ರೇಣಿಗುಂಟ(ಆಂಧ್ರಪ್ರದೇಶ): ತಿರುಪತಿ ಜಿಲ್ಲೆಯ ರೇಣಿಗುಂಟದ ಖಾಸಗಿ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಪರಿಣಾಮ ಘಟನೆಯಲ್ಲಿ ವೈದ್ಯ ಹಾಗೂ ಅವರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಡಾ.ರವಿಶಂಕರರೆಡ್ಡಿ(47) ಮತ್ತು ಅವರ ಪುತ್ರ ಸಿದ್ಧಾರ್ಥ್ ರೆಡ್ಡಿ (12), ಮಗಳು ಕಾರ್ತಿಕಾ(6) ಮೃತ ದುರ್ದೈವಿಗಳು.
ರೇಣಿಗುಂಟದ ಪಟ್ಟಣದ ಭಗತ್ ಸಿಂಗ್ ಕಾಲನಿಯಲ್ಲಿ ಡಾ.ರವಿಶಂಕರ ರೆಡ್ಡಿ ಅವರು ಆಸ್ಪತ್ರೆ ನಡೆಸುತ್ತಿದ್ದರು. ವೈದ್ಯ ದಂಪತಿ ಡಾ.ಡಾ.ರವಿಶಂಕರರೆಡ್ಡಿ ಮತ್ತು ಡಾ.ಅನಂತಲಕ್ಷ್ಮೀ ಅವರು ಮಕ್ಕಳೊಂದಿಗೆ ಆಸ್ಪತ್ರೆ ಕಟ್ಟಡದ ಮೇಲಿನ ಮಹಡಿಯಲ್ಲಿ ವಾಸವಿದ್ದರು. ಆದ್ರೆ, ದುರಂತ ಅಂದ್ರೆ ಇಂದು(ಭಾನುವಾರ) ಬೆಳಗಿನಜಾವ ಶಾರ್ಟ್ ಸರ್ಕ್ಯೂಟ್ನಿಂದ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಮನೆಯಲ್ಲಿದ್ದ ಮಕ್ಕಳನ್ನು ರಕ್ಷಿಸಲು ಹೋದ ವೈದ್ಯ ಸಜೀವ ದಹನಗೊಂಡಿದ್ದಾರೆ. ಆದ್ರೆ, ಮಕ್ಕಳಿಗೆ ಸುಟ್ಟ ಗಾಯವಾಗಿಲ್ಲವಾದರೂ ಕಾರ್ಬನ್ ಮಾನಾಕ್ಸೈಡ್ ಪರಿಣಾಮ ಕೊನೆಯುಸಿರೆಳೆದಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ರವಿಶಂಕರ್ ರೆಡ್ಡಿ ಅವರ ತಾಯಿ ಮತ್ತು ಪತ್ನಿಯನ್ನು ರಕ್ಷಿಸಿದ್ದಾರೆ. ಬೆಂಕಿ ಅವಘಡದಲ್ಲಿ ಗಾಯಗೊಂಡ ಅತ್ತೆ-ಸೊಸೆ ಇಬ್ಬರನ್ನೂ ತಿರುಪತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ