ಕೊಪ್ಪಳ: ಕೊರೊನಾವನ್ನು ನಿಯಂತ್ರಣಕ್ಕೆ ತರುವಲ್ಲಿ ಸಾಮಾಜಿಕ ಅಂತರವೇ ಪ್ರಮುಖ ಅಸ್ತ್ರವಾಗಿದ್ದು, ಜನರು ಸಹ ದಿನನಿತ್ಯದ ಓಡಾಟದ ಸಂದರ್ಭದಲ್ಲಿ ಸಾಮಾಜಿಕ ಅಂತರದ ಬಗ್ಗೆ ಹೆಚ್ಚು ಗಮನ ವಹಿಸುತ್ತಿದ್ದಾರೆ. ಹೀಗೆ ಸಾಮಾಜಿಕ ಅಂತರದ ಬಗ್ಗೆ ಕೊಪ್ಪಳದ ವೈದ್ಯರೊಬ್ಬರು ವಿಭಿನ್ನ ಐಡಿಯಾ ಒಂದನ್ನು ಕಂಡುಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕೊಪ್ಪಳ ಜಿಲ್ಲೆಯ ಕಾರಟಗಿಯ ವೈದ್ಯರೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಂಡು ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಮೂರು ಮೀಟರ್ ದೂರದಿಂದಲೇ ರೋಗಿಗಳಿಗೆ ಸ್ಟೆತಸ್ಕೋಪ್ ಮುಖಾಂತರ ಟೆಸ್ಟಿಂಗ್ ಮಾಡುತ್ತಿದ್ದು ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹಾಗೂ ವೈದ್ಯರ ಈ ವಿಭಿನ್ನ ರೀತಿಯ ಚಿಕಿತ್ಸೆ ಸಾಮಾಜಿಕ ತಾಣಗಳಲ್ಲಿ ಫುಲ್ ವೈರಲ್ ಆಗಿದೆ.