ಕಲಬುರಗಿ: ಇಂದು ಬೆಳಗ್ಗೆ ತನ್ನ ಇಬ್ಬರು ಕಂದಮ್ಮಗಳನ್ನು ಸಾಯಿಸಿದ್ದ ತಂದೆ, ಇದೀಗ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಬ್ಬರು ಮಕ್ಕಳಿಗೆ ವಿಷ ನೀಡಿ ಕೊಲೆ ಮಾಡಿದ್ದ ತಂದೆ ಸಂಜೀವ್ (30) ಆತ್ಮಹತ್ಯೆ ಮಾಡಿಕೊಂಡವ. ಆತ ತೆಲಂಗಾಣ ರಾಜ್ಯದ ತಾಂಡೂರು ಪಟ್ಟಣದ ಹೊರವಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೈಲು ಹಳಿ ಮೇಲೆ ಸಂಜೀವ್ ಶವ ಪತ್ತೆಯಾಗಿದೆ.
ಬೆಳಗ್ಗೆ ಏನಾಗಿತ್ತೆಂದ್ರೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಬೈರಂಪಳ್ಳಿ ತಾಂಡಾದಲ್ಲಿ ತನ್ನ ಇಬ್ಬರು ಪುತ್ರಿಯರಿಗೆ ತಂದೆಯೇ ವಿಷ ಕುಡಿಸಿ ಸಾಯಿಸಿದ್ದ ಹೃದಯವಿದ್ರಾವಕ ಘಟನೆ ನಡೆದಿತ್ತು.
ತನ್ನ ಕಂದಮ್ಮಗಳಾದ ಪರ್ವೀನಾ(3) ಮತ್ತು ರೋಹಿತಾ(4)ರನ್ನು ಜಮೀನಿಗೆ ಕರೆದೊಯ್ದು ವಿಷ ಕುಡಿಸಿದ್ದ. ಮಿರಿಯಾಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಹೈದರಾಬಾದನಲ್ಲಿ ಕೆಲಸ ಮಾಡುತ್ತಿದ್ದ ಸಂಜೀವ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಕ್ಕಳಿಗೆ ವಿಷ ನೀಡಿರುವ ಶಂಕೆ ವ್ಯಕ್ತವಾಗಿತ್ತು.
Published On - 1:46 pm, Fri, 3 January 20