32 ಸಾವಿರ ಮಂದಿ ನೌಕರರನ್ನು ಮನೆಗೆ ಕಳುಹಿಸಲು ನಿರ್ಧರಿಸಿದ ಪ್ರತಿಷ್ಠಿತ Walt Disney ಕಂಪನಿ
ಈ ಹಿಂದೆ 28 ಸಾವಿರ ನೌಕರರನ್ನು ಕೆಲಸದಿಂದ ವಜಾಗೊಳಿಸುವ ಬಗ್ಗೆ ಹೇಳಿದ್ದ ವಾಲ್ಟ್ ಡಿಸ್ನಿ ಕಂಪೆನಿಯು ಇದೀಗ ಸಂಖ್ಯೆಯನ್ನು 32 ಸಾವಿರಕ್ಕೆ ಏರಿಸಿಕೊಂಡಿದೆ.
ಕೊರೊನಾ ಸಾಂಕ್ರಾಮಿಕ ರೋಗವು ವಿಶ್ವದೆಲ್ಲೆಡೆ ವ್ಯಾಪಿಸಿದ್ದು, ನಾನಾ ಸಮಸ್ಯೆಗಳಿಗೆ ಕಾರಣವಾಗಿದೆ. ಕೊವಿಡ್ನಿಂದ ಉಂಟಾದ ತೊಂದರೆಗಳಿಗೆ, ಅಮೆರಿಕಾ ಮೂಲದ ಸಮೂಹ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಶ್ರೀಮಂತ ಸಂಸ್ಥೆಯೂ ಹೊರತಾಗಿಲ್ಲ. ಅಲ್ಲಿನ 32 ಸಾವಿರ ಮಂದಿ ನೌಕರರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಸಮಸ್ಯೆ ಎದುರಿಸುತ್ತಿದ್ದಾರೆ.
ಈ ಹಿಂದೆ 28 ಸಾವಿರ ನೌಕರರನ್ನು ಕೆಲಸದಿಂದ ವಜಾಗೊಳಿಸುವ ಬಗ್ಗೆ ಹೇಳಿದ್ದ ವಾಲ್ಟ್ ಡಿಸ್ನಿ ಕಂಪೆನಿಯು ಇದೀಗ ಸಂಖ್ಯೆಯನ್ನು 32 ಸಾವಿರಕ್ಕೆ ಏರಿಸಿಕೊಂಡಿದೆ. ಸಂಸ್ಥೆಯಲ್ಲಿ ಒಟ್ಟು 2 ಲಕ್ಷದ 23 ಸಾವಿರ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಡಿಸ್ನಿಯ ಇತ್ತೀಚೆಗಿನ ವಾರ್ಷಿಕ ವರದಿಯಲ್ಲಿ ಹೇಳಲಾಗಿತ್ತು.
ದೂರದರ್ಶನ ಮತ್ತು ಸಿನಿಮಾ ನಿರ್ಮಾಣದ ವೆಚ್ಚದಲ್ಲಿ ಕಡಿತ? ಮುಂದಿನ ದಿನಗಳಲ್ಲಿ ಡಿವಿಡೆಂಡ್, ನಿವೃತ್ತಿ ವೇತನ ಮತ್ತು ನಿವೃತ್ತಿ ಬಳಿಕದ ವೈದ್ಯಕೀಯ ಭತ್ಯೆಗಳನ್ನು ಕಡಿತಗೊಳಿಸುವ ಬಗ್ಗೆಯೂ ಸುಳಿವು ನೀಡಿರುವ ವಾಲ್ಟ್ ಡಿಸ್ನಿ, ದೂರದರ್ಶನ ಮತ್ತು ಸಿನಿಮಾ ನಿರ್ಮಾಣದ ವೆಚ್ಚವನ್ನು ಕಡಿಮೆ ಮಾಡಲಿದೆ ಎಂದೂ ಹೇಳಲಾಗಿದೆ. ಒಂದಷ್ಟು ನಿರ್ಧಾರಗಳು ತಮ್ಮ ವಹಿವಾಟಿನ ಮೇಲೆ ಋಣಾತ್ಮಕ ಬೀರುವ ಸಾಧ್ಯತೆಗಳನ್ನೂ ಅವರು ಉಲ್ಲೇಖಿಸಿದ್ದಾರೆ.
ದೀಪಾವಳಿಯಂದು.. ದಿವಾಳಿ ಎದ್ದ ಚೀನಾ: ಡ್ರ್ಯಾಗನ್ಗೆ 40,000 ಕೋಟಿ ನಷ್ಟ!, ಹೇಗೆ?
ಪಾರ್ಕ್ ವ್ಯವಹಾರದಲ್ಲಿ ಹಿನ್ನಡೆ ವಾಲ್ಟ್ ಡಿಸ್ನಿಯು ಪಾರ್ಕ್ ವ್ಯವಹಾರದಲ್ಲಿ ಹಿನ್ನಡೆ ಅನುಭವಿಸಿದ್ದು, ಅಮೆರಿಕಾದ ಸುಮಾರು 1 ಲಕ್ಷ ನೌಕರರು ಸಂಕಷ್ಟದಲ್ಲಿದ್ದಾರೆ. ‘ಬ್ಲಾಕ್ ವಿಡೊ’ದಂಥ ಪ್ರಮುಖ ಸಿನಿಮಾಗಳು ಕೂಡ ತೆರೆಕಾಣುವ ಸೂಚನೆಗಳು ಇಲ್ಲದಿರುವುದು ಮತ್ತಷ್ಟು ಸಮಸ್ಯೆ ತಂದೊಡ್ಡಿದೆ.
ಅಬಿಗೈಲ್ ಡಿಸ್ನಿ ವಿರೋಧ ಡಿಸ್ನಿ ಕಂಪೆನಿ ಸಂಸ್ಥಾಪಕ ರಾಯ್ ಒ. ಡಿಸ್ನಿ ಮೊಮ್ಮಗಳು, ಅಬಿಗೈಲ್ ಡಿಸ್ನಿ ಮತ್ತು US ಸೆನೇಟರ್ ಎಲಿಜಬೆತ್ ವಾರೆನ್ ಈ ಕೃತ್ಯವನ್ನು ಖಂಡಿಸಿದ್ದು, ದೂರದೃಷ್ಟಿ ಇಲ್ಲದ ನಿರ್ಧಾರವಿದು ಎಂದು ಹೇಳಿದ್ದಾರೆ.
OTT ವೇದಿಕೆಯತ್ತ ಹೆಚ್ಚು ಗಮನ? ಸದ್ಯ, ಡಿಸ್ನಿ ಸಂಸ್ಥೆಯ ಪಾರ್ಕ್ಗಳು ನಷ್ಟ ಅನುಭವಿಸುತ್ತಿದ್ದು, ಡಿಸ್ನಿ ಪ್ಲಸ್ OTT ವೇದಿಕೆಯು ಲಾಭದ ಭಾಗವಾಗಿ ಗೋಚರಿಸಿದೆ.
ಈ ವರ್ಷದ ಆರಂಭದಿಂದ ಸಪ್ಟೆಂಬರ್ 30ರ ವರೆಗೆ 2.8 ಬಿಲಿಯನ್ ಡಾಲರ್ ನಷ್ಟ ಅನುಭವಿಸಿರುವ ಸಂಸ್ಥೆಯು, ಕಳೆದ ವರ್ಷ ಇದೇ ಸಮಯದಲ್ಲಿ 10.4 ಬಿಲಿಯನ್ ಡಾಲರ್ ಲಾಭ ಗಳಿಸಿತ್ತು.
ವಿದೇಶಿ ಬಂಡವಾಳ ಹೂಡಿಕೆ: 2ನೇ ಸ್ಥಾನಕ್ಕೇರಿದ ಅಮೆರಿಕಾ! ತಂತ್ರಜ್ಞಾನ ಕಂಪೆನಿಗಳಿಂದಲೇ ಹೆಚ್ಚು ಹೂಡಿಕೆ
Published On - 5:56 pm, Wed, 2 December 20