ಬಸ್​ಗಳಿಗೆ ಅಡ್ಡ ಮಲಗಿ ರಂಪಾಟ ಮಾಡಿದ ಪ್ರತಿಭಟನಾಕಾರರು; ವ್ಯಾಪಾರಿಗಳಿಗೆ ಆವಾಜ್​, ಬೈಗುಳ

ನಗರಾದದ್ಯಂತ ಪಾದಯಾತ್ರೆಯಲ್ಲಿ ತೆರಳಿ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸುತ್ತಿರುವ ಪ್ರತಿಭಟನಾಕಾರರನ್ನು ಪೊಲೀಸರು ಹಿಂಬಾಲಿಸುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.

ಬಸ್​ಗಳಿಗೆ ಅಡ್ಡ ಮಲಗಿ ರಂಪಾಟ ಮಾಡಿದ ಪ್ರತಿಭಟನಾಕಾರರು; ವ್ಯಾಪಾರಿಗಳಿಗೆ ಆವಾಜ್​, ಬೈಗುಳ
ಪ್ರತಿಭಟನಾಕಾರರು ಬಸ್​ ಎದುರು ಮಲಗಿರುವುದು (ಎಡ), ವರ್ತಕರು ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿ (ಬಲ)
Follow us
Lakshmi Hegde
| Updated By: ganapathi bhat

Updated on:Dec 05, 2020 | 10:37 AM

ಹಾಸನ: ಮರಾಠ ನಿಗಮ ಸ್ಥಾಪನೆ ವಿರೋಧಿಸಿ ಇಂದು ರಾಜ್ಯಾದ್ಯಂತ ಬಂದ್ ನಡೆಯುತ್ತಿದ್ದು, ನಗರದ ಎನ್​.ಆರ್​. ವೃತ್ತದಲ್ಲಿ ಬಸ್ ಸಂಚಾರಕ್ಕೆ ಪ್ರತಿಭಟನಾಕಾರರು ಅಡ್ಡಿಪಡಿಸಿದ್ದಾರೆ. ಬಸ್​ಗಳಿಗೆ ಅಡ್ಡ ಮಲಗಿ ರಂಪಾಟ ಮಾಡಿದ್ದಾರೆ.

ಅದಾಗಲೇ ಬೆಳಗ್ಗೆಯಿಂದ ಸಂಚಾರ ಆರಂಭಿಸಿದ್ದ ಬಸ್​ಗಳಿಗೆ ಅಡ್ಡಮಲಗಿದವರನ್ನು ಪೊಲೀಸರು ಚದುರಿಸಿದ್ದಾರೆ. ಇನ್ನು ಬಿಎಂ ರಸ್ತೆಯ ಬಳಿ ತೆರೆದಿರುವ ಹೋಟೆಲ್, ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುತ್ತಿದ್ದಾರೆ. ಬಂದ್​ಗೆ ಕರೆ ಕೊಟ್ಟಿದ್ದರೂ ಯಾಕಾಗಿ ವ್ಯಾಪಾರ ನಡೆಸುತ್ತಿದ್ದೀರಿ ಎಂದು ಆವಾಜ್ ಹಾಕುತ್ತಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಮತ್ತು ವರ್ತಕರ ನಡುವೆ ವಾಗ್ವಾದ ನಡೆಯುತ್ತಿದೆ. ದರ್ಪದಿಂದ ಹೇಳಿದರೆ ಬಂದ್ ಮಾಡೋದಿಲ್ಲ.. ಮನವಿ ಮಾಡಿ ಎಂದು ವ್ಯಾಪಾರಿಗಳು ತಿರುಗೇಟು ನೀಡಿದ್ದಾರೆ.

ಅದರಲ್ಲೂ ಓರ್ವ ವರ್ತಕನಂತೂ, ಯಾರದ್ದೋ ಸಾವಾಗಿದೆ..ತುರ್ತಾಗಿ ಒಂದಷ್ಟು ಸಾಮಾನು ಬೇಕು ಎಂದು ಬಂದಿದ್ದಾರೆ. ಅವರಿಗೆ ಕೊಡೋದು ತಪ್ಪಾ? ಸಮಾಧಾನದಿಂದ ಹೇಳಿ, ಹೀಗೆಲ್ಲ ಕೂಗಾಡಬೇಡಿ, ಸಮಾಧಾನದಿಂದ ಹೇಳಿದರೆ ನಾವೂ ಕ್ಲೋಸ್ ಮಾಡುತ್ತೇವೆ ಎಂದು ಖಾರವಾಗಿಯೇ ಹೇಳಿದ್ದಾರೆ.

ನಗರದಾದ್ಯಂತ ಪಾದಯಾತ್ರೆಯಲ್ಲಿ ತೆರಳಿ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸುತ್ತಿರುವ ಪ್ರತಿಭಟನಾಕಾರರನ್ನು ಪೊಲೀಸರು ಹಿಂಬಾಲಿಸುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.

ಟೌನ್ ಹಾಲ್ ಆಯ್ತು ಪ್ರತಿಭಟನೆಯ ಪವರ್ ಸೆಂಟರ್: ಒಬ್ಬರು ಅರೆಸ್ಟ್​ ಆಗ್ತಿದಂತೆ ಮತ್ತೊಂದು ಗುಂಪು ಧರಣಿಗೆ ರೆಡಿ

ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ವಿಶೇಷ ಚೇತನ ವ್ಯಕ್ತಿಯ ಪ್ರತಿಭಟನೆ

ಕರ್ನಾಟಕ ಬಂದ್: ಶಾಸಕ ಯತ್ನಾಳ್ ಅಣಕು ಶವಯಾತ್ರೆ,​ ಪ್ರತಿಕೃತಿಗೆ ಚಪ್ಪಲಿಯಲ್ಲಿ ಹೊಡೆದು ಕಿಡಿ

Published On - 10:24 am, Sat, 5 December 20

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!