‘ಆಶಾ’ಭಾವ: ಭರವಸೆ ಈಡೇರಿಸಲು ಸಿದ್ಧ, ಪ್ರತಿಭಟನೆ ನಿಲ್ಲಿಸಿ -ಆರೋಗ್ಯ ಸಚಿವ ರಾಮುಲು

‘ಆಶಾ’ಭಾವ: ಭರವಸೆ ಈಡೇರಿಸಲು ಸಿದ್ಧ, ಪ್ರತಿಭಟನೆ ನಿಲ್ಲಿಸಿ -ಆರೋಗ್ಯ ಸಚಿವ ರಾಮುಲು

ಬೆಂಗಳೂರು: ಆಶಾ ಕಾರ್ಯಕರ್ತೆಯರ ಎಲ್ಲ ಬೇಡಿಕೆಗಳ ಬಗ್ಗೆ ಚರ್ಚಿಸಿ ಈಡೇರಿಸುತ್ತೇವೆ ಎಂದು ದೆಹಲಿಯಲ್ಲಿ ಟಿವಿ9ಗೆ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರದಿಂದ 12 ಸಾವಿರ ವೇತನ ಕೇಳಿದ್ದಾರೆ. ಈ ಸಂಬಂಧ ಅವರ ಸಂಘದ ಪದಾಧಿಕಾರಿಗಳ ಜತೆ ಚರ್ಚಿಸಿದ್ದೇನೆ ಎಂದರು.

ಪ್ರತಿಭಟನೆ ಹಿಂಪಡೆಯುವಂತೆ ಮನವಿ:
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಹಿನ್ನೆಲೆಯಲ್ಲಿ ತಕ್ಷಣ ತೆರಳಿ ಅವರ ಜತೆ ಮಾತುಕತೆ ನಡೆಸಲು ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಹಿಂಪಡೆಯಲು ಮನವಿ ಮಾಡಿದ್ದೇನೆ. ಸರ್ಕಾರ ನಿಮ್ಮ ಜತೆ ಇರುತ್ತೆ, ನೀವು ಆತಂಕಪಡುವ ಅಗತ್ಯವಿಲ್ಲ. ಎಲ್ಲ ಬೇಡಿಕೆಗಳ ಬಗ್ಗೆ ಚರ್ಚಿಸಿ ಈಡೇರಿಸುತ್ತೇವೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದ್ದೇನೆ.

Click on your DTH Provider to Add TV9 Kannada