ಗವಿಗಂಗಾಧರೇಶ್ವರನ ಸನ್ನಿಧಿಯಲ್ಲಿ ಸಂಕ್ರಾತಿ ಸಡಗರ.. ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ
2020ರಲ್ಲಿ ಬಹುತೇಕ ಹಬ್ಬಗಳು ಕೊರೊನಾದ ಕರಿನೆರಳಲ್ಲೇ ಕಳೆದುಹೋದ್ವು. ಆದ್ರೆ ಈ ವರ್ಷವೂ ಕೂಡ ಕೊರೊನಾ ರೂಪಾಂತರಿ ಭಯವಿದೆ. ಆದ್ರೆ ವ್ಯಾಕ್ಸಿನ್ ಬಂದಿದೆ ಅನ್ನೋ ಸಂತಸವೂ ಕೂಡ ಇದೆ. ಇಂತಹ ಸಂದರ್ಭದಲ್ಲೇ ಸಂಕ್ರಾತಿ ಹಬ್ಬವೂ ಬಂದಿದೆ. ಹಾಗಾಗಿ ವರ್ಷದ ಮೊದಲ ಹಬ್ಬವಾಗಿರುವ ಸಂಕ್ರಾತಿಯನ್ನ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಬೆಂಗಳೂರು: ಸಂಕ್ರಾಂತಿ.. ವರ್ಷದ ಮೊದಲ ಹಬ್ಬ.. ಜನರಿಗೆ ಸುಗ್ಗಿ ತರುವಂತಹ ಕ್ಷಣ. ರಾಜ್ಯದ ಮೂಲೆ ಮೂಲೆಯಲ್ಲೂ ಸಂಭ್ರಮ ಕಳೆಗಟ್ಟಿದೆ. ಸಂಕ್ರಾತಿ ಹಬ್ಬದ ಪ್ರಯುಕ್ತ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿಂದು ವಿಶೇಷ ಪೂಜೆ ನಡೆಯುತ್ತಿದೆ.
ದೇವರಿಗೆ ಹಾಲಿನ ಅಭಿಷೇಕ, ರುದ್ರಾಭಿಷೇಕ, ಹೂವಿನ ಅಲಂಕಾರಗಳನ್ನು ಮಾಡಲಾಗಿದೆ. ಹಾಗೂ ಭಕ್ತರಿಗೆ ತೊಂದರೆ ಆಗದಂತೆ ಎಲ್ಲಾ ರೀತಿಯ ವ್ಯವಸ್ಥೆಗಲನ್ನು ಮಾಡಿಕೊಳ್ಳಲಾಗಿದೆ. ಇಂದು ಮಧ್ಯಾಹ್ನ 1ಗಂಟೆಯ ಬರೆಗೆ ದೇವರ ದರ್ಶನ ಪಡೆಯಲು ಅವಕಾಶವಿದ್ದು ಮತ್ತೆ 5.40ರ ಸಮಯಕ್ಕೆ ಮತ್ತೆ ದೇವಾಲಯ ತೆರೆಯಲಾಗುತ್ತೆ. ಹಬ್ಬದ ಹಿನ್ನೆಲೆಯಲ್ಲಿ ಭಕ್ತರು ದೇವರನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ.
ಇನ್ನು ದೇಗುಲದಲ್ಲಿಂದು ಸೂರ್ಯನ ರಶ್ಮಿ ಶಿವನನ್ನ ಸ್ಪರ್ಶಿಸಲಿದೆ. ಸಂಜೆ 5.17ರ ಸುಮಾರಿಗೆ ಸೂರ್ಯರಶ್ಮಿ ಶಿವನಿಗೆ ಚುಂಬಿಸಲಿದೆ. ದೇವಾಲಯದಲ್ಲಿ ನಂದಿ ಕೊಂಬಿನ ಮೂಲಕ ಹಾದು ಹೋಗುವ ಸೂರ್ಯನ ಕಿರಣಗಳು ಶಿವನಿಗೆ ನಮಸ್ಕರಿಸುತ್ತವೆ. ಹೀಗಾಗಿ ಭಕ್ತರು ಈ ಅಮೋಘ ದೃಶ್ಯ ಕಣ್ತುಂಬಿಕೊಳ್ಳಲೆಂದೆ ದೇವಾಲಯದ ಆವರದಲ್ಲಿ LED ಸ್ಕ್ರೀನ್ಗಳನ್ನು ಅಳವಡಿಸಲಾಗಿದೆ.
ಕೌತುಕಕ್ಕೆ ಸಾಕ್ಷಿಯಾಗಲಿದೆ ಗವಿಗಂಗಾಧರನ ಸನ್ನಿಧಿ, ಲಿಂಗ ಸ್ಪರ್ಶಿಸಲಿದ್ದಾನೆ ಸೂರ್ಯ