ಯಡಿಯೂರಪ್ಪ ಸರ್ಕಾರ ಮಾತ್ರವಲ್ಲ, 20 ವರ್ಷದಿಂದ ಡ್ರಗ್ಸ್ ದಂಧೆ ನಡೆಯುತ್ತಿದೆ- LRS

ಮಂಡ್ಯ:ಬೆಂಗಳೂರಿನಲ್ಲಿ ಮಾತ್ರವಲ್ಲ, ನಾಗಮಂಗಲದಲ್ಲೂ ಡ್ರಗ್ಸ್ ಸಿಗುತ್ತದೆ. ಆದರೆ ಪೊಲೀಸ್ ಇಲಾಖೆಗೆ ಮಾಹಿತಿ ತಿಳಿದಿದ್ದರೂ ಸಹ ಕಣ್ಮುಚ್ಚಿ ಕುಳಿತಿದೆ. ಇದರಿಂದಾಗಿ ಗ್ರಾಮಾಂತರ ಪ್ರದೇಶಕ್ಕೂ ಡ್ರಗ್ಸ್ ದಂಧೆ ವ್ಯಾಪಿಸುತ್ತಿದೆ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಶಾಲೆಯಿರುವ ಕಲ್ಯಾಣ ನಗರ ವಿದೇಶೀಯರ ಡ್ರಗ್ಸ್ ದಂಧೆ ಅಡ್ಡೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಡ್ರಗ್ಸ್ ದಂಧೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಲ್.ಆರ್. ಶಿವರಾಮೇಗೌಡ, ಬೆಂಗಳೂರಿನ ಕಲ್ಯಾಣ ನಗರದಲ್ಲಿ ನನ್ನದು ಸ್ಕೂಲ್ ಇದೆ. ಆ ರಸ್ತೆಯಲ್ಲಿ ನೈಜೀರಿಯ, ಸೌತ್ […]

ಯಡಿಯೂರಪ್ಪ ಸರ್ಕಾರ ಮಾತ್ರವಲ್ಲ, 20 ವರ್ಷದಿಂದ ಡ್ರಗ್ಸ್ ದಂಧೆ ನಡೆಯುತ್ತಿದೆ- LRS
ಸಾಧು ಶ್ರೀನಾಥ್​

Updated on: Sep 02, 2020 | 10:51 AM

ಮಂಡ್ಯ:ಬೆಂಗಳೂರಿನಲ್ಲಿ ಮಾತ್ರವಲ್ಲ, ನಾಗಮಂಗಲದಲ್ಲೂ ಡ್ರಗ್ಸ್ ಸಿಗುತ್ತದೆ. ಆದರೆ ಪೊಲೀಸ್ ಇಲಾಖೆಗೆ ಮಾಹಿತಿ ತಿಳಿದಿದ್ದರೂ ಸಹ ಕಣ್ಮುಚ್ಚಿ ಕುಳಿತಿದೆ. ಇದರಿಂದಾಗಿ ಗ್ರಾಮಾಂತರ ಪ್ರದೇಶಕ್ಕೂ ಡ್ರಗ್ಸ್ ದಂಧೆ ವ್ಯಾಪಿಸುತ್ತಿದೆ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಗಂಭೀರ ಆರೋಪ ಮಾಡಿದ್ದಾರೆ.

ನನ್ನ ಶಾಲೆಯಿರುವ ಕಲ್ಯಾಣ ನಗರ ವಿದೇಶೀಯರ ಡ್ರಗ್ಸ್ ದಂಧೆ ಅಡ್ಡೆ
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಡ್ರಗ್ಸ್ ದಂಧೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಲ್.ಆರ್. ಶಿವರಾಮೇಗೌಡ, ಬೆಂಗಳೂರಿನ ಕಲ್ಯಾಣ ನಗರದಲ್ಲಿ ನನ್ನದು ಸ್ಕೂಲ್ ಇದೆ. ಆ ರಸ್ತೆಯಲ್ಲಿ ನೈಜೀರಿಯ, ಸೌತ್ ಆಫ್ರಿಕಾ ಪ್ರಜೆಗಳು ಡ್ರಗ್ಸ್ ಮಾರಾಟ ಮಾಡುತ್ತಾ, ಸೇವನೆ ಮಾಡಿ ನಿಂತಿರುತ್ತಾರೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದೇವೆ. ಆದರೆ ಏನೂ ಪ್ರಯೋಜನವಾಗಿಲ್ಲ.

ಜೆಡಿಎಸ್ ಸರ್ಕಾರವಿದ್ದಾಗಲೂ ಡ್ರಗ್ಸ್ ದಂಧೆ ನಡೆಯುತ್ತಿತ್ತು..
ಯಡಿಯೂರಪ್ಪ ಸರ್ಕಾರ ಮಾತ್ರವಲ್ಲ, 20 ವರ್ಷದಿಂದ ಡ್ರಗ್ಸ್ ದಂಧೆ ನಡೆದುಕೊಂಡ ಬರ್ತಿದೆ. ಈಗ ದೊಡ್ಡ ಪ್ರಮಾಣಕ್ಕೆ ಹೋಗಿದೆ. ಜೆಡಿಎಸ್ ಸರ್ಕಾರವಿದ್ದಾಗಲೂ ಡ್ರಗ್ಸ್ ದಂಧೆ ನಡೆಯುತ್ತಿತ್ತು, ನಮ್ಮದೇ ಪಕ್ಷದ ಮುಖಂಡರು ಗಾಂಜಾ ಸೇರಿದಂತೆ ಬೇರೆ ಬೇರೆ ಚಟುವಟಿಕೆಯಿಂದ ಬಂದ ಹಣದಲ್ಲೇ ಸರ್ಕಾರ ಬೀಳಿಸುವ ಪ್ರಯತ್ನ ಮಾಡಿದ್ದರು.

ಸ್ಯಾಂಡಲ್ ವುಡ್ ಈ ಮಟ್ಟಕ್ಕೆ ಇಳಿದಿರೋದು ದುರ್ದೈವ. ಡ್ರಗ್ಸ್ ದಂಧೆ ಮಟ್ಟ ಹಾಕಲು ಸರ್ಕಾರ ವಿಫಲವಾಗಿದೆ. ಡ್ರಗ್ಸ್ ದಂಧೆಕೋರರಿಗೆ ರಾಜಕಾರಣಿಗಳ ಬೆಂಬಲವೂ ಇದೆ. ಗೋವಾ, ಶ್ರೀಲಂಕಾಕ್ಕೆ ಕರೆದೊಯ್ದು ಇಸ್ಪೀಟ್ ಆಡಿಸುತ್ತಾರೆ. ಜೊತೆಗೆ ತೋಟದ ಮನೆಯಲ್ಲಿ ರೇವಾ ಪಾರ್ಟಿ ಮಾಡುವಂತಹ ದಂಧೆ ನಡೆಯುತ್ತಿದೆ. ಇಂತಹ ಘಟನೆಗಳಿಂದ ದೂರವಾಗಬೇಕಾದ್ರೆ ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಎಲ್.ಆರ್.ಶಿವರಾಮೇಗೌಡ ಹೇಳಿದ್ದಾರೆ.

Published On - 10:50 am, Wed, 2 September 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us