಪಿಸಿ ನಿಮಗೂ ಕೊಡುತ್ತೇವೆ’
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಡಿಸಿಎಂ ಕಾರಜೋಳ ಸಚಿವ ಸಂಪುಟ ವಿಸ್ತರಣೆ ಮುನ್ನ ಕಾರ್ಡ್ ಛಾಪಿಸಿ ನಿಮಗೂ ಕೊಡುತ್ತೇವೆ ಎಂದು ನಗೆ ಚಟಾಕಿ ಹಾರಿಸಿದರು. ಸಚಿವರ ಬದಲಾವಣೆ ಕುರಿತು ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ. ಅದು ಕೇವಲ ಗಾಳಿ ಸುದ್ದಿ. ಅದಕ್ಕೆ ಹೆಚ್ಚು ಮಹತ್ವ ‌ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

Published On - 2:01 pm, Sat, 5 September 20