ದುಬೈನಿಂದ ಬಂದ 30 ಜನ ಕ್ವಾರಂಟೈನ್ ಆಗದೆ ಎಸ್ಕೇಪ್, ಎಲ್ಲೆಲ್ಲಿಗೆ ಪರಾರಿಯಾದ್ರು ಗೊತ್ತಾ?
ದಕ್ಷಿಣ ಕನ್ನಡ: ದುಬೈನಿಂದ ಭಾರತಕ್ಕೆ ಹಿಂದರುಗಿದ ರಾಜ್ಯದ 30 ಜನರು ಕ್ವಾರಂಟೈನ್ ಆಗದೆ ಎಸ್ಕೇಪ್ ಆಗಿರುವ ಘಟನೆ ನೆರೆ ರಾಜ್ಯ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ತಪ್ಪಿಸಿಕೊಂಡವರು ಕೊಡಗು ಹಾಗೂ ಮಂಗಳೂರಿನತ್ತ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಕೊಡಗು ಹಾಗೂ ಮಂಗಳೂರಿನಲ್ಲಿ ಆತಂಕ ಶುರುವಾಗಿದೆ. ದುಬೈನಲ್ಲಿ ಸಿಲುಕಿಕೊಂಡಿದ್ದ 180 ಕನ್ನಡಿಗರ ತಂಡವೊಂದು ಖಾಸಗಿ ವಿಮಾನದಲ್ಲಿ ಭಾರತಕ್ಕೆ ಮೊನ್ನೆ ಬಂದಿಳಿದಿದ್ದರು. ಕರ್ನಾಟಕದಲ್ಲಿ ಲ್ಯಾಂಡ್ ಮಾಡಲು ಅನುಮತಿ ಸಿಗದ ಕಾರಣ ಕೇರಳದ ಕಣ್ಣೂರಿಗೆ ಬಂದಿಳಿದಿದ್ದರು. ವಿದೇಶದಿಂದ ಮರಳಿದವರು ಎಂಬ ಕಾರಣದಿಂದ ಅವರನ್ನು […]
ದಕ್ಷಿಣ ಕನ್ನಡ: ದುಬೈನಿಂದ ಭಾರತಕ್ಕೆ ಹಿಂದರುಗಿದ ರಾಜ್ಯದ 30 ಜನರು ಕ್ವಾರಂಟೈನ್ ಆಗದೆ ಎಸ್ಕೇಪ್ ಆಗಿರುವ ಘಟನೆ ನೆರೆ ರಾಜ್ಯ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ತಪ್ಪಿಸಿಕೊಂಡವರು ಕೊಡಗು ಹಾಗೂ ಮಂಗಳೂರಿನತ್ತ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಕೊಡಗು ಹಾಗೂ ಮಂಗಳೂರಿನಲ್ಲಿ ಆತಂಕ ಶುರುವಾಗಿದೆ.
ದುಬೈನಲ್ಲಿ ಸಿಲುಕಿಕೊಂಡಿದ್ದ 180 ಕನ್ನಡಿಗರ ತಂಡವೊಂದು ಖಾಸಗಿ ವಿಮಾನದಲ್ಲಿ ಭಾರತಕ್ಕೆ ಮೊನ್ನೆ ಬಂದಿಳಿದಿದ್ದರು. ಕರ್ನಾಟಕದಲ್ಲಿ ಲ್ಯಾಂಡ್ ಮಾಡಲು ಅನುಮತಿ ಸಿಗದ ಕಾರಣ ಕೇರಳದ ಕಣ್ಣೂರಿಗೆ ಬಂದಿಳಿದಿದ್ದರು. ವಿದೇಶದಿಂದ ಮರಳಿದವರು ಎಂಬ ಕಾರಣದಿಂದ ಅವರನ್ನು ಕಾಸರಗೋಡಿನಲ್ಲಿ ಕ್ವಾರಂಟೈನ್ ಆಗಲು ಸೂಚಿಸಲಾಗಿತ್ತು. ಆದರೆ, ಅದರಲ್ಲಿ ಕೆಲವರು ಸೇವಾ ಸಿಂಧು ಌಪ್ನಲ್ಲಿ ತಮ್ಮನ್ನು ನೋಂದಾಯಿಸಿಕೊಂಡು ಕಾಸರಗೋಡಿನಲ್ಲಿ ಕ್ವಾರಂಟೈನ್ ಆಗದೆ ಸೀದಾ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.
30 ಜನರ ಪೈಕಿ 20 ಜನ ಕೊಡಗಿಗೆ, 10 ಜನ ಮಂಗಳೂರಿಗೆ ಎಂಟ್ರಿ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಖಾಸಗಿ ವಿಮಾನದ ವ್ಯವಸ್ಥೆ ಮಾಡಿದ್ದ ಕಂಪನಿಯ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಮುಂದಾಗಿದೆ.
ಉಳಿದ ಕನ್ನಡಿಗರ ನೆರವಿಗೆ ಬಂದ ಶಾಸಕ ಖಾದರ್ ಈ ಮಧ್ಯೆ ಕೇರಳದಲ್ಲಿ ಸಿಲುಕಿಕೊಂಡಿದ್ದ ಉಳಿದ ದುಬೈ ಕನ್ನಡಿಗರ ನೆರವಿಗೆ ಶಾಸಕ ಯು.ಟಿ.ಖಾದರ್ ಮುಂದಾದರು. ಅಗತ್ಯ ಸುರಕ್ಷತೆ ಇಲ್ಲದ ಕಾರಣ ಉಳಿದ ಕನ್ನಡಿಗರು ಕಾಸರಗೋಡಿನ ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಆಗಲು ನಿರಾಕರಿಸಿದ್ದರು. ಹೀಗಾಗಿ ಮಂಗಳೂರಿಗೆ ತೆರಳುವಂತೆ ಸೂಚಿಸಿದ ಕಾಸರಗೋಡು ಜಿಲ್ಲಾಡಳಿತ ಬಸ್ಗಳ ವ್ಯವಸ್ಥೆ ಮಾಡಿತ್ತು. ಆದ್ರೆ ಕರ್ನಾಟಕಕ್ಕೆ ಬರಲು ಅನುಮತಿಯಿಲ್ಲದ ಕಾರಣ ಪರದಾಡುತ್ತಿದ್ದವರಿಗೆ ಶಾಸಕ ಖಾದರ್ ಸೂಕ್ತ ವ್ಯವಸ್ಥೆ ಕಲ್ಪಿಸಿ ಮಂಗಳೂರಿನ 3 ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಆಗಲು ಅನುಕೂಲ ಮಾಡಿಕೊಟ್ಟಿದ್ದಾರೆ.
Published On - 9:31 am, Mon, 29 June 20